ಜನತಾ ಡಿಲಕ್ಸ್ ಇರುವುದು ಪಾರ್ಕಿಂಗ್ ಎಂದು ಮೀಸಲಿಟ್ಟ ಜಾಗದಲ್ಲಿ.
ಮಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆ ಕೊನೆಗಾಣಿಸ ಬೇಕಾದರೆ ಮಂಗಳೂರು ನಗರ ಪೋಲಿಸ್ ಕಮಿಷನರ್ ನಗರ ಪ್ರದಕ್ಷಿಣೆ ಹಾಕಬೇಕು ಒಟ್ಟಿಗೆ ಶಾಸಕರು,ಮೇಯರ್,ಪಾಲಿಕೆ ಕಮಿಷನರ್ ಕೂಡ ಇರಲಿ ಅಗ ಇವರೆಲ್ಲರಿಗು ನಗರದ ಟ್ರಾಪಿಕ್ ಸಮಸ್ಯೆ ಗಮನಕ್ಕೆ ಬರುತ್ತದೆ.
ಈ ವಾರದಲ್ಲಿ ನಿಮಗೆ ಮಂಗಳೂರಿನ ಟ್ರಾಫಿಕ್ ಸಮಸ್ಯೆ ಯಾಕೆ ಮುಗಿಯಲು ಸಾಧ್ಯವಿಲ್ಲ ಎಂದು ನಾನು ವಿವರಿಸುತ್ತಾ ಹೋಗುತ್ತೇನೆ. ನಗರದ ಟ್ರಾಫಿಕ್ ಸಮಸ್ಯೆ ಅರ್ಧಕರ್ಧ ಸರಿಯಾಗಬೇಕಾದರೆ ಇಲ್ಲಿ ಮೊದಲು parking ವ್ಯವಸ್ಥೆ ಸರಿಯಾಗಬೇಕು. ಶ್ರೀಮಂತ ವ್ಯಾಪಾರಿಗಳು ಪಾಲಿಕೆಯನ್ನು ಕ್ಯಾರ್ ಮಾಡುವುದಿಲ್ಲದ ಕಾರಣ ಮತ್ತು ಹಣ ಕೊಟ್ಟು ಪಾಲಿಕೆಯ ಅಧಿಕಾರಿಗಳನ್ನು ಸರಿ ಮಾಡಿಕೊಳ್ಳುತ್ತೆವೆ ಎನ್ನುವ ವಿಶ್ವಾಸ ಎಲ್ಲಿಯ ತನಕ ಜೀವಂತವಾಗಿ ಇರುತ್ತದೊ ಅಲ್ಲಿಯ ತನಕ ಈ parking ಅವ್ಯವಸ್ಥೆ ಜೀವಂತವಾಗಿಯೇ ಇರುತ್ತದೆ. ಹೊಸ ಪಾಲಿಕೆ ಕಮಿಷನರ್ ಮತ್ತು ಮೇಯರ್ ರವರು ಪಾಲಿಕೆಯಲ್ಲಿ ನಡಿಯುವ ನಗರ ಯೋಜನಾ ಅಧಿಕಾರಿಗಳ ಮೇಲೆ ಒಂದು ಕಣ್ಣಿಡ ಬೇಕು.
ನಾನು ನಿನ್ನೆಯಿಂದ ಪ್ರಾರಂಭಿಸಿರುವ ಮಂಗಳೂರಿನ ಬಳ್ಳಾಲ್ ಭಾಗ್ ಸಮೀಪವಿರುವ ಇರುವ ಪತ್ತುಮುಡಿ ಸೌಧವನ್ನೆ ತೆಗೆದುಕೊಳ್ಳಿ.
E4-BA-40/99-2000 ನೋಂದಣೆ ಸಂಖ್ಯೆ ಇರುವ ಕಟ್ಟಡ construction ಕ್ಕೆ 17.11.1999 ರಂದು 2,053.87 ಚದರ ಮೀಟರ್ ವಿಸ್ತ್ರೀರ್ಣದ ಕಟ್ಟಡ ಕಟ್ಟಲು ಲೈಸೆನ್ಸ್ ಸಿಕ್ಕಿರುತ್ತದೆ. ಕಟ್ಟಡ ಕಟ್ಟಿ ಮುಕ್ತಾಯವಾಗುವಾಗ ಅದರ ವಿಸ್ತ್ರೀರ್ಣ 2,132.88 ಚ.ಮೀ ಆಗಿತ್ತು. ಆದ್ದರಿಂದ E4-BA-17/2001-02 ನೋಂದಣೆ ಸಂಖ್ಯೆಯ ಹೆಸರಿನಲ್ಲಿ 1.9.2001 ರಂದು ಆ ಕಟ್ಟಡದ ಮಾಲೀಕರಿಗೆ ಪರಿಷ್ಕತ ಲೈಸೆನ್ಸ್ ಕೊಡಲಾಗಿತ್ತು. ಅದರ ನಂತರ 27.10.2001 ರಂದು ಆ ಕಟ್ಟಡಕ್ಕೆ Completion Certificate ಕೊಡಲಾಗುತ್ತದೆ. ಹಾಗೆ ಮಂಗಳೂರಿನಲ್ಲಿ ಈಗ ಬಹಳ ಫೇಮಸ್ ಆಗಿರುವ ಪತ್ತುಮುಡಿ ಸೌಧ ಆವತ್ತು ತಲೆ ಎತ್ತಿತ್ತು. ಆದರೆ 2007 ರಲ್ಲಿ ಆ ಕಟ್ಟಡದ parking ಗೆಂದು ಇರುವ 315.03 ಚ.ಮೀ parking ಜಾಗದಲ್ಲಿ ಹೊಟೇಲೊಂದು ಧಿಡೀರ್ ಉದ್ಭವಿಸುತ್ತದೆ. ಅದರ ಹೆಸರೇ ಜನತಾ ಡಿಲಕ್ಸ್. parking ಗೆಂದು ಇರುವ ಜಾಗದಲ್ಲಿ ಹೋಟೇಲ್ ಪ್ರಾರಂಭವಾದಾಗ ಆ ಬಗ್ಗೆ ಮನಪಾಗೆ ದೂರು ದಾಖಲಾಗುತ್ತದೆ. ಆಗ ಸಹಾಯಕ ನಗರ ಯೋಜನಾ ಅಧಿಕಾರಿಗಳು ಅಲ್ಲಿ ಬಂದು ಸ್ಥಳ ತನಿಖೆ ನಡೆಸಿ parking ಸ್ಥಳದಲ್ಲಿ ಉಪಹಾರ ಗೃಹ construction ವಾಗಿರುವುದು ನಿಜ ಎಂದು ವರದಿ ಕೊಡುತ್ತಾರೆ. parking ಗಾಗಿ ಮಾತ್ರ ಎಂದು ಇರುವ 315.03 ಚ.ಮೀ ಜಾಗದಲ್ಲಿ 271.11 ಚ.ಮೀ ಜಾಗವನ್ನು ಉಪಹಾರಗೃಹ ಮಾಡಲಾಗಿದೆ ಎನ್ನುವ ವರದಿ ಪಾಲಿಕೆಯಲ್ಲಿ ದಾಖಲಾದ ಬಳಿಕ 15.12.2007 ರಂದು ಹೊಟೇಲಿನ ಮಾಲೀಕರಿಗೆ ನೋಟಿಸು ಹೋಗುತ್ತದೆ “ಏಳು ದಿನಗಳೊಳಗೆ parking ಗಾಗಿ ಎಂದು ನಿಗದಿ ಆಗಿರುವ ಜಾಗದಲ್ಲಿ ಇರುವ ಉಪಹಾರ ಗೃಹವನ್ನು ತೆರವು ಮಾಡಬೇಕು”
