ಮಮತಾ ಬ್ಯಾನರ್ಜಿಯವರೇ, ನ್ಯಾಯಾಂಗದಲ್ಲಿ ಕೇಂದ್ರ ಮೂಗು ತೂರಿಸಿದ್ದರೆ ಗೋಹತ್ಯೆ ನಿಷೇಧಕ್ಕೆ ತಡೆ ಸಿಗುತ್ತಿತೇ?
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇತ್ತೀಚೆಗೆ ಯಾವಾಗಲಾದರೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದನ್ನು ಕೇಳಿದ್ದೀರಾ?
ಇಲ್ಲ ತಾನೆ?
ನಿಮ್ಮ ಊಹೆ ನಿಜ. ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಯಾವುದೇ ಸೊಲ್ಲೆತ್ತಿಲ್ಲ. ನೋಟು ನಿಷೇಧದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಿದರು. ಆದರೆ ಜನರೇ ಮೋದಿ ಅವರ ನಿರ್ಧಾರವನ್ನು ಬೆಂಬಲಿಸಿದ ಕಾರಣ ಬ್ಯಾನರ್ಜಿ ಮಗುಮ್ಮಾದರು. ಜಿಎಸ್ ಟಿ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಹಾಗೂ ನರೇಂದ್ರ ಮೋದಿ ಅವರನ್ನು ಟೀಕಿಸಿದರು. ಆದರೂ ಜನಬೆಂಬಲ ಜಿಎಸ್ಟಿಗೇ ಇದ್ದ ಕಾರಣ ಮತ್ತೆ ಸುಮ್ಮನಾಗುವ ಸರದಿ ಬ್ಯಾನರ್ಜಿಯವರದ್ದೇ ಆಗಿತ್ತು.
ಇಷ್ಟಾದರೂ ಜಿಎಸ್ಟಿಯಿಂದ ದೇಶದ ಅರ್ಥವ್ಯವಸ್ಥೆ ಹಾಳುಗುತ್ತಿದೆ ಎಂದೇ ಬ್ಯಾನರ್ಜಿಯವರು ಕೂಗು ಹಾಕಿದರು. ಆದರೇನಾಯಿತು? ದೇಶದ ಜಿಡಿಪಿ ದರದಲ್ಲಿ ಸುಧಾರಣೆ ಕಾಣುವ ಮೂಲಕ ಬ್ಯಾನರ್ಜಿಯವರ ಆರೋಪಗಳೆಲ್ಲವೂ ಸುಳ್ಳು ಎಂಬುದನ್ನು ಸಾಬೀತುಪಡಿಸಿತು. ಕೊನೆಗೆ ಈ ಕೇಂದ್ರ ಸರಕಾರದ ಸಹವಾಸವೇ ಸಾಕು ಎಂದ ಮಮತಾ ಬ್ಯಾನರ್ಜಿ ದೀರ್ಘ ಅವಧಿಗೆ ಸುಮ್ಮನಾಗಿಬಿಟ್ಟರು.
ಆದರೆ ಶುಕ್ರವಾರ ಮತ್ತೆ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿರುದ್ಧ ಗುಟುರು ಹಾಕಿದ್ದಾರೆ.
ಆಗಿದ್ದಿಷ್ಟೇ, ಸುಪ್ರೀ ಕೋರ್ಟ್ ನ್ಯಾಯಮೂರ್ತಿಗಳಾದ ಚಲಮೇಶ್ವರ್, ಜಸ್ಟೀಸ್ ಗೊಗೊಯ್, ಜಸ್ಟಿಸ್ ಲೊಕುರ್ ಹಾಗೂ ಜಸ್ಟಿಸ್ ಕುರಿಯನ್ ಜೋಸೆಫ್ ಅವರು ಸುದ್ದಿಗೋಷ್ಠಿ ನಡೆಸಿ, ಮುಖ್ಯನ್ಯಾಯಮೂರ್ತಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಗಳ ಸಮರ್ಪಕ ವಿಚಾರಣೆ ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಆರೋಪ ಮಾಡಿದ್ದಾರೆ.
ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರ ನ್ಯಾಯಾಂಗದಲ್ಲಿ ಮೂಗು ತೂರಿಸುತ್ತಿದೆ ಎಂದು ಹೇಳುವ ಮೂಲಕ ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ.
ಹಾಗಾದರೆ ಮಮತಾ ಬ್ಯಾನರ್ಜಿಯವರು ಹೇಳುವುದರಲ್ಲಿ ಸತ್ಯವಿದೆ ಎನಿಸುತ್ತದೆಯಾ? ಅದ್ಹೇಗೆ ಸಾಧ್ಯ? ನ್ಯಾಯಾಂಗಕ್ಕೂ, ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ?
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರನ್ನು ರಾಷ್ಟ್ರಪತಿ ಆಯ್ಕೆ ಮಾಡುತ್ತಾರೆ. ದೇಶದ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ತನ್ನದೇ ಆದ ನಿಯಮಗಳಿವೆ. ನ್ಯಾಯಾಂಗದಲ್ಲಿ ಸಮಸ್ಯೆಯಾದರೆ ಅದಕ್ಕೆ ಕೇಂದ್ರ ಸರ್ಕಾರವೇ ಹೇಗೆ ಹೊಣೆಯಾಗುತ್ತದೆ. ಹಾಗೊಂದು ವೇಳೆ ಕೇಂದ್ರ ಸರ್ಕಾರ ನ್ಯಾಯಾಂಗದಲ್ಲಿ ಮಧ್ಯಸ್ಥಿಕೆ ವಹಿಸಿದ್ದರೆ, ಮೂಗು ತೂರಿಸಿದ್ದರೆ ಕೇಂದ್ರ ಸರ್ಕಾರ ಕಳೆದ ವರ್ಷದ ಮೇ 25ರಂದು ಗೋಹತ್ಯೆ ನಿಷೇಧಿಸಿ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಹಾಗೂ ಕೆಲವು ರಾಜ್ಯಗಳ ಹೈ ಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದವೇ? ಕೇಂದ್ರ ಸರ್ಕಾರವನ್ನು ತೆಗಳಬೇಕು ಎಂದರೆ ಏನು ಬೇಕಾದರೂ ಮಾತನಾಡುತ್ತಾರೆಯೇ ಮಮತಾ ಬ್ಯಾನರ್ಜಿಯವರು.
ಸುಪ್ರೀಂ ಕೊರ್ಟ್ ನ್ಯಾಯಮೂರ್ತಿಗಳು ಮಾಡಿದ ಆರೋಪ ಸಾಬೀತಾದರೆ ಈ ಕುರಿತು ವಿಚಾರಣೆ, ಪರಿಶೀಲನೆ ನಡೆಯಲಿ. ದೋಷಾರೋಪಣ ಪಟ್ಟಿ ಸಲ್ಲಿಸುವ ಮೂಲಕ ಮುಖ್ಯನ್ಯಾಯಮೂರ್ತಿಯವರನ್ನು ಕೆಳಗಿಳಿಸುವ ನಿಯಮವೂ ಇದೆ. ಆದರೆ ಇದೆಲ್ಲ ಬಿಟ್ಟು ಕೇಂದ್ರ ಸರ್ಕಾರವೇ ನ್ಯಾಯಾಂಗದಲ್ಲಿ ಮೂಗು ತೂರಿಸುತ್ತದೆ ಎಂದು ಬ್ಯಾನರ್ಜಿಯವರು ಹೇಳುವ ಮೂಲಕ ನ್ಯಾಯಾಂಗದ ಘನತೆಯನ್ನೇ ಪ್ರಶ್ನಿಸಿದ್ದಾರೆ. ನಂಜುಮಿಶ್ರಿತ ರಾಜಕೀಯ ಎಂದರೆ ಇದೇ ಇರಬೇಕು. ಹಾಗನಿಸುವುದಿಲ್ಲವೇ?
Leave A Reply