ತ್ರೈಮಾಸಿಕ ಜಿಎಸ್‍ಟಿ ಸಲ್ಲಿಕೆ, 27 ವಸ್ತುಗಳಿಗೆ ತೆರಿಗೆ ಹೊರೆ ಇಳಿಕೆ
ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಉತ್ತೇಜಿಸಲು ಜಿಎಸ್‍ಟಿಗೆ ಗಣನೀಯ ಸುಧಾರಣೆ ತಂದಿದ್ದೇವೆ. ನಮ್ಮ ಪ್ರಜೆಗಳ ಹಿತ ಕಾಯುವ ಜವಾಬ್ದಾರಿ ಜತೆಗೆ ದೇಶದ ಆರ್ಥಿಕತೆ ಸದೃಢಗೊಳಿಸುವ ನಮ್ಮ ನಿರಂತರ ಯತ್ನ ಸಾಗುತ್ತಲೇ ಇರುತ್ತದೆ.
– ಪ್ರಧಾನಿ ಮೋದಿ
>> ರೂ. 1.5 ಕೋಟಿ ಒಳಗಿನ ವಾರ್ಷಿಕ ವಹಿವಾಟು ನಡೆಸುವ ಕಂಪನಿಗಳಿಗೆ ತ್ರೈಮಾಸಿಕ ರಿಟನ್ರ್ಸ್ ಸಲ್ಲಿಕೆಗೆ ಅವಕಾಶ
>> ರೂ. 50 ಸಾವಿರಕ್ಕೂ ಹೆಚ್ಚು ಮೊತ್ತದ ಆಭರಣ ಖರೀದಿಗೆ ಪ್ಯಾನ್ ಅಥವಾ ಆಧಾರ್ ಕಡ್ಡಾಯ.
>> >> ಜುಲೈ-ಆಗಸ್ಟ್‍ನಲ್ಲಿ ಜಿಎಸ್‍ಟಿ ಸಲ್ಲಿಸಿದವರಿಗೆ ಅ.18ರೊಳಗೆ ರೂ. 65 ಸಾವಿರ ಕೋಟಿ ರಿಟನ್ರ್ಸ್ ಹಂಚಿಕೆ
>> ಕಂಪೋಷಿನ್ ಯೋಜನೆ ಅಡಿ ಕನಿಷ್ಠ ಮಿತಿ ರೂ. 75 ಲಕ್ಷದಿಂದ ರೂ. 1 ಕೋಟಿಗೆ ಏರಿಕೆ
>> ರಫ್ತುದಾರರಿಗೆ ರಿಟನ್ರ್ಸ್ ಸಲ್ಲಿಕೆಗೆ ಅನುಕೂಲಕ್ಕೆ ಏ.1, 2018ರೊಳಗೆ ಸರ್ಕಾರದಿಂದ ಇ-ವ್ಯಾಲೆಟ್ ಅಭಿವೃದ್ಧಿ
ನವದೆಹಲಿ: ದೇಶಾದ್ಯಂತ ಏಕರೂಪ ಪರೋಕ್ಷ ತೆರಿಗೆ ಪದ್ಧತಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಕತ್ತಹಿಸುಕುತ್ತಿದೆ ಎಂಬ ಪ್ರತಿಪಕ್ಷಗಳ ಕಪೋಲಕಲ್ಪಿತ ಸ್ವಹಿತಾಸಕ್ತಿ ಆರೋಪಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ತಿರುಗೇಟು ನೀಡಿದ್ದಾರೆ. ಈ ಬಾರಿ ವಾಗ್ದಾಳಿ ಬದಲಿಗೆ ಮಹತ್ವದ 22ನೇ ಜಿಎಸ್‍ಟಿ ಸಮಿತಿ ಸಭೆ ನಡೆಸಿ, ಹಲವು ಸುಧಾರಣೆಗಳ ಮೂಲಕ ಮಧ್ಯಮ ವರ್ಗದ ಹಿತ ಕಾಯ್ದಿದ್ದಾರೆ. ಸ್ವದೇಶಿ, ಬ್ರ್ಯಾಂಡ್‍ರಹಿತ ಚಿಲ್ಲರೆ ವ್ಯಾಪಾರಿಗಳು, ಕೈಮಗ್ಗ ಸೇರಿದಂತೆ ಸುಮಾರು 27 ವಸ್ತುಗಳ ಮೇಲಿನ ಜಿಎಸ್‍ಟಿ ಸ್ಲ್ಯಾಬ್ ಸಡಿಲಿಕೆಯಿಂದ ವ್ಯಾಪಾರಿಗಳಲ್ಲಿ ನಗುಮೂಡಿದೆ.
