ಶಾಸ್ತ್ರ ಜ್ಞಾನ ಬ್ರಾಹ್ಮಣರು ಇತರರಿಗೆ ತಿಳಿಸುತ್ತಿರಲಿಲ್ಲ ಎಂಬುವುದು ಶುದ್ಧ ಸುಳ್ಳು!
ನೀವು ಒಮ್ಮೆ ನಿಮ್ಮ ತರಗತಿಯಲ್ಲಿ ಯೋಚಿಸಿಕೊಳ್ಳಿ. ಮೊದಲ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳು ಸಂಘಟನೆಯಾಗುವುದಕ್ಕಿಂತಲೂ ಹೆಚ್ಚು ಹಿಂಬದಿ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳು ಸಂಘಟಿತರಾಗುತ್ತಾರೆ. ಅಷ್ಟೇ ಅಲ್ಲ ಹಿಂಬದಿಯಿಂದ ಮುಂಬದಿ ಕುಳಿತ ವಿದ್ಯಾರ್ಥಿಗಳನ್ನು ಛೇಡಿಸುತ್ತಿರುತ್ತಾರೆ. ಇದ್ಯಾವುದಕ್ಕೂ ಧೈರ್ಯದಿಂದ ಮುಂದಿರುವ ವಿದ್ಯಾರ್ಥಿಗಳು ಪ್ರತಿಕ್ರಿಯಿಸುವುದಿಲ್ಲ ಎನ್ನುವುದೇ ಇವರ ಈ ಪ್ರಕ್ರಿಯೆಗೆ ದೊಡ್ಡ ಕಾರಣ. ನನಗೇಕೋ ಈ ಪರಿಸ್ಥಿತಿ ಈಗಿನ ಬ್ರಾಹ್ಮಣ ಸಮಾಜದ ವಾತಾವರಣಕ್ಕೆ ಸರಿಯಾಗಿ ಹೊಂದಿಕೆಯಾಗುವಂತೆ ಕಾಣುತ್ತದೆ. ಬುದ್ಧಿವಂತರು ಸಂಘಟಿತರಾಗುವುದಕ್ಕಿಂತಲೂ ಫಟಿಂಗರು ಅಥವಾ ದುರುದ್ದೇಶ ಇರುವವರು ಕೂಡಲೇ ಸಂಘಟಿತರಾಗುತ್ತಾರೆ. ಬೇರೆ ಮತಗಳ ಸಮಾಜಕ್ಕೆ ಹೋಲಿಸಿದರೆ ಹಿಂದೂ ಸಮಾಜ ಈ ದುರವಸ್ಥೆಯನ್ನು ಅನುಭವಿಸುತ್ತಿದೆ. ಅದರಲ್ಲೂ ಹಿಂದೂಗಳಲ್ಲಿ, ಬ್ರಾಹ್ಮಣ ಸಮಾಜವಂತೂ ಈ ದುರವಸ್ಥೆಯನ್ನು ಕ್ಷಣ ಕ್ಷಣಕ್ಕೂ ಅನುಭವಿಸತ್ತಿದೆ.
ಈ ರೀತಿಯಲ್ಲಿ ಶಾಲಾ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಅದೆಷ್ಟೋ ಬ್ರಾಹ್ಮಣ ಮಕ್ಕಳಿಗೆ ತೂಡಲು ಬಟ್ಟೆ, ಹಾಗೂ ಬ್ಯಾಗ್ ಪುಸ್ತಕ ಇತ್ಯಾದಿ ವಸ್ತುಗಳ ಕೊರತೆಯಾಗುವಷ್ಟರ ಮಟ್ಟಿಗೆ ಬಡತನವಿತ್ತು. ಅದೇ ಊರಿನಲ್ಲಿ ಕೃಷಿ ಮಾಡಿಕೊಂಡು ಅಥವಾ ಯಾವುದಾದರೂ ಸಣ್ಣ ಗುಡಿಯಲ್ಲಿ ಪೂಜೆ ಮಾಡಿ ಕೊಂಡು ಬರುತ್ತಿರುವವರ ಮಕ್ಕಳಿಗೆ ಈ ಗತಿ ಸರ್ವೇಸಾಮಾನ್ಯ. ಹಾಗಿದ್ದರೂ ಕೂಡ ಒಂದು ದಿವಸವು ಸರ್ಕಾರಗಳು ಮರುಗಲಿಲ್ಲ. ಕೆಲವು ಸಹಪಾಠಿಗಳಿಗೆ ಜಾತಿಯ ಆಧಾರದಲ್ಲಿ ಶಾಲೆಗೆ ಬೇಕಾದ ಎಲ್ಲಾ ಸಲಕರಣೆಗಳು ಸಿಗುತ್ತಿದ್ದವು. ಅಷ್ಟೇ ಅಲ್ಲದೆ ಆ ಮಕ್ಕಳು ಅವುಗಳನ್ನು ಮನೆಗೆ ತೆಗೆದುಕೊಂಡು ಹೋದಾಗ ಮನೆಯವರು ಅದನ್ನು ಮಾರಿ ಕುಡಿದು ತೇಲುತ್ತಿದ್ದದ್ದನ್ನು ಬೇಕಾದಷ್ಟು ಬಾರಿ ಕಂಡದ್ದಿದೆ. ಈ ಅನ್ಯಾಯಗಳಾಗುತ್ತಿದ್ದದ್ದು ಜಾತಿಯ ಆಧಾರದಲ್ಲಿಯೇ. ಕೇವಲ ಈ ಜಾತಿಯಲ್ಲಿ ಹುಟ್ಟಿದ್ದಕ್ಕೆ ಇವರಿಗೆ ಏನು ಇಲ್ಲ. ಕೇವಲ ಆ ಜಾತಿಯಲ್ಲಿ ಹುಟ್ಟಿದ್ದಕ್ಕೆ ಅವರಿಗೆ ಎಲ್ಲಾ ಸೌಲಭ್ಯಗಳು. ಕಣ್ಣ ಮುಂದೆ ವಿದ್ಯಾರ್ಥಿ ಜೀವನದಲ್ಲಿ ಇಂಥಹಾ ವಂಚನೆಯನ್ನು ಅನುಭವಿಸುತ್ತಿದ್ದದ್ದು ಸುಳ್ಳಲ್ಲವಲ್ಲ. ಆದರೂ ಬ್ರಾಹ್ಮಣರು ಜಾತಿವಾದಿಗಳು ಎಂದು ದೂರವ ಇವರಿಗೆ ಏನು ಹೇಳಬೇಕು.
ಈ ದುರ್ಬುದ್ಧಿ ಚಿಂತಕರು ವಿದ್ಯೆಯನ್ನು ಬ್ರಾಹ್ಮಣರು ಬಚ್ಚಿಟ್ಟಿದ್ದಾರೆ ಎಂದು ದೂರುತ್ತಾರೆ. ಶಾಲೆ ಅಥವಾ ಗುರುಕುಲ ಎನ್ನುವುದು ಮೇಲ್ವರ್ಗದ ಬ್ರಾಹ್ಮಣರ ಅಧಿಕಾರದಲ್ಲಿತ್ತು. ಅಲ್ಲಿಗೆ ಇತರ ಯಾವ ಜಾತಿಯವನಿಗೂ ಪ್ರವೇಶವಿರಲಿಲ್ಲ ಎಂದು ಸುಳ್ಳು ಕಥೆಯನ್ನು ಕಟ್ಟಿ, ಬೇಳೆ ಬೇಯಿಸಿಕೊಳ್ಳುವ ಇವರು ಕಣ್ಣಿದ್ದು ಕುರುಡರಂತೆ. ಈ ಮೂಲಕ ಕೇವಲ ಬ್ರಾಹ್ಮಣರ ವಿರುದ್ಧ ದಲಿತರನ್ನು ಎತ್ತಿ ಕಟ್ಟಿ ಹಿಂದೂ ಸಮಾಜವನ್ನು ಒಡೆಯುವುದಷ್ಟೇ ಇವರಿಗೆ ಉದ್ದೇಶ. ಏಕೆಂದರೆ ಕ್ರೈಸ್ತ ವ್ಯಕ್ತಿಯಾದ ಮ್ಯಾಕ್ಸ್ ಮುಲ್ಲರ್ನಿಗೆ ಹಾಗೂ ಮುಸ್ಲಿಂ ವ್ಯಕ್ತಿಯಾದ ಶಿಶುನಾಳ ಶರೀಫರಿಗೆ ಹೇಗೆ ವೇದೋಪನಿಷತ್ತಿನ ಜ್ಞಾನ ಬಂತು. ಮಾತ್ರವಲ್ಲ ದಲಿತ ವ್ಯಕ್ತಿಗಳಾದ ಕನಕದಾಸ, ಅಂಬೇಡ್ಕರ್ ಇಂಥ ಮಹನೀಯರಿಗೆ ವೇದ ಪುರಾಣ ಉಪನಿಷತ್ತುಗಳು ಹೇಗೆ ತಿಳಿಯಲ್ಪಟ್ಟಿತು. ಭಾರತದ ಇತಿಹಾಸದಲ್ಲಿ ಯಾವ ಕಾಲಕ್ಕೂ ಕೂಡ ವಿದ್ಯೆ ಎನ್ನುವುದು ಒಂದು ಜಾತಿಯ ಅಥವಾ ಒಂದು ವರ್ಣದ ಸೊತ್ತಾಗಿರಲಿಲ್ಲ. ವ್ಯಾಸ ವಾಲ್ಮೀಕಿಯಿಂದ ಹಿಡಿದು ಇವತ್ತಿನ ತನಕ ಕೂಡ ಯಾರು ಬೇಕಾದರೂ ಇದನ್ನು ಕಲಿತು ಜೀರ್ಣಿಸಿಕೊಳ್ಳಬಹುದು. ಇದಕ್ಕೆ ಜಾತಿ ಹಾಗೂ ಯೋಗ್ಯತೆಗಿಂತ ಹೆಚ್ಚಾಗಿ ಬೇಕಾಗುವುದು ಪ್ರಯತ್ನ ಹಾಗೂ ಮನಸ್ಸು. ಇದೆರಡು ಇಲ್ಲದವರಿಗೆ ಮಾತ್ರ ಯಾವ ವಿದ್ಯೆಯು ಕೂಡ ತಲೆಗೆ ಹತ್ತಲು ಸಾಧ್ಯವಿಲ್ಲ. ಪ್ರಯತ್ನ ಹಾಗೂ ಮನಸ್ಸಿದ್ದವರಿಗೆ ವಿದ್ಯೆ ಸಾರ್ವಕಾಲಿಕವಾಗಿ ಸಿಗುತ್ತಿತ್ತು.
