• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಬಿಜೆಪಿ ಸರಕಾರ ಯಶಸ್ವಿಯಾಗಿ ತನ್ನ ಅಜೆಂಡಾ ಈಡೇರಿಸುತ್ತಿದೆ, ಧನ್ಯವಾದಗಳು!!

Hanumantha Kamath Posted On December 31, 2021
0


0
Shares
  • Share On Facebook
  • Tweet It

ನಮ್ಮ ಜಿಲ್ಲೆ, ರಾಜ್ಯ, ರಾಷ್ಟ್ರದ ಯಾವುದೇ ಪ್ರಮುಖ ದೇವಸ್ಥಾನಗಳನ್ನು ತೆಗೆದುಕೊಳ್ಳಿ. ಅದಕ್ಕೆ ಕನಿಷ್ಟ 2-3 ಶತಮಾನಗಳ ಹಿನ್ನಲೆ ಇರುವುದನ್ನು ಕಾಣಬಹುದು. ಅದರ ಅರ್ಥ ದೇವಸ್ಥಾನಗಳನ್ನು ನಮ್ಮ ಪೂರ್ವಜರು, ರಾಜ ಮಹಾರಾಜರು ಸಹಿತ ಆಗಿನ ಋಷಿ ಪರಂಪರೆಯಲ್ಲಿ ಸಂತ, ಮುನಿಗಳು ಕಟ್ಟಿದ್ದರು. ಭಕ್ತರ ಉದಾರ ಸಹಾಯದಿಂದ ದೇವಸ್ಥಾನಗಳನ್ನು ಕಟ್ಟಿ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಛಲ ಅವರಲ್ಲಿ ಇತ್ತು. ಕೆಲವು ದೇವಸ್ಥಾನಗಳು ತಮ್ಮಲ್ಲಿ ಪ್ರತಿಷ್ಟಾಪಿಸಲ್ಪಟ್ಟ ದೇವರ ಕಾರಣೀಕ, ಭಕ್ತರ ನಂಬಿಕೆ, ಅಲ್ಲಿ ನಡೆಯುವ ಸಂಪ್ರದಾಯದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸಿದವು. ಕಾಣಿಕೆ, ದೇಣಿಗೆಗಳು ಹರಿದುಬಂದವು. ಅಂತಹ ದೇವಸ್ಥಾನಗಳು ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಸೇರಿದವು. ಹಾಗೆ ಕಾಣಿಕೆ ಡಬ್ಬಿಗಳು ವಾರಕ್ಕೊಂದು ಸಲ ತೆರೆದು ಲೆಕ್ಕ ಮಾಡುವ ಪದ್ಧತಿಯಿಂದ ಮೂಡಿ ಬಂದ ಪ್ರಶ್ನೆ ಏನೆಂದರೆ ಆ ಹಣವನ್ನು ಏನು ಮಾಡುವುದು? ಆ ಹಣ ಸರಕಾರದ ಬೊಕ್ಕಸಕ್ಕೆ ಹೋಗಬೇಕು ಎಂದು ಹಿಂದಿನ ಸರಕಾರಗಳು ತೀರ್ಮಾನಿಸಿದವು. ಹಾಗೆ ಆರಂಭವಾದ ಸುಪರ್ದಿ ಪಡೆಯುವ ಕೆಲಸ ಒಂದೊಂದರಂತೆ ನಡೆದು ಈಗ ನಮ್ಮ ರಾಜ್ಯ ಸರಕಾರದ ಅಧೀನದಲ್ಲಿ 35 ಸಾವಿರ ದೇವಸ್ಥಾನಗಳು ಇವೆ. ಇಷ್ಟಾಗುವಾಗ ದೇವಸ್ಥಾನಗಳ ಉಸ್ತುವಾರಿಗಳನ್ನು ನೋಡಲು ಒಂದು ಇಲಾಖೆ ಬೇಕಲ್ಲ. ಅದನ್ನು ಸರಕಾರ ನೇಮಿಸಿತು. ಅದನ್ನು ಮುಜುರಾಯಿ ಇಲಾಖೆ ಎಂದು ಕರೆಯಲಾಯಿತು. ಅದು ಈಗ ಧರ್ಮಾದಾಯ ದತ್ತಿ ಇಲಾಖೆ ಎಂದು ಕರೆಯಲಾಗುತ್ತದೆ. ಈಗ ಈ ಎಲ್ಲಾ 55 ಸಾವಿರ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಬಿಡಿಸುವ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಇದು ಇನ್ನು ಜಾರಿಗೆ ಬಂದಿಲ್ಲ. ಆದರೆ ಸಿಎಂ ಘೋಷಣೆ ಮಾಡಿರುವುದರಿಂದ ಮತ್ತು ಮುಂದಿನ ಬಜೆಟ್ ಅಧಿವೇಶನದ ಮೊದಲು ಜಾರಿಗೆ ತರುತ್ತೇವೆ ಎಂದು ಹೇಳಿರುವುದರಿಂದ ಅದು ಜಾರಿಗೆ ಬರುವುದು ಬಹುತೇಕ ಗ್ಯಾರಂಟಿಯಾಗಿದೆ. ಇದನ್ನು ಎಲ್ಲಾ ಹಿಂದೂಗಳು (ಕಾಂಗ್ರೆಸ್ಸಿನ ಡಿಕೆಶಿಯಂತವರು ಬಿಟ್ಟು) ಖುಷಿಯಿಂದ ಸ್ವಾಗತಿಸಿದ್ದಾರೆ. ಇದರಲ್ಲಿ ಖುಷಿಪಡುವಂತದ್ದು ಏನು ಇದೆ ಎಂದು ನೀವು ಕೇಳಬಹುದು. ನೀವು ಮುಜುರಾಯಿ ಇಲಾಖೆಯ ಯಾವುದೇ ದೇವಸ್ಥಾನಕ್ಕೆ ಹೋದರೆ ನಿಮಗೆ ಅಲ್ಲಿ ಒಂದು ವಿಷಯ ಸ್ಪಷ್ಟವಾಗಿ ಕಾಣಿಸುತ್ತದೆ. ಅದೇನೆಂದರೆ ಈ ದೇವಾಲಯಕ್ಕೆ ಇಷ್ಟು ಕಾಣಿಕೆಯಿಂದ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ. ಆದರೆ ಸರಿಯಾಗಿ ಒಂದು ಟಾಯ್ಲೆಟ್ ಕಟ್ಟಿಸಲು ಆಗಲ್ಲ ಎನ್ನುವ ಮಾತನ್ನು ಎಷ್ಟೋ ಜನ ಹೇಳಿದ್ದು ನೀವು ಕೇಳಿರುತ್ತೀರಿ ಅಥವಾ ನೀವೆ ಹೇಳಿರುತ್ತೀರಿ ಅಥವಾ ಅನುಭವಿಸುತ್ತೀರಿ. ಅದೇಕೆ ಹೀಗೆ ಎನ್ನುವ ಪ್ರಶ್ನೆಗೆ ನಿಮಗೆ ಹಿಂದೆ ಉತ್ತರ ಗೊತ್ತಿರಲಿಕ್ಕಿಲ್ಲ. ಇನ್ನು ಇವತ್ತಿಗೂ ಅನೇಕರಿಗೆ ಆ ಪ್ರಶ್ನೆಗೆ ಉತ್ತರ ಅಥವಾ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ವಿಷಯ ಏನೆಂದರೆ ಒಂದು ಮುಜುರಾಯಿ ಅಧೀನ ದೇವಸ್ಥಾನದಲ್ಲಿ ಒಂದು ಸಣ್ಣ ಶೌಚಾಲಯ ಕಟ್ಟಬೇಕಾದರೂ ಅದಕ್ಕೆ ಸಾಕಷ್ಟು ಪ್ರಕ್ರಿಯೆ ಇದೆ. ಅದು ದೇವಸ್ಥಾನದ ಆಡಳಿತ ಮಂಡಳಿಯಿಂದ ಸರಕಾರ ನೇಮಿಸಿದ ಆಡಳಿತಾಧಿಕಾರಿಯ ಮೂಲಕ ಸಂಬಂಧಪಟ್ಟ ಇಲಾಖೆಗೆ ಹೋಗಿ ಅಲ್ಲಿ 35 ಸಾವಿರ ದೇವಸ್ಥಾನಗಳ ಫೈಲಿನಿಂದ ಒಂದು ಫೈಲ್ ಹೊರಗೆ ಬಂದು ಆ ಫೈಲಿನ ಮೂವತ್ತು-ನಲ್ವತ್ತು ಕಾಗದದ ನಡುವೆ ಬರೆದಿರುವ ಶೌಚಾಲಯ ಮನವಿಯ ಕಾಗದ ಹೊರಗೆ ತೆಗೆದು ಅದರ ನಿಜವಾದ ಅಗತ್ಯ ಇದೆಯಾ ಎಂದು ಪರಿಶೀಲಿಸಿ ಅದು ಓಕೆ ಆಗಿ ಅದನ್ನು ಇಲಾಖೆಯ ಕಾರ್ಯದರ್ಶಿ ಆ ಇಲಾಖೆಯ ಮಂತ್ರಿಗೆ ಹೇಳಿ ಅವರು ಸಹಿ ಹಾಕಿ ಅದನ್ನು ನಿರ್ಮಿತಿ ಕೇಂದ್ರವೋ ಅಥವಾ ಟೆಂಡರ್ ಕರೆಯಲು ಇದ್ರೆ ಅದರ ಮೂಲಕ ಕರೆಸಿ ಅದನ್ನು ಕಟ್ಟಿ ಮುಗಿಯುವಾಗ ಎಷ್ಟು ವರ್ಷ ಹಿಡಿಯುತ್ತೆ ಎನ್ನುವುದು ಅದಕ್ಕೆ ಓಡಾಡಿ ಮಾಡಿಸಿದವರಿಗೆ ಮಾತ್ರ ಕಷ್ಟ ಗೊತ್ತು. ಹೆಚ್ಚಿನ ದೇವಸ್ಥಾನಗಳಲ್ಲಿ ಆ ಊರಿನ ಬಿಳಿಪಂಚೆ, ಬಿಳಿಶರ್ಟ್ ನ ಧರಿಸಿದ ಒಂದು ಚೂರು ಓಡಾಡಿದರೆ ಇಸ್ತ್ರಿ ಹಾಳಾಗುತ್ತೆ ಎಂದು ಅಂದುಕೊಳ್ಳುವವರೇ ಟ್ರಸ್ಟಿ ಆದರೆ ಅವರು ಬೆಂಗಳೂರಿಗೆ ಓಡಾಡಿ ಅದನ್ನು ಮಾಡಿಸಿ ತರುವ ಕೆಲಸಕ್ಕೆ ಮುಂದಾಗುವುದಿಲ್ಲ.

