ಕೆಂಪು ಉಗ್ರರ ದಾಳಿಗೆ ಎಂಟು ಸಿಆರ್ ಪಿಎಫ್ ಯೋಧರು ಹುತಾತ್ಮ, ಎಲ್ಲಿದ್ದೀರಿ ಕಮ್ಮಿನಿಷ್ಠರ ಬೆಂಬಲಿಗರೇ
Posted On March 13, 2018
ಸುಕ್ಮಾ: ದೇಶದಲ್ಲಿ ಕೆಂಪು ಉಗ್ರರ ಉಪಟಳ ತೀವ್ರವಾಗಿದ್ದು, ಛತ್ತಿಸಗಢ್ ದಲ್ಲಿ 10 ನಕ್ಸಲರನ್ನು ಯೋಧರು ಹೊಡೆದುರುಳಿಸಿದ 11 ದಿನದ ನಂತರ ಮಾವೋ ಭಯೋತ್ಪಾದಕರು ಪ್ರತಿ ದಾಳಿ ನಡೆಸಿದ್ದು, ಮಂಗಳವಾರ ಎಂಟು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಸುಕ್ಮಾದಲ್ಲಿರುವ ಸಿಆರ್ ಪಿಎಫ್ 12 ಬಟಾಲಿಯನ್ ಮೇಲೆ ದಾಳಿ ನಡೆಸಿರುವ ನಕ್ಸಲರು ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ಧಾರೆ. ಸ್ಫೋಟಕಗಳನ್ನು ಬಳಿಸಿ ದಾಳಿ ಮಾಡಿದ್ದು, ದಾಳಿಯಲ್ಲಿ ಒಂಬತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಕೆಲವು ಯೋಧರಿಗೆ ಗಂಭೀರ ಗಾಯಗಳಾಗಿರುವ ವರದಿಗಳು ಇವೆ.
ಸುಕ್ಮಾದ ಅರಣ್ಯ ಪ್ರದೇಶದ ಕಿರಸ್ಥಾನ ಪ್ರದೇಶದಲ್ಲಿ ಈ ಪೆಟ್ರೋಲ್ ಬಾಂಬ್ ಬಳಸಿ ದಾಳಿ ನಡೆಸಿದ್ದು, ದಾಳಿಯ ತೀವ್ರತೆ ಹಲವು ಸಿಆರ್ ಪಿಎಫ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply