ಮೇಯರ್ ದಿವಾಕರ್ ಪಾಂಡೇಶ್ವರ್ ಮಾಡಲೇಬೇಕಾದ ನಾಲ್ಕು ಕೆಲಸಗಳಿವೆ!!
Posted On October 2, 2020
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವವರಿಗೆ ವಾರದಲ್ಲಿ ಒಂದು ದಿನ ಒಣ ಕಸ ಪ್ರತ್ಯೇಕವಾಗಿ ನೀಡಬೇಕು. ಉಳಿದೆಲ್ಲಾ ದಿನ ಹಸಿ ಕಸ ನೀಡಬೇಕು ಎನ್ನುವ ಸೂಚನೆ ಜನರಿಗೆ ನೀಡಲಾಗಿದೆ. ಜನರೇನೋ ಶುಕ್ರವಾರ ಎರಡು ತ್ಯಾಜ್ಯ ಪ್ರತ್ಯೇಕವಾಗಿ ನೀಡಿದರೂ ಅದನ್ನು ಸಂಗ್ರಹಿಸಲು ಬರುವ ತ್ಯಾಜ್ಯದ ಗಾಡಿಯವರು ಜನರಿಂದ ಅದನ್ನು ಸ್ವೀಕರಿಸಿ ಗಾಡಿಯಲ್ಲಿ ಎರಡನ್ನು ಒಟ್ಟಿಗೆ ಮಾಡಿ ಹಾಕುತ್ತಾರೆ. ಹಾಗಾದರೆ ಜನರು ವಾರವೀಡಿ ಸಂಗ್ರಹಿಸಿಟ್ಟ ಉದ್ದೇಶ ಏನು? ಒಣಕಸ ಹಾಗೂ ಹಸಿಕಸವನ್ನು ಒಟ್ಟಿಗೆ ಸೇರಿಸಿ ನೀಡಿದರೆ ಐದರಿಂದ ಹದಿನೈದು ಸಾವಿರ ರೂಪಾಯಿ ದಂಡ ಹಾಕುವ ಕ್ರಮ ಹಿಂದೆನೂ ಇತ್ತು. ಅದಕ್ಕೆ ಸಾಕಷ್ಟು ಪ್ರಚಾರವೂ ನೀಡಲಾಗಿತ್ತು. ಈಗ ದಂಡಕ್ಕೆ ಹೆದರಿ ಅಲ್ಲವಾದರೂ ನಮ್ಮ ನಗರಕ್ಕೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಹೆಚ್ಚಿನವರು ಒಣ ಮತ್ತು ಹಸಿಯನ್ನು ಬೇರೆ ಬೇರೆ ಮಾಡಿಯೇ ಕೊಡುತ್ತಿದ್ದರು. ಆದರೆ ತ್ಯಾಜ್ಯದ ಗಾಡಿಯಲ್ಲಿ ಎಲ್ಲವೂ ಕೂಡಲೇ ಮಿಕ್ಸ್. ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಇಡಿ ಎಂದು ಜನರಿಗೆ ಕಟ್ಟುನಿಟ್ಟಾಗಿ ಹೇಳುವ ಪಾಲಿಕೆ ತ್ಯಾಜ್ಯ ಸಂಗ್ರಹ ಮಾಡುವವರಿಗೆ ಮಾತ್ರ ಯಾಕೆ ಆವತ್ತು ಎರಡನ್ನೂ ಪ್ರತ್ಯೇಕವಾಗಿ ಗಾಡಿಯಲ್ಲಿ ಹಾಕುವ ವ್ಯವಸ್ಥೆ ಮಾಡಿ ಎಂದು ಹೇಳುವುದಿಲ್ಲ.
ಇನ್ನು ಉದ್ದಿಮೆ ಪರವಾನಿಗೆಯನ್ನು ಆನ್ ಲೈನ್ ನಲ್ಲಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಹಾಗಂತ ನಾವೇ ಪಾಲಿಕೆಗೆ ಬಂದು ನವೀಕರಣ ಮಾಡಲು ಕೊಟ್ಟರೆ ಅದಕ್ಕೆ ಎಷ್ಟೋ ದಿನಗಳು ಹಿಡಿಯುತ್ತವೆ. ಅದೇ ನೀವು ನಿಮ್ಮ ವಾರ್ಡ್ ಇನ್ಸಪೆಕ್ಟರ್ ಅವರಿಗೆ ಕೊಟ್ಟು ಮಾಡಲು ಹೇಳಿದರೆ ಅದು ಒಂದೇ ದಿನದಲ್ಲಿ ಆಗುವುದುಂಟು. ಇದು ಯಾವ ಮ್ಯಾಜಿಕ್. ಇಲ್ಲಿ ಪಾಲಿಕೆಯ ಆಫೀಸರ್ ಗಳೇ ಬ್ರೋಕರ್ ಆದ ಹಾಗೆ ಕಾಣಿಸುತ್ತದೆ. ಇಲ್ಲಿ ಏನು ಮಾಡಬೇಕು ಎಂದರೆ ಉದ್ದಿಮೆ ಪರವಾನಿಗೆ ಅರ್ಜಿ ಅಥವಾ ನವೀಕರಣವನ್ನು ಸೀನಿಯಾರಿಟಿ ಆಧಾರದ ಮೇಲೆ ಮಾಡಿ ಮುಗಿಸಬೇಕು. ಮೊದಲು ಕೊಟ್ಟವರಿಗೆ ಮೊದಲು ಮಾಡಿ ಮುಗಿಸಿದರೆ ಯಾರಿಗೂ ತೊಂದರೆ ಇಲ್ಲ. ಆದರೆ ಇಲ್ಲಿ ರಾಜಕೀಯ ಶಿಫಾರಸ್ಸುಗಳು ಬಂದರೆ ಆಗ ಎಲ್ಲರಿಗೂ ಅದು ಕಿರಿಕಿರಿ.
