• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಕೋರ್ಟ್ ರೋಡ್ ಕಾಮಗಾರಿ ಮುಗಿಯಲು ಇನ್ನೆಷ್ಟು ವರ್ಷ ಬೇಕು ಶಾಸಕರೇ?

Hanumantha Kamath Posted On January 15, 2018


  • Share On Facebook
  • Tweet It

ಕರ್ನಾಟಕ ವಿಧಾನಸಭೆಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಹಿತ ಎಲ್ಲಾ ಮಂತ್ರಿಮಹೋದಯರು ಹೇಳುವುದು ಒಂದೇ ಮಾತು, ತಮ್ಮ ಕ್ಷೇತ್ರಕ್ಕೆ ಅಷ್ಟು ಕೋಟಿ ತಂದಿದ್ದೇವೆ, ಇಷ್ಟು ಕೋಟಿ ತಂದಿದ್ದೇವೆ. ಅದರಲ್ಲಿ ನಮ್ಮ ಮಂಗಳೂರು ನಗರ ದಕ್ಷಿಣ ಶಾಸಕರಾದ ಜೆ ಆರ್ ಲೋಬೋ ಅವರು ಕೂಡ ಹಿಂದೆ ಬಿದ್ದಿಲ್ಲ. ಅವರು ಯಾವ ವಿಷಯ ತೆಗೆದರೂ ಆ ಕಾಮಗಾರಿ ಇಷ್ಟು ಕೋಟಿ, ಇಷ್ಟು ಕೋಟಿ ಕೊಟ್ಟಿದ್ದೇನೆ ಎನ್ನುತ್ತಾರೆ. ಆದರೆ ಮಂಗಳೂರಿನ ಹೃದಯಭಾಗದಲ್ಲಿರುವ ರಸ್ತೆಯೊಂದು ಕಳೆದ ಎರಡು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ನಿತ್ಯ ಸಾವಿರಾರು ಜನರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಆ ಬಗ್ಗೆ ಆ ರಸ್ತೆಯನ್ನು ಅವಲಂಬಿಸುತ್ತಿರುವವರು ಬೇಸರ ವ್ಯಕ್ತಪಡಿಸುತ್ತಾರೆ. ಎಲ್ಲೆಲ್ಲೋ ಮತಬ್ಯಾಂಕ್ ಗೋಸ್ಕರ ಕಾಮಗಾರಿ ಮಾಡಿ ಅಲ್ಲಿನ ಸ್ಥಳೀಯ ಜನರ ವೋಟಿನ ಮೇಲೆ ಕಣ್ಣಿಡುವುದು ಬೇರೆ. ಅದರಿಂದ ಜನಪ್ರತಿನಿಧಿಗಳಿಗೆ ನೇರ ಲಾಭವಾಗುವುದು ಇದೆ. ಆದರೆ ಒಂದು ರಸ್ತೆಯಿಂದ ವೋಟ್ ಸಿಗುತ್ತದೆಯೋ, ಬಿಡುತ್ತದೆಯೋ ಅದನ್ನು ಮಾದರಿ ರಸ್ತೆಯನ್ನಾಗಿ ಮಾಡಿ ಊರಿನ ಶೋಭೆ ಹೆಚ್ಚಿಸುವುದಿದೆಯಲ್ಲ, ಅದನ್ನು ಜನ ಮೆಚ್ಚುವುದು. ಆದ್ದರಿಂದ ಕೋರ್ಟ್ ರಸ್ತೆ ವೋಟ್ ತರುವುದಿಲ್ಲ ಎಂದು ಶಾಸಕರು ಅದನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರಾ?

