• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮತಾಂಧರು ಕಾಲೇಜು ಹುಡುಕುತ್ತಿದ್ದಾರೆ, ಪ್ರಾಂಶುಪಾಲರು ಜೈಲು ತೋರಿಸಲಿ!

Hanumantha Kamath Posted On June 3, 2022


  • Share On Facebook
  • Tweet It

ತಾಳ್ಮೆಗೂ ಒಂದು ಮಿತಿ ಇರುತ್ತದೆ. ನೀವು ಒಂದೇ ತಪ್ಪನ್ನು ಪದೇ ಪದೇ ಮಾಡುತ್ತಿದ್ದರೆ ನಂತರ ಅದಕ್ಕೆ ಕ್ಷಮೆ ಇರುವುದಿಲ್ಲ. ಮತಾಂಧ ಸಂಘಟನೆಗಳು ಕೆಲವು ಬಡ ಮುಸ್ಲಿಂ ಹೆಣ್ಣುಮಕ್ಕಳನ್ನು ಬಳಸಿ ಆಡುತ್ತಿರುವ ಹಿಜಾಬ್ ಅಂಕಣಕ್ಕೆ ಒಂದು ಅಂತ್ಯ ಅವರೇ ಹಾಡದಿದ್ದರೆ ಇದರ ಪರಿಣಾಮ ವ್ಯತಿರಿಕ್ತವಾಗುವುದರಲ್ಲಿ ಸಂಶಯವೇ ಇಲ್ಲ. ಕಳೆದ ವಾರ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯದ ಕಾಲೇಜಾಯಿತು. ಈಗ ಉಪ್ಪಿನಂಗಡಿಯಲ್ಲಿ ಮತ್ತೆ ಆರಂಭಿಸಿದ್ದಾರೆ. ಅನೇಕರಿಗೆ ಗೊತ್ತಿರುವಂತೆ ಈ ಪ್ರಕರಣ ಈಗ ಸರಕಾರ ಮತ್ತು ವಿದ್ಯಾರ್ಥಿನಿಯರ ನಡುವಿನ ಸಂಗತಿಯಾಗಿ ಉಳಿದಿಲ್ಲ. ಇದು ಈಗ ನ್ಯಾಯಾಲಯ ಮತ್ತು ವಿದ್ಯಾರ್ಥಿನಿಯರ ನಡುವಿನ ಕೇಸ್ ಆಗಿದೆ. ಯಾವಾಗ ಕರ್ನಾಟಕ ಉಚ್ಚನ್ಯಾಯಾಲಯ ತರಗತಿಯೊಳಗೆ ಯಾವುದೇ ಧಾರ್ಮಿಕ ವಸ್ತ್ರವನ್ನು ಧರಿಸಿ ಪಾಠ ಆಲಿಸಲು ಅವಕಾಶವಿಲ್ಲ ಎನ್ನುವ ಸರಕಾರದ ನಿರ್ಧಾರವನ್ನು ಪಾಲಿಸಬೇಕು ಎಂದು ಹೇಳಿತೋ ಅದರ ನಂತರ ಇವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ. ಅದರ ಅರ್ಥ ಇವರು ಗೆದ್ದಿದ್ದಾರೆ ಎಂದಲ್ಲ. ಹಾಗಿರುವಾಗ ನಾವು ತರಗತಿಯೊಳಗೆ ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇವೆ ಎಂದು ಹಟ ಮಾಡಿದರೆ ಅದು ನೇರವಾಗಿ ನ್ಯಾಯಾಲಯದ ಉಲ್ಲಂಘನೆ ಆಗುತ್ತದೆ. ಒಬ್ಬ ವ್ಯಕ್ತಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎನ್ನುವುದನ್ನು ಒಂದೋ ಆ ವಿದ್ಯಾರ್ಥಿನಿಯರು ಅರಿತುಕೊಳ್ಳಬೇಕು ಅಥವಾ ಅವರ ಮನೆಯವರು ತಿಳಿಹೇಳಬೇಕು. ಆದರೆ ನೀವು ಆತಂಕ ಪಡಬೇಡಿ. ಎಲ್ಲವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಅವರ ಬೆಂಬಲಕ್ಕೆ ನಿಂತಿರುವವರು ಹೇಳಿದ ಕೂಡಲೇ ಏನಾಗುತ್ತದೆ. ನಮಗೆ ಏನು ಆಗುವುದಿಲ್ಲ, ಏನು ಆದರೂ “ಅವರು” ನೋಡಿಕೊಳ್ಳುತ್ತಾರೆ ಎನ್ನುವ ಧೈರ್ಯ ಆ ನಿಯಮ ಉಲ್ಲಂಘಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬಂದಿರುತ್ತದೆ. ಹೆಚ್ಚೆಂದರೆ ಏನಾಗುತ್ತದೆ ಎನ್ನುವ ಭಂಡ ಧೈರ್ಯ ಆ ವಿದ್ಯಾರ್ಥಿನಿಯರಲ್ಲಿ ಈಗಾಗಲೇ ಮೂಡಿದೆ. ಜಾಸ್ತಿ ಎಂದರೆ ಪ್ರಾಂಶುಪಾಲರು ಪೊಲೀಸರಿಗೆ ದೂರು ಕೊಡುತ್ತಾರೆ. ಆಗ ಪೊಲೀಸರು ಹೆಚ್ಚೆಂದರೆ ಎಫ್ ಐಆರ್ ದಾಖಲಿಸಬಹುದು. ಅದರ ನಂತರ ಆ ಸಂಘಟನೆಗಳು ನಮ್ಮನ್ನು ಗ್ಯಾರಂಟಿ ಬಿಡಿಸಲು ಬರುತ್ತಾರೆ ಎನ್ನುವ ಭರವಸೆ ಇವರಿಗೆ ಇದೆ. ಅದಕ್ಕೆ ಸರಿಯಾಗಿ ಆ ಮೂಲಭೂತವಾದಿ ಸಂಘಟನೆಗಳು ಕೂಡ ಈ ವಿದ್ಯಾರ್ಥಿನಿಯರನ್ನು ಸರಕಾರ ಬಂಧಿಸಲಿ ಎಂದು ನಿರೀಕ್ಷೆ ಮಾಡುತ್ತಿವೆ. ಬಂಧನ ಆದರೆ ಏನಾಗುತ್ತದೆ ಎಂದರೆ ಅದೇ ಇಶ್ಯೂ ಆಗುತ್ತದೆ. ಅದನ್ನೇ ಇಟ್ಟು ಸರಕಾರವನ್ನು ಹಣಿಯಬಹುದು. ವಿದ್ಯಾರ್ಥಿನಿಯರನ್ನು ಬಂಧಿಸಿದ ಸರಕಾರ ಎಂದು ಬೊಬ್ಬೆ ಹೊಡೆಯಬಹುದು. ಆಗ ಜನರಿಗೆ ಸರಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಏನೇ ಇರಲಿ, ಹೆಣ್ಣುಮಕ್ಕಳನ್ನು ಬಂಧಿಸಬಾರದಿತ್ತು ಎನ್ನುವ ಮನಸ್ಥಿತಿ ಜನರಲ್ಲಿ ಬಂದರೆ ಅದು ಸರಕಾರಕ್ಕೆ ಮೈನಸ್.

