ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆಯನ್ನು ಕಂಡೀರಾ?
ಸುರತ್ಕಲ್ ಸಮೀಪ ಅಪರೂಪದ ಘಟನೆ
ಮಂಗಳೂರಿನ ಹೊರವಲಯದ ಸುರತ್ಕಲ್ ನಲ್ಲಿ ಅಪರೂಪದಲ್ಲಿ ಅಪರೂಪವಾದ ಒಂದು ಘಟನೆ ನಡೆದಿದೆ. ಆದರೆ ಈ ಘಟನೆ ಮಾತ್ರ ಸಕರಾತ್ಮಕ ಎನ್ನುವುದು ವಿಶೇಷ. ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ಕುಲಾಲ್ ಭವನದ ಎದುರು ಗಣಪತಿ ಮಯ್ಯ ಎನ್ನುವವರ ಮನೆಯ ಕೊಟ್ಟಿಗೆಯಲ್ಲಿ ದನ ಅವಳಿ ಕರುಗಳಿಗೆ ಜನ್ಮ ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೆ ಕೆಡವಿದೆ.
ಸಾಮಾನ್ಯವಾಗಿ ದನ ಏಕಕಾಲಕ್ಕೆ ಎರಡು ಕರುಗಳಿಗೆ ಜನ್ಮ ಕೊಡುವುದಿಲ್ಲ. ಆದರೆ ಜುಲೈ 9 ರಂದು ಬೆಳಿಗ್ಗೆ ಗಣಪತಿ ಮಯೂರ್ ಅವರು ತಮ್ಮ ಮನೆಯ ಕೊಟ್ಟಿಗೆಗೆ ಬೆಳಿಗ್ಗೆ 6 ಗಂಟೆಗೆ ಹೋಗುವಾಗ ಅವರ ಗೋ ಗೌರಿ ಮೊದಲ ಗಂಡು ಕರುವಿಗೆ ಜನ್ಮ ನೀಡಿದ್ದಳು. ಅಲ್ಲಿಗೆ ಸುಸೂತ್ರವಾಗಿ ಹೆರಿಗೆ ಆಯಿತಲ್ಲ ಎಂದು ಮನೆಯವರೆಲ್ಲಾ ಸಂತಸ ಪಡುತ್ತಿರುವಾಗ ಮತ್ತೊಂದು ಅಚ್ಚರಿ ಅವರನ್ನು ಕಾಯುತ್ತಿತ್ತು. ಸುಮಾರು ಏಳು ಗಂಟೆಯ ಹೊತ್ತಿಗೆ ಗೌರಿ ಮತ್ತೊಂದು ಕರುವಿಗೆ ಜನ್ಮ ನೀಡಿದ್ದಳು. ಈ ವಿಸ್ಮಯದಿಂದ ಎಲ್ಲರೂ ಮೂಕವಿಸ್ಮಿತರಾಗಿ ಹೋಗಿದ್ದರು.
ಸ್ವತ: ಚುಚ್ಚುಮದ್ದು ನೀಡಿ ದನದ ಚಿಕಿತ್ಸೆ ಮಾಡಿದ ವೈದ್ಯರಿಗೂ ಆಶ್ಚರ್ಯವಾಗಿದೆ.
ಈ ಸುದ್ದಿಯನ್ನು ತುಳುನಾಡು ನ್ಯೂಸ್ ನೊಂದಿಗೆ ಹಂಚಿಕೊಂಡ ಮನೆಯವರು ಇಂತಹ ಘಟನೆ ಹಿಂದೆ ಯಾವತ್ತಾದರೂ ಆಗಿರಬಹುದು. ಆದರೆ ಇದು ಅಪರೂಪದಲ್ಲಿ ಅಪರೂಪದ ಸಂಗತಿ. ಸಾಮಾನ್ಯವಾಗಿ ಗೋವುಗಳು ಒಂದು ಕರುವಿಗೆ ಜನ್ಮಕೊಡುವುದು ಸಾಮಾನ್ಯ ಪ್ರಕ್ರಿಯೆ. ನಮ್ಮ ದನಕ್ಕೆ ಕೂಡ ಇಲ್ಲಿಯವರೆಗೆ ಐದು ಬಾರಿ ಹೆರಿಗೆ ಆಗಿದೆ. ಐದು ಬಾರಿಯೂ ಇಂತಹ ವಿಸ್ಮಯ ನಡೆದಿಲ್ಲ. ಎರಡು ಕರು ಮತ್ತು ತಾಯಿ ಆರೋಗ್ಯವಾಗಿದೆ” ಎಂದು ಅವರು ತಿಳಿಸಿದ್ದಾರೆ.
ಅವಳಿ ಕರುಗಳಿಗೆ ಜನ್ಮ ನೀಡಿದ ಗೋವನ್ನು ನೋಡಲು ತುಂಬಾ ಜನ ಕುತೂಹಲಿಗರು ಮನೆಗೆ ಆಗಮಿಸುತ್ತಿದ್ದಾರೆ. ಆಸ್ಟಿನ್ ತಳಿಯ ಈ ದನ ದಿನಕ್ಕೆ ಆರು ಲೀಟರ್ ಹಾಲನ್ನು ನೀಡುತ್ತದೆ. ಐದು ಬಾರಿಯೂ ಇಂಜೆಕ್ಷನ್ ನೀಡಿಯೇ ಹೆರಿಗೆ ಮಾಡಿಸಲಾಗಿದೆ. ಈ ಬಾರಿಯೂ ಹಾಗೆ ಮಾಡಲಾಗಿತ್ತು. ಒಟ್ಟಿನಲ್ಲಿ ಎರಡು ಹೊಸ ಸದಸ್ಯರ ಆಗಮನದಿಂದ ಮಯೂರ್ ಗಣಪತಿ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ.
Leave A Reply