ಯಾವ ರಸ್ತೆ ಎರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ?
ನೀವು ಬಲ್ಮಠ, ಹಂಪನಕಟ್ಟೆ, ಜ್ಯೋತಿ, ಬಂಟ್ಸ್ ಹಾಸ್ಟೆಲ್, ನಂತೂರು, ಮಲ್ಲಿಕಟ್ಟೆಯ ಕಡೆಯಿಂದ ಮಂಗಳೂರು ನ್ಯಾಯಾಲಯಕ್ಕೆ ಬರುವವರಾದರೆ ನೀವು ಕರಂಗಲಪಾಡಿಯಿಂದ ಮುಂದೆ ಬಂದ ತಕ್ಷಣ ಎಲೋಶಿಯಸ್ ಶಾಲೆಯ ಎದುರಿನಿಂದ ಕೆಲವೇ ಹೆಜ್ಜೆಗಳ ಬಳಿಕ ಒಂದು ರಸ್ತೆ ನ್ಯಾಯಾಲಯದ ಕಡೆ ಸಾಗುತ್ತದೆ. ಈ ರಸ್ತೆಯನ್ನು ಎರಡು ವರ್ಷಗಳಿಂದ ಬಂದ್ ಮಾಡಲಾಗಿದೆ. ಕಾರಣ ರಸ್ತೆಗೆ ಕಾಂಕ್ರೀಟಿಕರಣ ಮಾಡುತ್ತೇವೆ ಎಂದು ಶಾಸಕ ಜೆ ಆರ್ ಲೋಬೊ ಹಾಗೂ ಸ್ಥಳೀಯ ಮನಪಾ ಸದಸ್ಯ ಎಸಿ ವಿನಯರಾಜ್ ಎದೆತಟ್ಟಿ ಹೇಳಿ ನ್ಯಾಯವಾದಿಗಳಿಂದ ಶಹಭಾಷ್ ಗಿಟ್ಟಿಸಿಕೊಂಡರು. ಒಂದು ವರ್ಷದ ನಂತರ ನೋಡ್ತಾ ಇರಿ, ಕೋರ್ಟಿಗೆ ಬರುವವರಿಗೆ ಈ ರಸ್ತೆಯ ಮೇಲೆ ಹೋಗುವುದೇ ಒಂದು ಖುಷಿ ಎನ್ನುವ ಆಕಾಶದ ನಕ್ಷತ್ರಗಳನ್ನು ತೋರಿಸಲಾಯಿತು. ಅದರ ನಂತರ ಈಗ ಎರಡು ವರ್ಷಗಳಾಗುತ್ತಿವೆ. ರಸ್ತೆಯ ಮೇಲೆ ಹೋಗುವುದು ಬಿಡಿ, ರಸ್ತೆಯ ಎರಡು ಕಡೆ ಹಾಕಿರುವ ಕಬ್ಬಿಣದ ಗೇಟುಗಳನ್ನು ಅಲ್ಲಾಡಿಸುವುದಕ್ಕೂ ಸಾಧ್ಯವಿಲ್ಲವಾಗಿದೆ. ಸದ್ಯ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ನೋಡಿದರೆ ಇನ್ನೆಷ್ಟು ತಿಂಗಳು ಅಥವಾ ವರ್ಷ ಬೇಕಾಗುತ್ತದೆ ಎನ್ನುವ ಅಂದಾಜು ಅಲ್ಲಿನ ಯಾರಿಗೂ ಇಲ್ಲ. ಪ್ರಮುಖ ರಸ್ತೆಯೊಂದು ಹೀಗೆ ವರ್ಷಗಟ್ಟಲೆ ಬಂದ್ ಆದರೆ ಅದನ್ನು ಕೇಳುವವರು ಯಾರೂ ಇಲ್ವಾ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲವಾ?