ಅದೇ ರಣತಂತ್ರವನ್ನು ಮೊನ್ನೆ ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐ ಮಾಡಿದೆ. ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದೆ. ಅಲ್ಲಿ ಗೂಂಡಾಗಿರಿ ಮಾಡುವ ಯೋಜನೆ ಇತ್ತು ಎನ್ನುವುದು ಗೃಹ ಸಚಿವರ ಹೇಳಿಕೆ. ಆದ್ದರಿಂದ ಎನ್ ಎಸ್ ಯುಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅದನ್ನೇ ನೆಪ ಇಟ್ಟು ವಿದ್ಯಾರ್ಥಿಗಳನ್ನು ಬಂಧಿಸುವುದಾ ಎನ್ನುವ ಘೋಷಣೆಯನ್ನು ಕೂಗಲಾಗಿದೆ. ಇಲ್ಲಿಯೂ ಅದೇ ಆಗುತ್ತೆ. ಹೆಣ್ಣುಮಕ್ಕಳು ಎಂದರೆ ಇನ್ನೂ ಸಿಂಪಥಿ ಜಾಸ್ತಿ. ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು ಸುಲಭ. ಅದಕ್ಕಾಗಿ ಮೂಲಭೂತ ಸಂಘಟನೆಗಳು ಕಾಲೇಜನ್ನು ಹುಡುಕುತ್ತಿವೆ. ಅದಕ್ಕೆ ಸರಿಯಾಗಿ ಅವರಿಗೆ ಸಿಕ್ಕಿದ್ದು ಉಪ್ಪಿನಂಗಡಿ. ಗ್ರಾಮೀಣ ಪ್ರದೇಶ. ಆದರೆ ಯಾವಾಗ ಪತ್ರಕರ್ತರು ಆ ಘಟನೆಯನ್ನು ಚಿತ್ರೀಕರಿಸಲು ಕಾಲೇಜಿಗೆ ಹೋಗಿ ಪ್ರಾಂಶುಪಾಲರ ಅಭಿಪ್ರಾಯ ಕೇಳಿ ಹೊರಗೆ ಬಂದರೋ ಇದು ನಮಗೆ ಉಲ್ಟಾ ಹೊಡೆಯುತ್ತದೆ ಎಂದು ಮತಾಂಧರಿಗೆ ಅನಿಸಿದೆ. ಪತ್ರಕರ್ತರನ್ನು ಅಡ್ಡಗಟ್ಟಿ ದೌರ್ಜನ್ಯ ಮಾಡಲಾಗಿದೆ. ಅವರ ಕ್ಯಾಮೆರಾ ಕಸಿಯಲಾಗಿದೆ. ವಿಡಿಯೋ ಡಿಲೀಟ್ ಮಾಡಲಾಗಿದೆ. ಇದೇನು ಸಣ್ಣ ಘಟನೆಯಲ್ಲ. ಯಾಕೆಂದರೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಉಪ್ಪಿನಂಗಡಿ ಆಗಿರದೇ ಅಪಘಾನಿಸ್ತಾನದಲ್ಲಿ ಆಗಿದ್ದರೆ ಆಗ ಅದು ಸಹಜ ಎನ್ನಬಹುದು. ಹಾಗಾದರೆ ಈ ಮತಾಂಧತೆ ನಮ್ಮ ಜಿಲ್ಲೆಯ ಬಾಗಿಲಿನ ಒಳಗೆ ಬಂತು ಎನ್ನುವುದೇ ಆತಂಕಕಾರಿ ವಿಷಯ.

