• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಅಧಿಕಾರಿಗೆ ಗಾಡ್ ಫಾದರ್ ಯಾರು?

Hanumantha Kamath Posted On January 24, 2018


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಚುನಾವಣಾ ವಿಭಾಗ ಎನ್ನುವ ಕಚೇರಿ ಇದೆ. ಅಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸುವುದು, ತಿದ್ದುಪಡಿ ಮಾಡುವುದು ಮತ್ತು ಡಿಲಿಟ್ ಅಂದರೆ ಅಳಿಸುವುದು ಎಲ್ಲಾ ಮಾಡುವ ಅವಕಾಶ ಇದೆ. ಇಲ್ಲಿ ನಾಲ್ಕು ಜನ ಕೆಲಸಕ್ಕೆ ಇದ್ದಾರೆ. ಅದರಲ್ಲಿ ಮೂವರು ದ್ವೀತಿಯ ದರ್ಜೆಯ ಸಹಾಯಕ ಸಿಬ್ಬಂದಿಗಳು. ಒಬ್ಬರು ಚುನಾವಣಾ ನೋಂದಾವಣಿ ಅಧಿಕಾರಿ. ಇತ್ತೀಚೆಗೆ ಆ ನೋಂದಾವಣಿ ಅಧಿಕಾರಿಯನ್ನು ಮಂಗಳೂರಿನಲ್ಲಿರುವ ಕೈಗಾರಿಕಾ ಇಲಾಖೆಯ ಕಚೇರಿಗೆ ವರ್ಗಾವಣೆ ಮಾಡಿಸಿ ಅಲ್ಲಿಂದ ಒಬ್ಬರನ್ನು ಈ ಹುದ್ದೆಗೆ ತರುವ ಆದೇಶ ಹೊರಡಿಸಲಾಗಿತ್ತು. ಆದರೆ ಕೈಗಾರಿಕಾ ಇಲಾಖೆ ಕಚೇರಿಯಿಂದ ಇಲ್ಲಿಗೆ ಬರಲು ಸೂಚಿಸಿದಂತಹ ವ್ಯಕ್ತಿ ಬರಲು ಅಸಮ್ಮತಿಸಿದರು.

ಒಬ್ಬ ಸರಕಾರಿ ಅಧಿಕಾರಿಗೆ ಒಂದು ಜವಾಬ್ದಾರಿ ಕೊಟ್ಟಾಗ ಅವನು ಹೋಗುವುದಿಲ್ಲ ಎಂದರೆ ಏನರ್ಥ? ಕೈಗಾರಿಕಾ ಇಲಾಖೆಯ ಅಧಿಕಾರಿ ತಮ್ಮ ಹುದ್ದೆ ಹೆಚ್ಚು “ಲಾಭ”ಕರವಾಗಿದೆ ಎಂದು ಬಿಟ್ಟು ಹೋಗಲು ಒಪ್ಪದೇ ಇದ್ದದ್ದು ಇನ್ಯಾರಿಗೊ “ಲಾಭ”ಕರವಾಗಿ ಪರಿಣಮಿಸಿತು. ಇದೇ ಅವಕಾಶವನ್ನು ಬಳಸಿಕೊಂಡ ಯಾರೋ ಮಹಾನುಭಾವರು ಪಾಲಿಕೆಯ ಸುರತ್ಕಲ್ ಉಪಕಚೇರಿಯಲ್ಲಿರುವ ಸಹಾಯಕ ಕಂದಾಯ ಅಧಿಕಾರಿ ಮೊಹಮ್ಮದ್ ಅವರಿಗೆ ಹೆಚ್ಚುವರಿ ಹೊಣೆ ಕೊಡಿಸಿ ಪಾಲಿಕೆಯ ಚುನಾವಣಾ ವಿಭಾಗಕ್ಕೆ ತಂದರು. ಇದು ಕಾಂಗ್ರೆಸ್ಸಿಗೆ ಹೊಡೆದ ದೊಡ್ಡ ಜಾಕ್ ಪಾಟ್. ಆವತ್ತಿನಿಂದ ಮತದಾರರ ಪಟ್ಟಿಗೆ ಅಕ್ರಮ ಹೆಸರುಗಳು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯುವ ರಭಸದಂತೆ ಸೇರ್ಪಡೆಗೊಳ್ಳುತ್ತಾ ಹೋದವು. ಇದು ಪಾಲಿಕೆಯಲ್ಲಿದ್ದ ಕೆಲವು ಭಾರತೀಯ ಜನತಾ ಪಾರ್ಟಿಯ ಸದಸ್ಯರಿಗೆ ಗೊತ್ತಿದ್ದರೂ ಅವರ ದಿವ್ಯ ಮೌನ ಅಕ್ರಮ ಮಾಡುವವರಿಗೆ ಇನ್ನಷ್ಟು ಉತ್ತೇಜನ ನೀಡಿದಂತೆ ಆಯಿತು. ನೀವು ಮಾಡುತ್ತಿರುವುದು ತಪ್ಪು, ಕಾನೂನು ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳುವವರು ಯಾರು ಇರುವುದಿಲ್ಲವೋ ಆಗ ಮೊಹಮ್ಮದ್ ಯಾರ ಆರ್ಶೀವಾದದಿಂದ ಆ ಸೀಟಿಗೆ ಕೂತಿದ್ದರೋ ಅವರ ಪರವಾಗಿ ಅಕ್ರಮವಾಗಿ ಮತದಾರರನ್ನು ಸೇರಿಸುತ್ತಾ ಹೋದರು. ಮೊಹಮ್ಮದ್ ಅವರಿಗೆ ಸರಿಯಾಗಿ ನೋಡಿದರೆ ಇದು ಪೂರ್ಣಾವಧಿ ಹುದ್ದೆ ಅಲ್ಲ. ಆದರೆ ಅವರು ತಮ್ಮ ಪೂರ್ಣವಾದ “ಶ್ರಮ”ವನ್ನು ಇದರಲ್ಲಿ ಹಾಕಿದರು.

ಮೊನ್ನೆ ದಾಳಿ ಮಾಡುವಾಗ ಏನು ಸಿಕ್ಕಿತು!

ಮೊನ್ನೆ ಒಂದು ಚೀಲದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸುಮಾರು 1050 (ಫಾರಂ-6) ಫಾರಂ ಹೊಂದಿರುವ ಒಂದು ಗಂಟು ಈ ಚುನಾವಣಾ ವಿಭಾಗಕ್ಕೆ ಬಂದು ಕುಳಿತಿತ್ತು. ಅದನ್ನು ಎಲ್ಲಿ ಇಡಲಾಗಿತ್ತು ಎಂದರೆ ಈ ನೊಂದಾವಣೆ ಫಾರಂ-6 ಅನ್ನು ತುಂಬಿಸಿ ಫೋಟೋ ಅಂಟಿಸಿ ಕೊಡಲು ಬರುವ ಸಾರ್ವಜನಿಕರಿಂದ ಫಾರಂ ತೆಗೆದುಕೊಳ್ಳುತ್ತಾರಲ್ಲ, ಆ ಸಿಬ್ಬಂದಿ ಕುಳಿತುಕೊಳ್ಳುವ ಜಾಗದ ಪಕ್ಕದಲ್ಲಿ ಇಡಲಾಗಿತ್ತು. ಇದು ಬಿಜೆಪಿಯ ಕೆಲವು ಕಾರ್ಯಕರ್ತರಿಗೆ ಗೊತ್ತಾದ ಕೂಡಲೇ ಅವರು ಅಲ್ಲಿ ತಕ್ಷಣ ತಮ್ಮ ಮೊಬೈಲ್ ಕ್ಯಾಮೆರಾ ಹಿಡಿದೇ ಒಳಪ್ರವೇಶಿಸಿದರು. ಆ ಫಾರಂ-6 ತುಂಬಿದ ಚೀಲವನ್ನು ತೆರೆದು ನೋಡಿದರೆ ಅದರಲ್ಲಿ ಪದವು-ಶಕ್ತಿನಗರದ ಸಿಟಿ ಹಾಸ್ಟೆಲ್ ನ ಸ್ಟೂಡೆಂಟ್ಸ್ ನವರ ನೊಂದಾವಣೆ ಮಾಡಬೇಕಾದ ಫಾರಂಗಳು. ಅಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕಾರಿ ಮೊಹಮ್ಮದ್ ಅವರಿಗೆ ಕೇಳಿದರೆ ಅವರು ತನಗೆ ಗೊತ್ತಿಲ್ಲ ಎನ್ನುವ ಉತ್ತರ ಕೊಟ್ಟರು. ಇದು ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಒಬ್ಬ ಅಧಿಕಾರಿ ತನ್ನ ವಿಭಾಗದಲ್ಲಿ ಅಕ್ರಮವಾಗಿ ಸಿಕ್ಕಿದ ಚೀಲದಲ್ಲಿರುವ ಫಾರಂಗಳ ಬಗ್ಗೆ ಕೇಳಿದರೆ ಗೊತ್ತಿಲ್ಲ ಎಂದರೆ ಅದಕ್ಕಿಂತ ಬೇಜವಾಬ್ದಾರಿ ಮತ್ತು ಸುಳ್ಳು ಬೇರೆ ಇದೆಯಾ?

ಪಾಲಿಕೆಯ ಚುನಾವಣಾ ವಿಭಾಗದಲ್ಲಿ ನಡೆದ ಅಕ್ರಮ ಏನು?

ಹದಿನೆಂಟು ವರ್ಷ ತುಂಬಿದ ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಮತದಾನ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಹಾಗಂತ ಹದಿನೆಂಟು ತುಂಬಿದೆ ಎಂದು ಚುನಾವಣಾ ದಿನದಂದು ಮತದಾನ ಕೇಂದ್ರಕ್ಕೆ ಹೋಗಿ ವೋಟ್ ಹಾಕಲು ಆಗುವುದಿಲ್ಲ. ಮತದಾನ ಮಾಡುವ ವ್ಯಕ್ತಿ ತನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಮೊದಲು ನೊಂದಾಯಿಸಬೇಕು. ಅದಕ್ಕಾಗಿ ಆತ ಫಾರಂ-6 ತೆಗೆದುಕೊಂಡು ಅದನ್ನು ಭರ್ಥಿ ಮಾಡಿ ಫೋಟೋ ಅಂಟಿಸಿ ಕೊಡಬೇಕು. ಅದರ ನಂತರ ಮತದಾರರ ಗುರುತು ಚೀಟಿ ಆ ವ್ಯಕ್ತಿಗೆ ಕೊಡಲಾಗುತ್ತದೆ. ಅದೇ ಪ್ರಕಾರ ಒಬ್ಬ ನಾಗರಿಕ ಎರಡು ಕಡೆ ತನ್ನ ಹೆಸರನ್ನು ನೊಂದಾಯಿಸುವಂತಿಲ್ಲ. ಉದಾಹರಣೆಗೆ ಕೇರಳದಲ್ಲಿ ಮತದಾನ ಮಾಡುವ ವ್ಯಕ್ತಿ ಮಂಗಳೂರಿಗೆ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಲ್ಲೊಂದು ಮತದಾರರ ಚೀಟಿಗೆ ಅರ್ಜಿ ಹಾಕುವಂತಿಲ್ಲ. ಒಂದು ವೇಳೆ ಇಲ್ಲಿ ಮತದಾನ ಮಾಡಬೇಕು ಎಂದಾದಲ್ಲಿ ಮೊದಲಿಗೆ ತನ್ನ ಹಳೆಕ್ಷೇತ್ರದಲ್ಲಿ ಫಾರಂ-7 ಕೊಟ್ಟು ಅಲ್ಲಿ ಅವರು ಕೊಟ್ಟ ಸ್ಲೀಪ್ ಒಂದನ್ನು ಹೊಸ ಫಾರಂ-6 ಕ್ಕೆ ಏಟೆಚ್ಡ್ ಮಾಡಿ ನಂತರ ಇಲ್ಲಿ ಕೊಡಬೇಕು. ಅದರರ್ಥ ಅಲ್ಲಿ ಹೆಸರು ತೆಗೆಯಲು ಪ್ರಕ್ರಿಯೆ ನಡೆಯುತ್ತಿದೆ, ಇಲ್ಲಿ ಸೇರಿಸಬಹುದು. ಆದರೆ ಮೊನ್ನೆ ಪಾಲಿಕೆಯ ಚುನಾವಣಾ ಕಚೇರಿಯಲ್ಲಿ ಅಕ್ರಮವಾಗಿ ಸಿಕ್ಕಿದ 1050 ಫಾರಂಗಳಲ್ಲಿ ತಮ್ಮ ಹಿಂದಿನ ಊರಿನ ಯಾವುದೇ ಸ್ಲೀಪ್ ಇಲ್ಲ. ಅಂದರೆ ಅಲ್ಲಿ ಕೂಡ ವೋಟ್ ಹಾಕುತ್ತೇವೆ, ಇಲ್ಲಿ ಯಾರದ್ದೋ ಮಸಲತ್ತಿನಿಂದ ಮತ್ತೊಂದು ವೋಟ್ ಹಾಕಿ ಅವರನ್ನು ಗೆಲ್ಲಿಸುತ್ತೇವೆ ಎನ್ನುವ ಐಡಿಯಾ.