ಯಾಕೆ ಆ ರಸ್ತೆಗೆ ಅಷ್ಟು ಮಹತ್ವ?
ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆಯೊಂದು ವರ್ಷಗಟ್ಟಲೆ ಬಂದ್ ಆಗಿದ್ದರೆ ಅದರಿಂದಾಗುವ ಸಮಸ್ಯೆ ಏನು ಎಂಬುದು ಆ ನ್ಯಾಯಾಲಯಕ್ಕೆ ನಿತ್ಯ ಬಂದು ಹೋಗುವವರಿಗೆ ಗೊತ್ತು. ನಿತ್ಯ ಕೋರ್ಟಿನ ನೂರಾರು ಸಿಬ್ಬಂದಿಗಳು ಮತ್ತು ನ್ಯಾಯಾಧೀಶರು, ಸಾವಿರಾರು ನ್ಯಾಯವಾದಿಗಳು, ಅವರ ಅಸಂಖ್ಯಾತ ಕಕ್ಷಿದಾರರು, ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳು, ಪೊಲೀಸರು, ಕೈದಿಗಳು, ಸಾರ್ವಜನಿಕರು ಆ ರಸ್ತೆಯನ್ನು ಬಳಸಬೇಕಾಗುತ್ತದೆ. ಆ ರಸ್ತೆ ಬೆಳಿಗ್ಗೆಯಿಂದ ಸಂಜೆ ತನಕ ಬಿಝಿ ಇರುವಂತಹ ರಸ್ತೆ. ಆದರೆ ಕಳೆದ ಎರಡು ವರ್ಷಗಳಿಂದ ಆ ರಸ್ತೆಯ ಮೇಲೆ ಒಂದು ಸೈಕಲ್ ಕೂಡ ಹೋಗುತ್ತಿಲ್ಲ. ಇದರಿಂದ ಎಲ್ಲರೂ ಮತ್ತೊಂದು ಅಗಲಕಿರಿದಾದ ರಸ್ತೆಯನ್ನು ಬಳಸಿ ಕೋರ್ಟಿಗೆ ಹೋಗುತ್ತಿದ್ದಾರೆ.

ಪರ್ಯಾಯ ರಸ್ತೆಯ ಅವಸ್ಥೆ ಹೇಗಿದೆ?
ಈಗ ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬರು ಕೂಡ ಕೊಡಿಯಾಲ್ ಬೈಲಿನ ಬಿಷಪ್ ಹೌಸ್ ಪಕ್ಕದಲ್ಲಿರುವ ರಸ್ತೆಯನ್ನು ಬಳಸಿ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ಆ ರಸ್ತೆಯಲ್ಲಿ ಒಂದು ಹಾಸ್ಟೆಲ್, ಕಾಲೇಜಿನ ದ್ವಾರ ಮತ್ತು ಮನೆಗಳು ಇವೆ. ಆ ರಸ್ತೆ ತುಂಬಾ ಅಗಲಕಿರಿದಾಗಿದ್ದು, ಒಂದು ವಾಹನ ನ್ಯಾಯಾಲಯದಿಂದ ಕೆಳಗೆ ಬರುವಾಗ ಮತ್ತೊಂದು ವಾಹನ ಕೆಳಗಿನಿಂದ ಮೇಲಕ್ಕೆ ಹೋಗಲು ಕಷ್ಟಸಾಧ್ಯ. ಅಂತಹ ಸಂದರ್ಭದಲ್ಲಿ ಬ್ಲಾಕ್ ಗ್ಯಾರಂಟಿ. ಒಂದು ವಾಹನ ಬ್ಲಾಕ್ ಆದರೆ ಮೇಲಿನಿಂದ ಕೆಳಗಿನ ತನಕ ಎಲ್ಲಾ ವಾಹನಗಳು ಬ್ಲಾಕ್. ದಕ್ಷಿಣ ಕನ್ನಡದ ಜನರಿಗೆ ನಮ್ಮ ನ್ಯಾಯಾಲಯ ಕಟ್ಟಡಗಳು ಗುಡ್ಡದ ಮೇಲಿರುವುದು ಎನ್ನುವುದು ಗೊತ್ತಿದೆ. ಆದ್ದರಿಂದ ಈ ಪರ್ಯಾಯ ರಸ್ತೆಯ ಅವಸ್ಥೆ ಕೂಡ ಗೊತ್ತಿರುತ್ತದೆ. ಹಾಗಿರುವಾಗ ಒಂದು ರಸ್ತೆಯನ್ನು ಅನಿವಾರ್ಯವಾಗಿ ಕಳೆದ ಎರಡು ವರ್ಷಗಳಿಂದ ಬಂದ್ ಮಾಡಿದ ಕಾರಣ ನಾನು ಮೇಲೆ ಹೇಳಿದ ಎಲ್ಲಾ ಜಾಗಗಳಿಂದ ಬರುವ ನಾಗರಿಕರು ಮತ್ತು ಅವರ ವಾಹನಗಳು ಕರಂಗಲಪಾಡಿಯಿಂದ ಮುಂದೆ ಹೋಗಿ ಒಂದು ಸಿಗ್ನಲ್ ನಲ್ಲಿ ಕಾದು ನಂತರ ಮುಂದೆ ಒಂದು ಸರ್ಕಲ್ ದಾಟಿ ನಂತರ ಬಿಷಪ್ ಹೌಸ್ ಬಳಿ ಲೆಫ್ಟ್ ತೆಗೆದು ಮೇಲೆ ಹೋಗಬೇಕು. ಇದರಿಂದ ಸಮಯ ವ್ಯರ್ಥ ಹಾಗೂ ಅನಾವಶ್ಯಕವಾಗಿ ಹೆಚ್ಚಿನ ವಾಹನಗಳು ಸುತ್ತಿ ಬಳಸಿ ಹೋಗುವುದರಿಂದ ರಸ್ತೆ ಬ್ಲಾಕ್ ಆಗುತ್ತದೆ.

