ಲಂಚ ಕೊಟ್ಟು ಬಿಲ್ ಪಾಸ್ ಮಾಡುವ ಅಧಿಕಾರಿಗಳೇ ಮಾರಕ ಕಾಯಿಲೆ ಎಂದು ಸುಳ್ಳು ಯಾಕೆ ಹೇಳುತ್ತೀರಿ!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯ, ಅಧಿಕಾರಿ, ಆಯುಕ್ತ, ಮೇಯರ್ ಆಗಿರುವವರು ಹಣ ಮಾಡುವುದು ಹೇಗೆ ಎನ್ನುವ ಪುಸ್ತಕ ಬರೆಯಲು ಸೂಕ್ತವಾದ ವ್ಯಕ್ತಿಗಳು. ಇವರು ಪಾಲಿಕೆಯ ಯಾವುದೇ ನಿಯಮವನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಬಲ್ಲರು. ಅದರೊಂದಿಗೆ ತಾವು ಧರಿಸುವ ಬಟ್ಟೆಯ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಲೆ ಕೂಡ ಮೆತ್ತದ ಹಾಗೆ ತಮ್ಮದೆ ಡಿಟ್ರಜೆಂಟ್ ಸೋಪ್ ಹಾಕಿ ತಿಕ್ಕಿ ಶುಭ್ರವಾದ ನಗು ಹೊರಹೊಮ್ಮಿಸುವರು. ನಾನು ಕಳೆದ ಮೇನಲ್ಲಿ ಮಾಹಿತಿ ಹಕ್ಕಿನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಕೇಳಿದ ಎರಡನೇ ಪ್ರಶ್ನೆಯನ್ನು ನಿಮಗೆ ಹೇಳುತ್ತಿದ್ದೇನೆ.
ಪಾಲಿಕೆ ವ್ಯಾಪ್ತಿಯಲ್ಲಿ ಯಾವುದಾದರೂ ಕೆಲಸ ಈ ಅಗಸ್ಟ್ ನಲ್ಲಿ ಆಯಿತು ಎಂದುಕೊಳ್ಳಿ. ಅದರ ವಿವರವನ್ನು …………. ನಲ್ಲಿ ಬರೆದು ಅದನ್ನು ತಂದು ಬಿಲ್ ರಿಜಿಸ್ಟಾರ್ ನಲ್ಲಿ ನಮೂದಿಸಬೇಕು. ಅಲ್ಲಿಗೆ ಒಂದು ಹಂತದ ಕೆಲಸ ಮುಗಿಯಿತು. ಮುಂದಿನದ್ದು ಹಣ ಬಿಡುಗಡೆ ಮಾಡುವ ಪ್ರಕ್ರಿಯೆ. ಮುಂದಿನ ತಿಂಗಳು ಮತ್ತೊಂದು ಕಾಮಗಾರಿ ನಡೆಯುತ್ತದೆ ಎಂದು ಇಟ್ಟುಕೊಳ್ಳೋಣ. ಅದರ ನಂತರ ಅಕ್ಟೋಬರ್ ನಲ್ಲಿ ಎರಡು ಯೋಜನೆಗಳು ಮುಗಿಯಿತು ಎಂದು ಅಂದುಕೊಳ್ಳೋಣ. ನವೆಂಬರ್ ನಲ್ಲಿ ಮೂರು ಕೆಲಸ ಆಯಿತು ಎಂದು ಲೆಕ್ಕ ಹಾಕೋಣ. ಈಗ ನೀವೆ ಹೇಳಿ ಒಬ್ಬ ಎ ಎನ್ನುವ ಗುತ್ತಿಗೆದಾರ ತಾನು ಅಗಸ್ಟ್ ನಲ್ಲಿ ಕೆಲಸ ಮುಗಿಸಿ ತನ್ನ ಹಣ ಬರುವ ದಿನವನ್ನು