ಹಿಂದೆ ಹೀಗೆ ಆಗಿತ್ತು!

ಈ ಬಾರಿ ಇದು ಮೊದಲೇ ಗೊತ್ತಾದ ಕಾರಣ ಅಕ್ರಮ ಬಹಿರಂಗವಾಗಿದೆ. ಕಳೆದ ಬಾರಿ ಪಾಲಿಕೆಯ ಚುನಾವಣಾ ದಿನದಂದು ಪೋರ್ಟ್ ವಾರ್ಡ್ ಮತ್ತು ಕಂಟೋನ್ಮೆಂಟ್ ವಾರ್ಡ್ ಗಳ ಮತದಾನ ಕೇಂದ್ರದಲ್ಲಿ ಇಂತಹ ಹಾಸ್ಟೆಲ್ ಗಳ ಅಕ್ರಮ ಹೆಸರುಗಳು ಪತ್ತೆಯಾಗಿ ಬೇರೆ ಬೇರೆ ಪಕ್ಷಗಳ ಬೂತ್ ಪ್ರತಿನಿಧಿಗಳ ನಡುವೆ ಮತಿನ ಚಕಮಕಿ ಕೂಡ ನಡೆದಿತ್ತು.

ಈಗ ಪಾಲಿಕೆಯ ಚುನಾವಣಾ ವಿಭಾಗದಲ್ಲಿ ಪತ್ತೆಯಾಗಿರುವ ಫಾರಂಗಳಲ್ಲಿ ಹೆಸರಿರುವ ವಿದ್ಯಾರ್ಥಿಗಳು ತಮ್ಮ ಪಕ್ಕದ ಯಾವ ರಾಜ್ಯದವರು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಬಿಜೆಪಿ ಕಾರ್ಯಕರ್ತರೇ ಹಿಡಿದು ಕೊಟ್ಟಿರುವುದರಿಂದ ಅವರು ಯಾವ ಪಕ್ಷದವರು ಎಂದೂ ಪುನ: ಹೇಳಬೇಕಾಗಿಲ್ಲ. ನಾನು ಹೇಳುವುದಿಷ್ಟೇ, ಒಬ್ಬ ಜನಪ್ರತಿನಿಧಿ ತನ್ನ ಐದು ವರ್ಷದ ಕೆಲಸ ಮತ್ತು ಪಕ್ಷದ ಸಿದ್ಧಾಂತವನ್ನು ಮುಂದಿಟ್ಟು ಚುನಾವಣೆಗೆ ಹೋಗಬೇಕು. ಮಂಗಳೂರು ನಗರ ದಕ್ಷಿಣದಲ್ಲಿ ತುಂಬಾ ಜನಪರ ಕೆಲಸ ಆಗಿದೆ ಎಂದಾದರೆ ಇಂತಹ ಅಡ್ಡದಾರಿ ಹಿಡಿಯುವ ಅಗತ್ಯ ಯಾರಿಗೂ ಬರವುದಿಲ್ಲ. ಬಹುಶ: ಸೋಲಿನ ಭೀತಿ ಇಂತದ್ದನ್ನು ಮಾಡಿಸುತ್ತೀರಬಹುದು. ಚುನಾವಣಾ ವಿಭಾಗದ ಮೊಹಮ್ಮದ್ ಅವರನ್ನು ತನಿಖೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತೆ ಗಾಯತ್ರಿ ನಾಯಕ್ ತುಂಬಾ ಕಟ್ಟುನಿಟ್ಟಿನ ಅಧಿಕಾರಿ. ಅವರು ತನಿಖೆ ಮಾಡಿದರೆ ಸತ್ಯ ಹೊರಗೆ ಬರುತ್ತದೆ. ಆದರೆ ಅವರಿಗೆ ಸ್ವತಂತ್ರವಾಗಿ ತನಿಖೆ ಮಾಡಲು ಅವಕಾಶ ಸಿಗುತ್ತಾ ಎನ್ನುವುದು ಸದ್ಯದ ಪ್ರಶ್ನೆ.

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Hanumantha Kamath March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search