ಆಗ ಪಾಲಿಕೆಯಲ್ಲಿ ಆಯುಕ್ತರಾಗಿದ್ದವರು ಕೃಷ್ಣಪ್ಪ ಪೂಜಾರಿಯವರು. ಅವರು ತಮ್ಮ ನೋಟಿಸಿನಲ್ಲಿ ಸ್ಪಷ್ಟವಾಗಿ ಬರೆಯುತ್ತಾರೆ. ಈ ನೋಟಿಸು ಸಿಕ್ಕಿದ ಏಳು ದಿನಗಳೊಳಗೆ ಅನಧಿಕೃತ construction ವನ್ನು ತೆರವುಗೊಳಿಸಬೇಕು. ಹಾಗೆ ಪಾಲಿಕೆಯ ಆಯುಕ್ತರು ತಮ್ಮ ಅಧಿಕಾರಿಗಳಿಗೂ ಸೂಚನೆ ನೀಡುತ್ತಾರೆ- “ಆ ಅನಧಿಕೃತ construction ಸ್ಥಳಕ್ಕೆ ಅಳವಡಿಸಿರುವ ನೀರಿನ ಪೂರೈಕೆ ಮತ್ತು ಒಳಚರಂಡಿ ಸಂಪರ್ಕದ ವ್ಯವಸ್ಥೆಯನ್ನು ತಕ್ಷಣ ರದ್ದು ಮಾಡಬೇಕು”. ಅದರೆ ಆಯುಕ್ತರು ಹೇಳಿದ ಯಾವುದೇ ಸೂಚನೆ ಜಾರಿಗೆ ಬರುವುದೇ ಇಲ್ಲ, ಅದರ ಬದಲಿಗೆ 7.1.2008 ರಂದು ಆ ಹೋಟೇಲಿನ ಧಣಿ ಮನಪಾಗೆ ಒಂದು ಪತ್ರ ಬರೆಯುತ್ತಾರೆ. ಆ ಹೋಟೆಲಿನ ಹತ್ತಿರ ನಮ್ಮದೇ ಒಂದಿಷ್ಟು ಜಾಗವಿದೆ. ಇಲ್ಲಿ parking ಗಾಗಿ ಜಾಗ ಇಲ್ಲದಿರುವುದರಿಂದ ವಾಹನಗಳನ್ನು ಹತ್ತಿರದಲ್ಲಿರುವ ಖಾಲಿ ಜಾಗದಲ್ಲಿ parking ಮಾಡಿಸುತ್ತೇವೆ. ಇನ್ನು ನಾವು ಹಾಲ್ ಎಂದು ಇರುವುದನ್ನು ತೆಗೆದು ವಸತಿ ಗೃಹ ಎಂದು ಬದಲಾಯಿಸುತ್ತೇವೆ.
ಅವರ ಪತ್ರ ಪಾಲಿಕೆಯನ್ನು ತಲುಪಿದ ಬಳಿಕ ಅದನ್ನು ಓದಿದ ಆಯುಕ್ತರು ಮತ್ತೆ ಅಧಿಕಾರಿಗಳನ್ನು ಕರೆಸುತ್ತಾರೆ. ಪಾಲಿಕೆಯ ಕಮೀಷನರ್, ಅಧಿಕಾರಿಗಳು ಮತ್ತು ಹೋಟೇಲಿನ ಮಾಲೀಕರ ನಡುವೆ ಏನೂ ಮಾತುಕತೆ ಆಯಿತೊ ಏನೊ 31.3.2008 ರಂದು ಇದೇ ಕೃಷ್ಣಪ್ಪ ಪೂಜಾರಿ ಹೊಸ ಆದೇಶ ನೀಡುತ್ತಾರೆ ” ವಾಹನ ನಿಲುಗಡೆಗೆ ಬದಲಿ ವ್ಯವಸ್ಥೆ ಮಾಡಿರುವುದರಿಂದ ಈ ಅನಧಿಕೃತ construction ಪ್ರಕರಣವನ್ನು ಕೈಬಿಡುತ್ತಿದ್ದೇವೆ” ಕೃಷ್ಣಪ್ಪ ಪೂಜಾರಿ ಅಷ್ಟು ಬೇಗ ತಮ್ಮ ಧೃಡ decision ದಿಂದ ಹಿಂದೆ ಸರಿಯಲು ಕಾರಣವೇನು ಎನ್ನುವುದು ನನ್ನ ಮೊದಲ ಪ್ರಶ್ನೆ. ಈ ಅಧಿಕಾರಿಗಳು ಮೊದಲು ಹೊಡೆಯುತ್ತೇವೆ ಎಂದು ಜೋರು ಮಾಡಿದಂತೆ ಮಾಡಿ ನಂತರ ಮಾತುಕತೆ ಆದ ಬಳಿಕ ಬಾಲ ಮುದುಡಿದ ಬೆಕ್ಕಿನಂತೆ ವರ್ತಿಸಿರುವುದು ಯಾಕೆ? ಇವರ ಆರಂಭ ಶೂರತ್ವ ನಂತರ ಹೇಗೆ ಕಡಿಮೆ ಆಗುತ್ತದೆ. Karnataka Muncipal Corporation Act-1976 ಹಿಡಿದುಕೊಂಡೇ ನಾನು ನಾಳಿನ ಅಧ್ಯಾಯದಲ್ಲಿ ಇವರೆಷ್ಟು ಸೋಬಗರು ಎಂದು ವಿವರಿಸಲಿದ್ದೇನೆ.
Leave A Reply