ಹಾಗಾದರೆ ಕಾಲೇಜಿನ ಪ್ರಾಂಶುಪಾಲರು ಏನು ಮಾಡಬೇಕು ಎಂದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಮನಸ್ಸು ಮಾಡಿ ಪೊಲೀಸರಿಗೆ ದೂರು ಕೊಡಬೇಕು. ಬೇಕಾದರೆ ಸರಕಾರವೇ ಸುತ್ತೋಲೆ ಹೊರಡಿಸಿ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಕಾಲೇಜಿನಲ್ಲಿ ಶಾಂತಿ ಕದಡುವವರ ವಿರುದ್ಧ ಪ್ರಾಂಶುಪಾಲರು ಮುಲಾಜು ತೋರಿಸಲೇಬಾರದು ಎಂದು ಹೇಳಿಬಿಡಲಿ. ಇಲ್ಲದಿದ್ದರೆ ಇದು ಮತ್ತೆ ಸೆಕೆಂಡ್ ರೌಂಡ್ ವೈರಲ್ ಫಿವರ್ ನಂತೆ ಎಲ್ಲಾ ಕಡೆ ಹರಡುತ್ತದೆ. ಇನ್ನು ಪತ್ರಕರ್ತರ ವಿರುದ್ಧ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಸೆಕ್ಷನ್ ಹಾಕಿ ಒಳಗೆ ಕುಳ್ಳಿರಿಸಬೇಕು. ಇತ್ತೀಚೆಗೆ ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಸಮಾವೇಶ ಮುಗಿಸಿ ಬರುತ್ತಿದ್ದ ಮತಾಂಧರು ಪೊಲೀಸರಿಗೆ ವ್ಯಂಗ್ಯ ಮಾಡಿ ಸಿಕ್ಕಿಬಿದ್ದಿರುವ ಪ್ರಕರಣದಲ್ಲಿಯೂ ಹಾಗೆ. ಸೊಂಟ ಮುರಿಯದಿದ್ದರೆ ಎಚ್ಚರಿಕೆಯ ಸಂದೇಶ ಹೋಗುವುದಿಲ್ಲ. ಇಲ್ಲಿಯೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ದಮನ ಮಾಡಲು ಹೊರಟವರ ಬಗ್ಗೆ ಕನಿಕರ ತೋರಿಸಿದರೆ ಇದು ಮುಂದಿನ ಅಪಾಯಕ್ಕೆ ಗ್ರೀನ್ ಸಿಗ್ನಲ್ ತೋರಿಸಿದಂತೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search