ಜಿಎಸ್‍ಟಿ ಕಡಿಮೆಯಾಗಿರುವ ವಸ್ತುಗಳು
* ಸೀಳಿದ ಒಣ ಮಾವು(ಔಷಧಿ, ಉಪ್ಪಿನಕಾಯಿ)
* ಮಾನವ ತಯಾರಿಕೆಯ ನೂಲು
* ಪಂಪ್‍ಗಳ ಕೆಲ ಭಾಗಗಳು
* ಡೀಸೆಲ್ ಇಂಜಿನ್ ಭಾಗಗಳು
* ಕ್ಲಿಪ್ ಹಾಗೂ ಕೆಲವು ಸ್ಟೇಷನರಿ ವಸ್ತುಗಳು
* ಮಾರ್ಬಲ್, ಗ್ರಾನೈಟ್ ಹೊರತಾಗಿ ನೆಲಕ್ಕೆ ಹಾಕುವ ಕಲ್ಲುಗಳು
* ಬ್ರ್ಯಾಂಡ್ ರಹಿತ ಆಯುರ್ವೇದ ಔಷಧಿಗಳು
* ಬ್ರ್ಯಾಂಡ್ ರಹಿತ ಉಪ್ಪು
* ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ(ಐಸಿಡಿಎಸ್) ಅಡಿಯಲ್ಲಿ ನೀಡಲಾಗುವ ಮಕ್ಕಳ ಆಹಾರ
ತೆರಿಗೆ ಪಾವತಿದಾರರಲ್ಲಿ ಶೇ.90ರಷ್ಟಿರುವ ರೂ. 1.5 ಕೋಟಿ ಒಳಗಿನ ವಹಿವಾಟು ನಡೆಸುವ ವ್ಯಾಪಾರಿಗಳ ಹಿತ ಕಾಯುವುದು ನಮ್ಮ ಕರ್ತವ್ಯ. ಅವರ ಅನುಕೂಲಕ್ಕೆ ತ್ರೈಮಾಸಿಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಿದ್ದೇವೆ. ಪ್ರತಿ ತಿಂಗಳು ಜಿಎಸ್‍ಟಿ ಕಟ್ಟುವ ಗೊಂದಲ ಅವರಿಗೆ ಬೇಡ ಎಂದು ಜೇಟ್ಲಿ ಹೇಳಿದ್ದಾರೆ.
ಇದರಿಂದಾಗಿ ಜಿಎಸ್‍ಟಿಎನ್ ಪೋರ್ಟಲ್‍ನಲ್ಲಿ ವ್ಯಾಪಾರಿಗಳ ಮುಗುಬೀಳುವಿಕೆ ಜತೆಗೆ ಕ್ಲಿಷ್ಟಕರ ತೆರಿಗೆ ಅರ್ಜಿ ನಮೂನೆಗಳಿಂದ ವ್ಯಾಪಾರಿಗಳಿಗೆ ಚೇತರಿಕೆಗೆ ಸಮಯ ಸಿಕ್ಕಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಪೊಸಿಷನ್ ಯೋಜನೆ ಅನ್ವಯ ವ್ಯಾಪಾರಿಗಳು 1% , ಉತ್ಪಾದಕರು/ತಯಾರಕರು 2%, ರೆಸ್ಟೊರೆಂಟ್‍ಗಳು 5% ಜಿಎಸ್‍ಟಿ ಪಾವತಿಸಬೇಕಿದೆ. ರೂ. 2 ಕೋಟಿಗೂ ಅಧಿಕ ವಹಿವಾಟು ನಡೆಸುವ ಹರಳು, ಆಭರಣ ಮತ್ತು ಐಷಾರಾಮಿ ವಸ್ತುಗಳ ತಯಾರಕರು/ಮಾರಾಟ ಸಂಸ್ಥೆಗಳು ಹಣ ವರ್ಗಾವಣೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
Leave A Reply