ಇನ್ನು ಈ-ಖಾತಾ ಮಾಡಲು ಕೊಟ್ಟರೆ ಕನಿಷ್ಟ 50 ದಿನಗಳಾದರೂ ಬೇಕು. ಈಗ ಎಲ್ಲವೂ ಕಂಪ್ಯೂಟರಿಕೃತವಾಗಿರುವಾಗ ಈ ಐವತ್ತು ದಿನಗಳಲ್ಲಿ ಇವರು ಮಾಡುವುದಾದರೂ ಏನು ಎಂದು ಬುದ್ಧಿವಂತರ ನಗರದವರಿಗೆ ಗೊತ್ತಿರಬೇಕಿತ್ತು. ಒಂದು ಕಂಪ್ಯೂಟರ್ ಎಷ್ಟು ಸ್ಪೀಡಾಗಿ ಕೆಲಸ ಮಾಡುತ್ತೆ ಎಂದು ಗೊತ್ತಿಲ್ಲದ ಜನರು ನಮ್ಮಲ್ಲಿ ಕಡಿಮೆ. ಹಿಂದೆ ಮ್ಯಾನುವಲ್ ರೀತಿಯಲ್ಲಿ ಕೆಲಸಕಾರ್ಯಗಳು ನಡೆಯುತ್ತಿದ್ದವು. ಆದರೆ ನಂತರ ಈ-ಖಾತಾ ಬಂದ ಬಳಿಕ ಹಿಂದಿಕ್ಕಿಂತ ಬೇಗ ಕೆಲಸ ಆಗಬೇಕಿತ್ತು. ಆದರೆ ಪೇಪರ್ ಲೆಸ್ ಆದ ಖುಷಿ ಮಾತ್ರ. ಕೆಲಸಗಳು ಇನ್ನೂ ನಿಧಾನವಾಗುತ್ತಿವೆ. ಒಂದು ಕಂಪ್ಯೂಟರಿನಿಂದ ಮತ್ತೊಂದು ಕಂಪ್ಯೂಟರಿಗೆ ಕಳಿಸುವಾಗ ಒಮ್ಮೆ ಕಣ್ಣಾಡಿಸಿ “ಒಪ್ಪಿದೆ” ಎಂದು ಒತ್ತಿ ಮುಂದಕ್ಕೆ ಕಳುಹಿಸಲು ಇವರು ತೆಗೆದುಕೊಳ್ಳುವುದು ಐವತ್ತು ದಿನಗಳು. ಅದೇ ಇನ್ಸಫ್ಲೂಯೆನ್ಸ್ ಇದ್ದವರಿಗೆ ಕೆಲಸಗಳು ಬೇಗ ಆಗುತ್ತವೆ. ಅದು ಇಲ್ಲಿನ ಸ್ಪೆಶಾಲಿಟಿ. ಇನ್ನು ಟ್ರೇಡ್ ಲೈಸೆನ್ಸ್ ಆನ್ ಲೈನ್ ಕೂಡ ಇದೇ ಅವಸ್ಥೆ.
ಇನ್ನು ಬೀದಿಬದಿ ವ್ಯಾಪಾರದ ಕಥೆ ಮತ್ತೊಂದು. ಪಾಲಿಕೆ ವ್ಯಾಪ್ತಿಯಲ್ಲಿ ಮೊಬೈಲ್ ಕ್ಯಾಂಟೀನ್ ಇದಕ್ಕೆ ಅನುಮತಿ ಕೊಡುವ ಕ್ರಮ ಇದೆ. ಇದು ಹೇಗೆಂದರೆ ಒಬ್ಬ ಮೊಬೈಲ್ ಕ್ಯಾಂಟೀನಿಗೆ ಲೈಸೆನ್ಸ್ ಪಡೆದುಕೊಂಡರೆ ಆತ ಒಂದೇ ಕಡೆ ನಿಂತು ವ್ಯಾಪಾರ ಮಾಡುವಂತಿಲ್ಲ. ಆತ ರಥಬೀದಿ ವೆಂಕಟರಮಣ ದೇವಸ್ಥಾನದ ಕಟ್ಟೆಯ ಬಳಿ ವ್ಯಾಪಾರ ಶುರು ಮಾಡಿದರೆ ಕಾರ್ ಸ್ಟ್ರೀಟ್ ನಿಂದ ಬಾಲಾಜಿ ಆಗಿ, ನ್ಯೂಚಿತ್ರಾ ದಾಟಿ, ಕುದ್ರೋಳಿಯಿಂದ ಮುಂದೆ ಹೋಗಿ, ಮಣ್ಣಗುಡ್ಡೆಯ ಬಳಿಕ ಲೇಡಿಹಿಲ್ ವರೆಗೆ ವ್ಯಾಪಾರ ಮಾಡುತ್ತಾ ಹೋಗಬೇಕು. ಆದರೆ ಎಷ್ಟು ಮಂದಿ ಮೊಬೈಲ್ ಕ್ಯಾಂಟೀನ್ ನವರು ಹೀಗೆ ಮಾಡುತ್ತಾರೆ. ಒಂದು ಕಡೆ ವ್ಯಾಪಾರಕ್ಕೆ ಕೋಲು ನೆಟ್ಟರೆ ಅಲ್ಲಿಯೇ ವರ್ಷಗಟ್ಟಲೆ ಇರುತ್ತಾರೆ. ಅಲ್ಲಿಯೇ ಅಡುಗೆ ತಯಾರಿಸುತ್ತಾರೆ. ಬಡಿಸುತ್ತಾರೆ, ಅಲ್ಲಿಯೇ ತೊಳೆಯುತ್ತಾರೆ, ಅಲ್ಲಿಯೇ ಮುಚ್ಚಿ ಹೋಗುತ್ತಾರೆ. ಇದರಿಂದ ಒಂದನೇಯದಾಗಿ ಪರಿಸರ ಗಲೀಜು. ಎರಡನೇಯದಾಗಿ ಇವರು ಹೀಗೆ ವ್ಯಾಪಾರ ಮಾಡುವುದರಿಂದ ಅಲ್ಲಿ ಆಸುಪಾಸಿನಲ್ಲಿ ಬೇರೆ ಹೋಟೇಲುಗಳಿದ್ದರೆ ಅವರಿಗೆ ನಷ್ಟ. ಅವರು ಅಂಗಡಿ ಬಾಡಿಗೆ ಕೊಟ್ಟು, ಕರೆಂಟು, ನೀರಿನ ಬಿಲ್ಲು ಕೊಟ್ಟು ಸಂಭಾಳಿಸುವಾಗ ಈ ಮೊಬೈಲು ಕ್ಯಾಂಟೀನ್ ನವರು ವರ್ಷಕ್ಕೆ ಐದು ಸಾವಿರ ರೂಪಾಯಿ ಪಾಲಿಕೆ ಶುಲ್ಕದಲ್ಲಿ ಒಳ್ಳೆಯ ಲಾಭ ಎಣಿಸುತ್ತಾರೆ.
ಇದನ್ನೆಲ್ಲಾ ನೋಡಬೇಕಾದವರು ನಮ್ಮ ಗೌರವಾನ್ವಿತ ಮೊದಲ ಪ್ರಜೆ ದಿವಾಕರ ಪಾಂಡೇಶ್ವರ್ ಅವರು. ಇದೆಲ್ಲ ಪುಸ್ತಕದಲ್ಲಿ ಇದ್ದರೆ ಪ್ರಯೋಜನವಿಲ್ಲ. ಇದನ್ನು ಸರಿಪಡಿಸಿ ನಾಗರಿಕರಿಗೆ ಉಪಯೋಗವಾಗುವಂತೆ ಮಾಡಬೇಕು. ಆಗುತ್ತಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ!
ಇದನ್ನೆಲ್ಲಾ ನೋಡಬೇಕಾದವರು ನಮ್ಮ ಗೌರವಾನ್ವಿತ ಮೊದಲ ಪ್ರಜೆ ದಿವಾಕರ ಪಾಂಡೇಶ್ವರ್ ಅವರು. ಇದೆಲ್ಲ ಪುಸ್ತಕದಲ್ಲಿ ಇದ್ದರೆ ಪ್ರಯೋಜನವಿಲ್ಲ. ಇದನ್ನು ಸರಿಪಡಿಸಿ ನಾಗರಿಕರಿಗೆ ಉಪಯೋಗವಾಗುವಂತೆ ಮಾಡಬೇಕು. ಆಗುತ್ತಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply