ಇದು ರಾಮನೇ ಇಳಿದು ಬಂದದ್ದು..
ಈ ಕಾಲದಲ್ಲಿ ಬದುಕುತ್ತಿರುವವರಲ್ಲಿ ಮಹಾಪುರುಷರ ಲಕ್ಷಣಗಳಿಂದ ಕೂಡಿದ ವ್ಯಕ್ತಿ ಯಾರಿದ್ದಾನೆ. ಆ ಲಕ್ಷಣ ಕೂಡ ಸಾಮಾನ್ಯವಾದದ್ದಲ್ಲ. ವಾಲ್ಮೀಕಿಗಳು ಅಂತಹ ಮಹಾನ್ ವ್ಯಕ್ತಿತ್ವಕ್ಕೆ ಇರುವ ಲಕ್ಷಣಗಳನ್ನು ನಾರದರಲ್ಲಿ ಕೇಳುತ್ತಾ ವಾಲ್ಮೀಕಿಯ ರಾಮಾಯಣ ತೆರೆದುಕೊಳ್ಳುತ್ತದೆ.
ಕೋನ್ವಸ್ಮಿನ್ ಸಾಂಪ್ರತಂ ಲೋಕೇ
ಗುಣವಾನ್ ಕಶ್ಚ ವೀರ್ಯವಾನ್
ಧರ್ಮಜ್ಞಶ್ಚ ಕೃತಜ್ಞಶ್ಚ
ಸತ್ಯವಾಕ್ಯೋ ದೃಢವೃತಃ
ಚಾರಿತ್ರೇಣ ಚ ಕೋ ಯುಕ್ತಃ
ಸರ್ವಭೂತೇಷು ಕೋ ಹಿತಃ
ವಿದ್ವಾನ್ ಕಃ ಕಃ ಸಮರ್ಥಶ್ಚ
ಕಶ್ಚೈಕ ಪ್ರಿಯದರ್ಶನಃ
ಆತ್ಮವಾನ್ ಕೋ ಜಿತಕ್ರೋಧೋ
ದ್ಯುತಿಮಾನ್ ಕೋನಸೂಯಕಃ
ಕಸ್ಯ ಬಿಭ್ಯತಿ ದೇವಾಶ್ಚ
ಜಾತ ರೋಷಸ್ಯ ಸಂಯುಗೇ
ಏತದಿಚ್ಛಾಮ್ಯಹಂ ಲೋಕೇ
ಪರಂ ಕೌತೂಹಲಂ ಹಿ ಮೇ
ಈ ರೀತಿಯ ಪ್ರಶ್ನೆಗಳನ್ನು ನಾವು ಬಿಡಿಸಿ ನೋಡೋಣ.
ಗುಣವಂತಃ= ಗುಣವಂತನು. ಸದ್ವಿಚಾರ ಸತ್ಕರ್ಮ, ಸದಾಚಾರ ಇತ್ಯಾದಿ ಗುಣಗಳಿಂದ ಕೂಡಿರಬೇಕು.
ವೀರ್ಯವಂತಃ= ವೀರ್ಯವಂತನು,ಅಂದರೆ ತೋರಿಕೆಯ ತಾಕತ್ತಲ್ಲ. ಆಂತರ್ಯದ ತಾಕತ್ತಿಗೆ ವೀರ್ಯ ಎಂದು ಹೆಸರು. ತನ್ನ ಮೇಲೆ ತನಗೆ ದೃಢವಾದ ವಿಶ್ವಾಸವಿದ್ದರೆ ಮಾತ್ರ ಇಂತಹ ತಾಕತ್ತು ಬರಲು ಸಾಧ್ಯ.
ಧರ್ಮಜ್ಞಃ= ಧರ್ಮಜ್ಞನಾಗಿರಬೇಕು.
ಲೋಕೋಪಕಾರವಾದ ಕರ್ತವ್ಯ ಪ್ರಜ್ಞೆಯನ್ನು ಹೊಂದಿರಬೇಕು.ತಾನು ಹುಟ್ಟಿದ ಸಂಸ್ಕೃತಿಗೆ ತನ್ನ ಪರಂಪರೆಗೆ ಅನುಗುಣವಾದ ವ್ಯಕ್ತಿತ್ವವನ್ನು ಹಾಗು ಆಚರಣೆಯನ್ನು ಮಾಡುವವನಾಗಿರಬೇಕು.
ಕೃತಜ್ಞಃ= ಕೃತಜ್ಞನಾಗಿರಬೇಕು.
ಮಾಡಿದ ಉಪಕಾರವನ್ನು ಸ್ಮರಿಸುವವನಾಗಿರಬೇಕು. ತನ್ನನ್ನು ತಿದ್ದಿ ತೀಡಿ ಬೆಳೆಸಿದ ಎಲ್ಲರಿಗೂ ಗೌರವವನ್ನು ಕೊಡುವವನಾಗಿರಬೇಕು. ಅವರನ್ನೆಲ್ಲ ಮರೆಯುವವನಾಗಬಾರದು.
ಸತ್ಯವಾಕ್ಯ ಪರಿಪಾಲಕಃ= ತನ್ನ ಮಾತಿಗೆ ತಾನೇ ವಿರುದ್ಧವಾಗಿ ನಡೆಯಬಾರದು. ಹೇಳಿದ ಮಾತಿಗೆ ಕೊನೆಯ ತನಕವೂ ಬದ್ಧನಾಗಿ ಬದುಕಬೇಕು.
ದೃಢವ್ರತಃ=ಹಿಡಿದ ಕೆಲಸವನ್ನು ಬಿಡದೆ ಪೂರ್ತಿಗೊಳಿಸಬೇಕು. ಧಾರ್ಮಿಕ ಪ್ರಜ್ಞೆಯ ಜಾಗೃತಿಗೆ ತನ್ನ ದೇಹವನ್ನು ಉಪವಾಸ ನದಿ ವ್ರತಗಳಿಂದ ದಂಡಿಸಬೇಕು. ಪ್ರಾಣಿಗಳು ಕೂಡ ವೃತಾಚರಣೆ ಮಾಡುತ್ತವೆ ಎನ್ನುವುದಕ್ಕೆ ಗುರುವಾಯೂರು ಕೇಶವ ಎಂಬ ಆನೆ ಇದಕ್ಕೆ ಸಾಕ್ಷಿ. ಅಂತದ್ದರಲ್ಲಿ ಮನುಷ್ಯ ಯಾವುದೇ ವ್ರತವಿಲ್ಲದೆ ಬದುಕಬಾರದು.
ಸರ್ವಭೂತೇಷು ಕೋ ಹಿತಃ =ಎಲ್ಲರಿಗೂ ಹಿತವನ್ನು ಬಯಸುವವನಾಗಿರಬೇಕು. ಮನುಷ್ಯರನ್ನು ಬಿಡಿ ಪ್ರಾಣಿಗಳನ್ನು ಕೂಡ ಹಿಂಸಿಸುವ ಪ್ರವೃತ್ತಿ ಇರಬಾರದು.
ವಿದ್ವಾನ್ =ತಿಳಿದವನಾಗಿರಬೇಕು.
ಲೋಕಜ್ಞಾನ,ವ್ಯವಹಾರಜ್ಞಾನ, ಇತಿಹಾಸಜ್ಞಾನ, ಹೀಗೆ ಎಲ್ಲವನ್ನು ತಿಳಿದಿರಬೇಕು. ಕೊನೆಯ ಪಕ್ಷ ತಾನು ಎಲ್ಲಿ ಹೇಗಿರಬೇಕು ಹಾಗು ಎಲ್ಲಿ ಏನು ಮಾತಾಡಬೇಕು ಎನ್ನುವ ಅರಿವಾದರೂ ಬೇಕು.
ಸಮರ್ಥಶ್ಚ=
ಯಾವುದನ್ನು ಕೂಡ ಮಾಡುವ ಸಾಮರ್ಥ್ಯವಿಬೇಕು. ವೃತ್ತಿಯಲ್ಲಾಗಲಿ ಪ್ರವೃತ್ತಿಯಲ್ಲಾಗಲಿ ಕೊನೆ ಮುಟ್ಟುವ ತನಕ ಯಾರಿಗೂ ಯಾವುದಕ್ಕೂ ಹೆದರದವನಾಗಿರಬೇಕು. ನಡೆಯಲ್ಲಿ ನುಡಿಯಲ್ಲಿ ಸಮರ್ಥನಾಗಿರಬೇಕು.
ಪ್ರಿಯದರ್ಶನಃ=ವ್ಯಕ್ತಿಯನ್ನು ನೋಡುವಾಗ ಕಣ್ಣಿಗೆ ಮನಸ್ಸಿಗೆ ಸುಖ ಕೊಡುವವನಾಗಿರಬೇಕು. ಯಾವಾಗಲೂ ದೇಹವಾಗಲಿ ಹಾಗೂ ವಸ್ತ್ರವಾಗಲಿ ಆಕರಷಣೀಯವಾಗಿರಬೇಕು.
ಆತ್ಮವಾನ್ = ದೇಹ ಬೇರೆ ಜೀವ ಬೇರೆ ಎನ್ನುವ ಸನಾತನ ಧರ್ಮದ ಶ್ರೇಷ್ಠ ಚಿಂತನೆಯನ್ನು ಅರಿತುಕೊಂಡವನಾಗಿರಬೇಕು. ಆತ್ಮಕ್ಕಿಂತಲೂ ಮಿಗಿಲಾಗಿ ದೇಹದ ಮೇಲೆ ಯಾವುದೇ ಮಮಕಾರವನ್ನು ಹೊಂದಿರಬಾರದು.
ಜಿತಕ್ರೋಧಃ =ಸಿಟ್ಟನ್ನು ಗೆದ್ದಿರಬೇಕು.
ಎಲ್ಲಿ ಯಾರ ಮೇಲೆ ಸಿಟ್ಟು ಬರಬೇಕು ಎನ್ನುವುದು ಗೊತ್ತಿರಬೇಕು. ಎಲ್ಲೆಂದರಲ್ಲಿ ಸಿಟ್ಟನ್ನು ತೋರಿಸುವವನಾಗಬಾರದು. ಸಿಟ್ಟು ನಮ್ಮ ಹಿಡಿತದಲ್ಲಿರಬೇಕು.
ದ್ಯುತಿಮಾನ್ = ತೇಜೋವಂತನಾಗಿರಬೇಕು. ಕೇವಲ ನೋಡಲು ಚಂದವಿದ್ದರೆ ಸಾಲದು ಮುಖದಲ್ಲಿ ಗಾಂಭೀರ್ಯತೆ ಹಾಗೂ ಲಕ್ಷಣ ಬೇಕು. ಅಕರ್ಷಣೀಯವಾದ ವರ್ಚಸ್ಸನ್ನು ಹೊಂದಿರಬೇಕು.
ಅನಸೂಯಕಃ ಹೊಟ್ಟೆಕಿಚ್ಚು ಪಡಬಾರದು. ದೇಶಕ್ಕೆ ಸಮಾಜಕ್ಕೆ ಲಾಭವಾಗುವಂತಹ ವ್ಯಕ್ತಿತ್ವವಿದ್ದಲ್ಲಿ ಅಂತಹಾ ವ್ಯಕ್ತಿಯನ್ನು ಗುರುತಿಸಿ ಅವನಿಗೆ ಅವಕಾಶ ಕೊಡಬೇಕು. ಆಗ ಅವನಿಗೆ ಸಾರ್ಥಕ ಭಾವ ಹಾಗು ಸಮಾಜಕ್ಕೆ ಲಾಭ.ಅದು ಬಿಟ್ಟು ಹೊಟ್ಟೆಕಿಚ್ಚಿನಿಂದ ಅವನನ್ನು ಬದಿಗಿಡುವ ಯೋಚನೆ ಮಾಡಬಾರದು.
ಕಸ್ಯ ಬಿಭ್ಯತಿ ದೇವಾಶ್ಚ
ಜಾತ ರೋಷಸ್ಯ ಸಂಯುಗೇ = ಸಿಟ್ಟೆದ್ದರೆ ದೇವತೆಗಳೂ ಹೆದರಬೇಕು. ಯಾವಾಗ ಒಬ್ಬಾತನ ಸಿಟ್ಟು, ಸಾತ್ವಿಕ ಸಿಟ್ಟಾಗಿರುತ್ತದೆಯೋ, ಸಮಾಜದ ಮೇಲಿರುವ ದೌರ್ಜನ್ಯದ ವಿರುದ್ಧವಾಗಿತ್ತದೆಯೋ ಆಗ ಎದುರಾಳಿಗಳಾಗಿ ದೇವತೆಗಳು ಬಂದರೂ ಸಿಟ್ಟು ನಿಲ್ಲುವುದಿಲ್ಲ. ಅಂತಹ ತಾತ್ವಿಕವಾದ ಸಿಟ್ಟುಳ್ಳವನಾಗಿರಬೇಕು.
ಹೀಗೆ 16 ಗುಣಗಳುಳ್ಳ ಮಹಾಪುರುಷನು ಯಾರು ಎಂದು ನಾರದರಲ್ಲಿ ವಾಲ್ಮೀಕಿಗಳು ಕೇಳಿದ ಪ್ರಶ್ನೆ. ಇದಕ್ಕೆ ಉತ್ತರ ರೂಪವಾಗಿ ನಾರದರಿಂದ ಪ್ರಕಟಗೊಂಡ ವ್ಯಕ್ತಿತ್ವ ಶ್ರೀರಾಮನದ್ದು. ಅಲ್ಲಿಂದ ರಾಮಾಯಣ ತೆರೆದುಕೊಳ್ಳುವುದು.
ಈಗ ಒಮ್ಮೆ ಈ ವ್ಯಕ್ತಿತ್ವವನ್ನು ಮೋದಿಯಲ್ಲಿ ಅಥವಾ ಯೋಗಿಯಲ್ಲಿ ಕಲ್ಪಿಸಿಕೊಳ್ಳಿ. ಈ ಎಲ್ಲ ಗುಣಗಳೂ ಅವರಲ್ಲಿ ಯೋಗ್ಯವಾಗಿ ಕೂಡಿಬರುತ್ತದೆ. ಆದ್ದರಿಂದ ದೈವಾಂಶ ಸಂಭೂತ ಎಂದರೆ ಅತಿಶಯೋಕ್ತಿಯಲ್ಲ.
ಇಷ್ಟು ಮಾತ್ರವಲ್ಲದೆ ಇದಕ್ಕೆ ಸಂವಾದಿಯಾಗಿ ಸನಾತನ ಧರ್ಮದ ಸಾರ್ವಕಾಲಿಕವಾದ ಸತ್ಯವನ್ನು ತೋರಿಸಿಕೊಟ್ಟ ಭಗವದ್ಗೀತೆಯ ಮಾತುಗಳನ್ನು ಕಾಣಲೇಬೇಕು.
ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಂ ||
ಯಾವಾಗ ಧರ್ಮ ಹಾನಿಯಾಗಿ ಅಧರ್ಮ ಮೇಲೆ ಬರುತ್ತದೆಯೋ ,ಆಗ ತನ್ನ ಆತ್ಮವನ್ನು ಸೃಷ್ಟಿಸಿಕೊಳ್ಳುತ್ತೇನೆ.
ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ!!
ಶಿಷ್ಟರ ರಕ್ಷಣೆಗಾಗಿ, ದುಷ್ಟರ ಸಂಹಾರಕ್ಕಾಗಿ ಹಾಗು ಧರ್ಮ ಸಂಸ್ಥಾಪನೆಗಾಗಿ ಕಾಲ ಕೂಡಿ ಬಂದಾಗ ಮತ್ತೆ ಮತ್ತೆ ನಾನಿಳಿದು ಬರುತ್ತೇನೆ.
ಯದ್ಯದ್ವಿಭೂತಿ ಮತ್ಸತ್ವಂ ಶ್ರೀಮದೂರ್ಜಿತಮೇನವಾ
ತತ್ತ ದೇವಾವಗಚ್ಛತ್ವಂ
ಮಮ ತೇಜೋಂಶ ಸಂಭವಮ್
ಎಲ್ಲಿ ವಿಶಿಷ್ಟವಾದ ಶಕ್ತಿಗಳಿರುವ ವ್ಯಕ್ತಿತ್ವವಿದೆಯೋ ಅಲ್ಲೆಲ್ಲ ನನ್ನ ಒಂದಂಶದ ಸನ್ನಿಧಾನವಿದೆ. ಇದು ಭಗವಂತನೇ ತಾನಿದು ಇಳಿದು ಬರುವ ಬಗ್ಗೆ ಹೇಳಿಕೊಂಡ ಮಾತುಗಳು. ಅದೆಲ್ಲವೂ ಈಗ ಸತ್ಯವಾಗುತ್ತಿದೆ.ಹೀಗೆ ಪ್ರಕೃತಿಯೊಂದಿಗೆ ಕೂಡಿಕೊಂಡು ಸಾಗುವುದು ಸನಾತನ ಧರ್ಮದ ವಿಶಿಷ್ಟತೆ. ನಮ್ಮ ನಂಬಿಕೆಯ ಕೇಂದ್ರ ಬಿಂದುವಾದ ಭಗವಂತ ನಮ್ಮ ಪ್ರಾರ್ಥನೆಗೆ ಓಗೊಟ್ಟರೇ… ಕಾಲ ಕೂಡಿ ಬಂದಾಗ ಯಾವ ರೂಪದಲ್ಲೂ ಇಳಿದು ಬರಬಲ್ಲ ಎನ್ನುವುದಕ್ಕಿರುವ ಮಾತುಗಳು.
ಅಂತಹ ಭಗವದ್ವಿವಿಭೂತಿ ರೂಪಗಳ ಕಾಲದಲ್ಲಿ ನಾವಿದ್ದೇವೆ. ಇದನ್ನು ಅರ್ಥೈಸಿಕೊಂಡು ರಾಮನ ಹಿಂದೆ ಬಂದ ಕಪಿಗಳ ಹಾಗೆ ಹೆಜ್ಜೆ ಇಟ್ಟರೆ ಇತಿಹಾಸದಲ್ಲಿ ನಾವು ಕೂಡ ಗುರುತಿಸಿಕೊಳ್ಳುವೆವು. ಈ ಮೂಲಕ ಜೀವನದ ಸಾರ್ಥಕತೆಯನ್ನು ಪಡೆಯಹುದು. ರಾಮನಿದ್ದು ಅರ್ಥೈಸಿಕೊಳ್ಳದ ಲಂಕಾವಾಸಿಗಳಾಗುವುದಕ್ಕಿಂತ ಅಲ್ಲಿದ್ದು ಹೊರಗುಳಿದ ವಿಭೀಷಣನಾಗಿ ಬದುಕುವುದು ಸೂಕ್ತ.
Leave A Reply