ವಕೀಲರು ಯಾಕೆ ಧ್ವನಿ ಎತ್ತಲ್ವಾ?
ಕಳೆದ ಬಾರಿ ಲೋಕಾಯುಕ್ತ ನ್ಯಾಯಮೂರ್ತಿ ಎಚ್. ವಿಶ್ವನಾಥ್ ಶೆಟ್ಟಿಯವರು ನ್ಯಾಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ತಮ್ಮ ಮಾತಿನ ನಡುವೆ ಈ ವಿಷಯವನ್ನು ಉಲ್ಲೇಖಿಸಿ ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಂಡು ರಸ್ತೆಯನ್ನು ಆದಷ್ಟು ಬೇಗ ಸಾರ್ವಜನಿಕರಿಗೆ ಬಿಟ್ಟುಕೊಡಬೇಕು ಎಂದು ಕಿವಿ ಮಾತು ಹೇಳಿದ್ದರು. ಇಷ್ಟಾದ ನಂತರವೂ ರಸ್ತೆಯ ಕೆಲಸ ತೆವಳಿಕೊಂಡು ಸಾಗುತ್ತಿದೆ. ಕೇಳಿದರೆ ಕಾರ್ಪೋರೇಟರ್ ತಾಂತ್ರಿಕ ಕಾರಣ ಎನ್ನುತ್ತಾರೆ. ಒಂದು ಕಾಮಗಾರಿ “ಕೈ”ಗೆ ಎತ್ತಿಕೊಳ್ಳುವಾಗ ಅದರ ಎಲ್ಲ ವಿಷಯ ಸಮಗ್ರವಾಗಿ ಅಧ್ಯಯನ ಮಾಡಿ ನಂತರ ಈ ಕಾಮಗಾರಿ ಒಂದು ವರ್ಷದ ಒಳಗೆ ಮುಗಿಯುತ್ತೆ ಎಂದು ಎಸ್ಟಿಮೇಟ್ ಹಾಕಿಯೇ ಪ್ರಾರಂಭಿಸುವುದು. ಆದರೆ ಒಂದು ವರ್ಷದ ಕಾಮಗಾರಿ ಮೂರು ವರ್ಷ ಆಗುವುದಾದರೆ ಅದಕ್ಕೆ ಏನು ಕಾರಣ ಹೇಳಿ ಶಾಸಕರೇ? ಜನರ ಸಮಸ್ಯೆಗೆ ಪರಿಹಾರ ಹೇಳುತ್ತೀರಾ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search