ಮಲೇರಿಯಾದಲ್ಲಿ ರಾಜ್ಯಕ್ಕೆ ದ.ಕ ಪ್ರಥಮ:- ಯಾಕೆ ಹೀಗಾಯ್ತು ಗೊತ್ತಾ?

165

ಕರಾವಳಿಯಲ್ಲಿ  ಇತ್ತೀಚಿನ ವರ್ಷಗಳಲ್ಲಿ  ಹೆಚ್ಚಿನ ಮಲೇರಿಯಾ,  ಡೆಂಗ್ಯೂ ಪ್ರಕರಣಳು ಕಾಣಿಸಿಕೊಳ್ಳುತ್ತಿವೆ.ಅದರಲ್ಲೂ  ಅಭಿವೃದ್ಧಿ, ವ್ಯವಹಾರ, ಶಿಕ್ಷಣ, ಉದ್ಯಮ ಸೇರಿದಂತೆ ಪ್ರತಿಯೊಂದರಲ್ಲೂ  ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಲೇರಿಯಾದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಉಡುಪಿ ದ್ವಿತೀಯ ಸ್ಥಾನದಲ್ಲಿದ್ದು, ಡೆಂಗ್ಯೂನಲ್ಲಿ ಮೈಸೂರು ಪ್ರಥಮ ಸ್ಥಾನ ಉಡುಪಿ ದ್ವಿತೀಯ ಸ್ಥಾನ ಪಡೆದಿದೆ.  ಈ ನಿಟ್ಟಿನಲ್ಲಿ  ಸಂಪೂರ್ಣ  ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಮಲೇರಿಯಾ ಮುಕ್ತ ಕರಾವಳಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದ.ಕ ಜಿಲ್ಲೆಯಲ್ಲಿ ಮಲೇರಿಯಾ ಸಂಪೂರ್ಣ ಹತೋಟಿಗೆ ತಂದರೆ ಮಾತ್ರ 2022 ರಲ್ಲಿ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸಲು ಸಾಧ್ಯವಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಮಂಗಳೂರು ನಗರದಲ್ಲಿ ವಿಶೇಷವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಲೇರಿಯಾ ಮುಕ್ತ ನಗರ ನಿರ್ಮಾಣ ಉದ್ದೇಶದಿಂದ ಕಾರ್ಯಾಚರಿಸಲು ಜಿಲ್ಲಾ ಆರೋಗ್ಯಾಧಿಕಾರಿ, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಸರಕಾರಿ ವೈದ್ಯರು, ಮಹಾನಗರಪಾಲಿಕೆ ಅಧಿಕಾರಿಗಳು, ಮೆಡಿಕಲ್‌ ಕಾಲೇಜು, ನರ್ಸಿಂಗ್ವಿದ್ಯಾರ್ಥಿಗಳು, ಅನ್ಯ ಜಿಲ್ಲೆಗಳ ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳಲಾಗಿದೆ. ಮಲೇರಿಯಾಕ್ಕೆ ರೋಗದ ಅನಾಫಿಲಿಸ್‌ ಸೊಳ್ಳೆ ಉತ್ಪತ್ತಿಯಾಗುವುದೇತಿಳಿ ನೀರಿನಲ್ಲಿ. ಮಾಹಿತಿ ಪ್ರಕಾರ ಮಂಗಳೂರಿನಲ್ಲಿ  ಸುಮಾರು 11 ಸಾವಿರ ಬಾವಿ, ಕೆರೆಗಳಿದ್ದು, ಇವುಗಳಿಗೆ ಪ್ರತಿಯೊಂದಕ್ಕೆ ಕನಿಷ್ಠ 100 ರಿಂದ 150 ಗಪ್ಪಿ ಮೀನು ಹಾಕುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಚಿಕೂನ್ಗುನ್ಯಾ, ಆನೆಕಾಲು, ಮೆದುಳು ಜ್ವರದ ಪ್ರಮಾಣಕಡಿಮೆಯಾಗುತ್ತಿದೆ. ಸ್ವಯಂ ಜಾಗೃತಿ ಹಾಗೂ ಮುನ್ನೆಚ್ಚರಿಕೆಯಿಂದ ಮಳೆಗಾಲದಲ್ಲಿ ಬರುವ ಕಾಯಿಲೆ ತಡೆಗಟ್ಟಲುಸಾಧ್ಯ. ಮನೆಯ ಆವರಣದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಜ್ವರ ಅಥವಾ ಯಾವುದೇ ರೀತಿಯ ರೋಗದ ಲಕ್ಷಣ ಕಂಡುಬಂದರೆ ಶೀಘ್ರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರಕ್ತ ಪರೀಕ್ಷೆಮಾಡಿ ನೀರಿನ ಮಿತ, ಸಮರ್ಪಕ ಬಳಕೆ ಜತೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ.

ವಿ.ಕೆ ಕಡಬ

 

LEAVE A REPLY