ಕಾಯುತ್ತಾ ಇರುತ್ತಾನೆ. ಅವನು ಒಂದು ದಿನ ಡಿಸೆಂಬರ್ ತಿಂಗಳ ಹೊತ್ತಿಗೆ ಪಾಲಿಕೆಯಲ್ಲಿ ಈ ಬಗ್ಗೆ ವಿಚಾರಿಸಲು ಬಂದಾಗ ಅವನಿಗೆ ಡಿ ಎನ್ನುವ ಗುತ್ತಿಗೆದಾರ ಸಿಗುತ್ತಾನೆ. ನೀನು ಹಿಡಿದ ಕೆಲಸ ಮುಗಿಯಿತಾ ಎಂದು ಕೇಳುತ್ತಾನೆ. ಅದಕ್ಕೆ ಡಿ ” ಹೌದು, ಮೊನ್ನೆ ನವೆಂಬರ್ ನಲ್ಲಿ ಮುಗಿಯಿತು, ನಿನ್ನೆ ಡಿಸೆಂಬರ್ ಒಂದಕ್ಕೆ ಕೆಲಸದ ಹಣ ಕೂಡ ಸಿಕ್ಕಿತು” ಎಂದು ಹೇಳಿದರೆ ಈ ಎ ಗುತ್ತಿಗೆದಾರನಿಗೆ ಹೇಗಾಗಬೇಡಾ. ನಿನಗೆ ಅಷ್ಟು ಬೇಗ ಹಣ ಹೇಗೆ ಸಿಕ್ಕಿತು ಎಂದು ಇವನು ಕೇಳಿದರೆ ಕಾರ್ಪೋರೇಟರ್ ಗಳನ್ನು ಚೆನ್ನಾಗಿ ಇಟ್ಟುಕೊಂಡಿದ್ದೇನೆ. ಅವರು ಯಾವ ಅಧಿಕಾರಿಗಳಿಗೆ ಎಷ್ಟು ಪ್ರಸಾದ ಕೊಡಬೇಕು ಎಂದು ಹೇಳುತ್ತಾರೆ. ಅಷ್ಟು ಕೊಟ್ಟರೆ ನಿನ್ನ ಹಣ ಕೂಡ ನಾಳೆನೆ ಸಿಗುತ್ತದೆ ಎಂದು ಹೇಳಿದರೆ ಈ ಎ ಗುತ್ತಿಗೆದಾರ ಏನು ಮಾಡಬೇಕು.
ಒಂದು ವೇಳೆ ಒಳ್ಳೆಯ ಕೆಲಸ ಮಾಡಿದ ಗುತ್ತಿಗೆದಾರ ಹಣ ಸಿಗಲು ತಡವಾದಾಗ ಅನಿವಾರ್ಯವಾಗಿ ಲಂಚ ಕೊಟ್ಟು ತನ್ನ ಹಣವನ್ನು ಬಿಡುಗಡೆ ಮಾಡಿಕೊಂಡರೆ ಅವನು ಮುಂದಿನ ಬಾರಿ ಏನು ಮಾಡುತ್ತಾನೆ, ಹೇಗೂ ಲಂಚ ಸದಸ್ಯರಿಗೆ, ಅಧಿಕಾರಿಗಳಿಗೆ ಕೊಡಬೇಕು. ಅದರ ನಂತರ ತನ್ನ ಲಾಭ ನೋಡಬೇಕು, ಅದರ ಮೇಲೆ ಇವರಿಗೆ ಕೆಲಸ ಚೆನ್ನಾಗಿರಬೇಕು ಎಂದು ಹೇಳಿದರೆ ಆಗುತ್ತಾ ಎಂದು ಸಹಜವಾಗಿ ಕಳಪೆ ಕಾಮಗಾರಿ ಮಾಡಲ್ವಾ? ಒಮ್ಮೆ ಕಳಪೆ ಕಾಮಗಾರಿ ಅಭ್ಯಾಸವಾದರೆ ಮುಂದೆ ಏನು? ಅದಕ್ಕೆ ನಾನು ಪ್ರಶ್ನೆ ಕೇಳಿದೆ. “ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಾಮಗಾರಿ ಮುಗಿಸಿ ಲೆಕ್ಕಪತ್ರ ವಿಭಾಗಕ್ಕೆ ಬಂದ ಎಂಬಿ ಪುಸ್ತಕವನ್ನು ಬಿಲ್ ರಿಜಿಸ್ಟಾರ್ ನಲ್ಲಿ ನಮೂದಿಸಲಾಗುತ್ತದೆ. ಅನಂತರ ಪಾಲಿಕೆಯಲ್ಲಿ ಹಣ ಎಷ್ಟಿರುತ್ತದೆಯೋ ಅದಕ್ಕೆ ಹೊಂದಿಕೊಂಡು ಬಿಲ್ ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸಿರುವ ಜೇಷ್ಯತೆಯ ಆಧಾರದಲ್ಲಿ ಬಿಲ್ ಮೊತ್ತವನ್ನು ಹಿಂದಿನಿಂದಲೂ ಪಾವತಿಸಿಕೊಂಡು ಬರಲಾಗುತ್ತಿತ್ತು. ಸುಮಾರು ಆರು ತಿಂಗಳ ಹಿಂದಿನಿಂದ ಪಾಲಿಕೆಯ ಆಯುಕ್ತರು, ಮೇಯರ್ ಮತ್ತು ಲೆಕ್ಕಪತ್ರ ಅಧಿಕಾರಿಗಳು ಜೇಷ್ಠತೆಯನ್ನು ತಪ್ಪಿಸಿಕೊಂಡು ತಮಗೆ ಬೇಕಾದವರಿಗೆ ಬಿಲ್ ಮೊತ್ತ ಪಾವತಿಸಲು ಶಿಫಾರಸ್ಸು ಪತ್ರ ನೀಡಿ ಬಿಲ್ ಪಾವತಿಸುತ್ತಿದ್ದಾರೆ. ಈ ರೀತಿ ಜೇಷ್ಟತೆ ಮೀರಿ ಬಿಲ್ ಮೊತ್ತ ಪಾವತಿಸಿರುವುದರ ಬಗ್ಗೆ ದಿನಾಂಕ 28-02-2017 ರಂದು ಪರಿಷತ್ತು ಸಭೆಯಲ್ಲಿ ಚರ್ಚೆ ನಡೆದು ಜೇಷ್ಟತೆ ಮೀರಿ ಬಿಲ್ ಮೊತ್ತ ಪಾವತಿಸಕೂಡದೆಂದು ಮೇಯರ್ ರೂಲಿಂಗ್ ನೀಡಿದ 12 ದಿವಸಗಳ ನಂತರ ಸುಮಾರು 80 ಲಕ್ಷ ರೂಪಾಯಿ ಜೇಷ್ಟತೆ ಮೀರಿ ಲೆಕ್ಕಪತ್ರ ಅಧಿಕಾರಿಗಳು ಪಾವತಿಸಿದ್ದಾರೆ. ಹೀಗೆ ಜೇಷ್ಟತೆ ಮೀರಿ ಇವರು ಬಿಲ್ ಮೊತ್ತ ಪಾವತಿಸಲು ಗುತ್ತಿಗೆದಾರರಿಂದ ಹಣ ಪಡೆದುಕೊಂಡು ಪಾವತಿಸುತ್ತಿದ್ದಾರೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ” ಎಂದು ಬರೆದೆ.
ಅದಕ್ಕೆ ಏನು ಉತ್ತರ ಬಂದಿದೆ ಗೊತ್ತಾ? ಮಾರಕ ಕಾಯಿಲೆ, ಮದುವೆ, ಮಕ್ಕಳ ಉನ್ನತ ಶಿಕ್ಷಣದ ಆದ್ಯತೆ ನೆಲೆಯಲ್ಲಿ ಪಾವತಿಸಲಾಗಿದೆ. ಒಂದು ಕಡೆ ಹಣ ಕೊಟ್ಟು ಬಿಲ್ ಪಾಸ್ ಮಾಡಿದೆವು ಎಂದು ಗುತ್ತಿಗೆದಾರರೇ ಗುಟ್ಟಾಗಿ ಮಾತನಾಡುತ್ತಿದ್ದರೆ ಅಧಿಕಾರಿಗಳು ಪಾಪ, ಗುತ್ತಿಗೆದಾರನಿಗೆ ಮಾರಕ ಕಾಯಿಲೆಯಂತೆ, ಅದಕ್ಕೆ ಹಣ ಪಾಸ್ ಮಾಡಿದೆವು ಎನ್ನುತ್ತಿದ್ದಾರೆ. ಕಾಯಿಲೆ ಬಂದಿರುವುದು ಇವರ ಮನಸ್ಸಿಗೆ
Leave A Reply