ಕಚ್ಚೆ ಉಡುವುದು ಅಥವಾ ಪಂಚೆ ಉಡುವುದು ಹಾಗೂ ತಿಲಕ ಇಟ್ಟುಕೊಳ್ಳುವುದು ಹಿಂದೂಗಳ ಲಕ್ಷಣ.
ಪ್ರಾಣಿ ಹಿಂಸೆ ಮಾಡದಿರುವುದು ಹಾಗೂ ಮತ್ತೊಬ್ಬನಿಗೆ ಬದುಕ ಕೊಡುವುದು ಹಿಂದೂವಿನ ಲಕ್ಷಣ.
ಹಿಂದೂ ಸಂಸ್ಕೃತಿಯ ಆಧಾರಸ್ತಂಭವಾಗಿರುವ ವೇದ ಪುರಾಣ ಇತಿಹಾಸಗಳನ್ನು ಅರಿತುಕೊಳ್ಳುವುದು ಹಾಗೂ ಮಂತ್ರಗಳನ್ನು ಅನುಷ್ಠಾನಗೊಳಿಸುವುದು ಹಿಂದೂಗಳ ಲಕ್ಷಣ.
ದೇವಾಧಿ ದೇವತೆಗಳನ್ನು ಆರಾಧಿಸುವುದು ಹಾಗೂ ಮತ್ತೊಬ್ಬನ ಆರಾಧನೆಗೆ ವಿರೋಧ ಮಾಡದೆ ಅವಕಾಶವನ್ನು ಕಲ್ಪಿಸಿಕೊಡುವುದು ಹಿಂದುಗಳ ಲಕ್ಷಣ.
ಕದಿಯದೆ, ಕೊಲ್ಲದೆ, ಕುಡಿಯದೆ, ಅತ್ಯಾಚಾರ ಮಾಡದೆ ಸಮಾಜದ ನಡುವೆ ನೀತಿವಂತನಾಗಿ ನಿಯಮ ವಂತನಾಗಿ ಬದುಕುವುದು ಹಿಂದೂಗಳ ಲಕ್ಷಣ.
ತಂದೆ ತಾಯಿಗಳನ್ನು ಗೌರವಿಸಿ, ಹೆಂಡತಿ ಮಕ್ಕಳನ್ನು ಸಾಕಿ ಸಲಹಿ ಸಮಾಜದ ನಡುವೆ ತನಗೂ ತನ್ನ ಪರಿವಾರಕ್ಕೂ ಯಾವ ಕಾಲಕ್ಕೂ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳುವುದು ಹಿಂದೂಗಳ ಲಕ್ಷಣ.
ತ್ಯಾಗಮಯವಾದ ಜೀವನವನ್ನು ನಡೆಸಿ ಆ ಮೂಲಕ ತಾನು ಕಲಿತ ವಿದ್ಯೆಯನ್ನು ಸಾಧ್ಯವಿದ್ದಷ್ಟರ ಮಟ್ಟಿಗೆ ಮತ್ತೊಬ್ಬರಿಗೆ ತಿಳಿಸಿ ಸಮಾಜವನ್ನು ಎಲ್ಲಾ ರೀತಿಯಿಂದಲೂ ಬಲಿಷ್ಠವನ್ನಾಗಿಸುವುದು ಹಿಂದೂಗಳ ಲಕ್ಷಣ.
ಗೋ ಇತ್ಯಾದಿ ಪ್ರಾಣಿಗಳನ್ನು ಪ್ರೀತಿಯಿಂದ ಕಾಣುವುದು ಹಾಗೂ ಸಾಕುವುದು ಪ್ರತಿಯೊಬ್ಬ ಹಿಂದೂಗಳ ಲಕ್ಷಣ!
Leave A Reply