ಇನ್ನು ಪುರೋಹಿತರಿಗೆ ಅದರ ಅಗತ್ಯ ಇಲ್ಲ ಮತ್ತು ಅದಕ್ಕೆ ಸಮಯಾವಕಾಶ ಇಲ್ಲದಿರುವುದರಿಂದ ಅವರು ಕೈ ಹಾಕಲು ಹೋಗುವುದೇ ಇಲ್ಲ. ಆದ್ದರಿಂದ ಮುಜುರಾಯಿ ದೇವಸ್ಥಾನಗಳು ಆವತ್ತು ರಾಜರು ಕಟ್ಟಿಸಿದಾಗ ಹೇಗಿತ್ತೋ ಇವತ್ತಿಗೂ ಹಾಗೆ ಇರುತ್ತವೆ. ನೀವು ಬೇಕಾದರೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಲ್ಲಿ ದೇವರಿಗೆ ಬಂಗಾರದ ಪಲ್ಲಂಕಿ ಮಾಡಿಸಲು ಆರೇಳು ವರ್ಷಗಳೇ ತಗುಲಿದವು. ಅದೇನು ಸರಕಾರ ಕೊಡಬೇಕಾದ ಹಣ ಅಲ್ಲ. ಕೇವಲ ಒಪ್ಪಿಗೆ ಸಿಗಲು ಇಷ್ಟು ತಡವಾದರೆ ದೇವಸ್ಥಾನಗಳು ಅಭಿವೃದ್ಧಿಯಾಗಬೇಕು, ದೇವರ ಕಾರ್ಯಕ್ರಮಗಳು ವಿಜೃಂಭಿಸಬೇಕು ಎಂದು ಭಕ್ತರು ಹಾಕುವ ಕಾಣಿಕೆಗಳ ಹಿಂದಿನ ನಂಬಿಕೆಗೆ ಏನಾಗಬೇಕು? ಇನ್ನು ಸರಕಾರಗಳು ದೇವಸ್ಥಾನಗಳನ್ನು ಮಾತ್ರ ಯಾಕೆ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತವೆ, ಚರ್ಚು, ಮಸೀದಿಗಳನ್ನು ಯಾಕೆ ಕೈ ಹಾಕಲು ಹೋಗಲ್ಲ, ಅಲ್ಲಿನ ಹಣ ಯಾಕೆ ರಾಜ್ಯ ಸರಕಾರಕ್ಕೆ ಹೋಗಲ್ಲ ಎಂದು ಅನೇಕರ ಮನಸ್ಸಿನಲ್ಲಿ ಒಂದು ಯಕ್ಷಪ್ರಶ್ನೆ ಯಾವಾಗಲೂ ಉದ್ಭವಿಸುತ್ತಿತ್ತು. ಇನ್ನು ಮುಜುರಾಯಿ ದೇವಸ್ಥಾನಗಳಲ್ಲಿ ನಾವು ಹಾಕಿದ ಹಣವನ್ನು ಸರಕಾರ ಮಸೀದಿ, ಚರ್ಚು, ಹಜ್ ಸಬ್ಸಿಡಿ ಸಹಿತ ಬೇರೆ ಬೇರೆ ಖರ್ಚಿಗೆ ಉಪಯೋಗಿಸುತ್ತದೆ, ಅದಕ್ಕೆ ನಮ್ಮ ದೇವಸ್ಥಾನದ ಕಾಣಿಕೆ ಹಣವೇ ಬೇಕಾ ಎಂದು ಕೇಳುವವರು ಇದ್ದರು. ಬಹುಶ: ಸಂಕ್ರಾತಿಯ ನಂತರ ಮಾರ್ಚ್ ಒಳಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದದ್ದು ಸಾರ್ಥಕವಾಯಿತು ಎಂದು ಹೆಚ್ಚಿನ ಆಸ್ತಿಕರಿಗೆ ಅನಿಸುತ್ತಿದೆ!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search