• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪಿಬಿ ಹರೀಶ್ ರೈ “ರಾಜನೋಟ” ನಿಖರ ಮತ್ತು ಸಮೃದ್ಧ!

Hanumantha Kamath Posted On April 20, 2018
0


0
Shares
  • Share On Facebook
  • Tweet It

ಪತ್ರಕರ್ತ ಮಿತ್ರ ಪಿಬಿ ಹರೀಶ್ ರೈ ಬಹಳ ಉತ್ತಮವಾದ ಕೆಲಸ ಮಾಡಿದ್ದಾರೆ. ಆದ್ದರಿಂದ ಖುದ್ದಾಗಿ ಅವರನ್ನು ಅಭಿನಂದಿಸಬೇಕು ಎಂದು ಅಂದುಕೊಂಡಿದ್ದೆ. ಅವರ ಪುಸ್ತಕ “ರಾಜನೋಟ” ಇವತ್ತು ಬೆಳಿಗ್ಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಯಾಗಲಿತ್ತು. ನಾನು ಹೋಗಿದ್ದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ|ಮೋಹನ್ ಆಳ್ವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಸಹಕಾರಿ ಧುರೀಣ ರಾಜೇಂದ್ರ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇನೊಬ್ಬ ಪತ್ರಕರ್ತ ಗೆಳೆಯ ಆನಂದ ಶೆಟ್ಟಿ ವೇದಿಕೆ ಮೇಲಿದ್ದರು. ಪಿಬಿ ಹರೀಶ್ ರೈ ಅವರ ಸಹೋದ್ಯೋಗಿಗಳು, ಪತ್ರಕರ್ತ ಗೆಳೆಯರು, ಹಿತೈಷಿಗಳು ಉಪಸ್ಥಿತರಿದ್ದರು. ಸಾಮಾನ್ಯವಾಗಿ ಪತ್ರಕರ್ತರ ಇಂತಹ ಕಾರ್ಯಕ್ರಮಗಳಿಗೆ ತಮ್ಮ ಸೊಬಗಿನ ಭಾಷಣ ಮಾಡಿ ಅದಕ್ಕೊಂದು ಕಳೆಕಟ್ಟುವುದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್. ಅವರ ಮಾತಿನ ಝರಿಯ ನಡುವೆ ಲಘುದಾಟಿಯ ಹಾಸ್ಯ, ನವಿರಾದ ಸಂಭಾಷಣೆಯ ಶೈಲಿ, ಫ್ಲಾಶ್ ಬ್ಯಾಕ್ ನೆನಪುಗಳು ಮತ್ತು ಅದಕ್ಕೊಂದು ಇತಿಹಾಸದ ಟಚ್ ಕೊಟ್ಟು ವಾಸ್ತವತೆಗೆ ಕನ್ನಡಿ ಹಿಡಿಯುವುದು ಮನೋಹರ ಪ್ರಸಾದ್ ಅವರಿಗೆ ಕರತಲಾಮಲಕ.

ಇವತ್ತು ಕೂಡ ಮನೋಹರ ಪ್ರಸಾದ್ ಮಾತನಾಡಿದರು. ಅವರು ಹೇಳಿದ್ದರ ಸಾರಾಂಶ ನನಗೆ ಹಿಡಿಸಿತು. “1994 ರಲ್ಲಿ ನಾವು ರಾಜಕೀಯ ವರದಿ ಮಾಡುವ ಸಮಯದಲ್ಲಿ ಪರಿಸ್ಥಿತಿ ಈಗಿನಷ್ಟು ಸುಲಭ ಇರಲಿಲ್ಲ. ಆಗ ಕಂಪ್ಯೂಟರ್ ಗಳು ಕೂಡ ಇರಲಿಲ್ಲ. ಯಾವುದಾದರೂ ರಾಜಕೀಯ ವರದಿ, ಸ್ಟೋರಿ ಮಾಡಬೇಕಾದರೆ ದಾಖಲೆಗಳ ಅವಶ್ಯಕತೆ ಇರುತ್ತದೆ. ಇತಿಹಾಸದಲ್ಲಿ ಏನು ಆಗಿತ್ತು ಎಂದು ನೋಡಿ ಬರೆಯಬೇಕಾಗುತ್ತದೆ. ಹಿಂದಿನ ರಾಜಕೀಯ ಚರಿತ್ರೆ ಸರಿಯಾಗಿ ಗೊತ್ತಾದರೆ ವರದಿಗೆ ತೂಕ ಬರುತ್ತದೆ. ಆದ್ದರಿಂದ ನಾವು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅಲ್ಲಿ ವಿಚಾರಿಸಬೇಕಿತ್ತು. ಅಲ್ಲಿ ಪ್ರತಿ ಚುನಾವಣೆಗಳ ದಾಖಲೆಗಳ ಪ್ರತಿಗಳನ್ನು ಕೈಯಲ್ಲಿ ಬರೆದು ಸುರುಳಿ ಸುತ್ತಿ ಗೋಣಿಚೀಲಗಳಲ್ಲಿ ಹಾಕಿ ಇಡುತ್ತಿದ್ದರು. ನಾವು ಗೋಡೌನ್ ನಂತಹ ಆ ಕೋಣೆಗೆ ಹೋಗಿ ಗೋಣಿಚೀಲ ಬಿಚ್ಚಿ ಅದರಲ್ಲಿರುವ ಕಾಗದದ ಸುರುಳಿ ರಾಶಿಯಲ್ಲಿ ಬೇಕಾದ್ದನ್ನು ಹುಡುಕಿ ನಂತರ ಅದರಲ್ಲಿ ನಮಗೆ ಬೇಕಾದ್ದನ್ನು ತೆಗೆದು ನಂತರ ಆಫೀಸಿಗೆ ಹೋಗಿ ವರದಿ ಮಾಡಬೇಕಿತ್ತು. ಅದಲ್ಲದೇ ನಾವು ವರದಿ ಬರೆಯುವಾಗ ಈ ಪಕ್ಷದ ಈ ವ್ಯಕ್ತಿ ಆ ಪಕ್ಷದ ಆ ವ್ಯಕ್ತಿಯ ಎದುರು ಭಾರಿ ಅಂತರದಿಂದ ಗೆದ್ದಿದ್ದಾರೆ ಅಥವಾ ಸೋತಿದ್ದಾರೆ ಎಂದು ಬರೆದಿದ್ದರೆ ಉದಯವಾಣಿಯ ಮುಖ್ಯಸ್ಥರಾಗಿದ್ದ ಮೋಹನದಾಸ್ ಪೈ ಅವರು ಭಾರಿ ಅಂತರದಿಂದ ಎಂದರೆ ಎಷ್ಟು ಮೈಲು ಎಂದು ಕೇಳಿದ್ದೂ ಇದೆ. ಪ್ರತಿಯೊಂದು ಸ್ಟೋರಿ ಬರೆಯುವಾಗ ಅದಕ್ಕೆ ಅಂಕಿಅಂಶ ಕೊಟ್ಟರೆ ಮಾತ್ರ ಅದು ಓದುಗನ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳುತ್ತಿದ್ದರು. ಆದ್ದರಿಂದ ನಮಗೆ ಅನಿವಾರ್ಯವಾಗಿ ಅಂಕಿ ಅಂಶಗಳನ್ನು ಸಂಗ್ರಹಿಸಲು ಡಿಸಿ ಆಫೀಸಿಗೆ ಹೋಗಬೇಕಾಗುತ್ತಿತ್ತು ಎಂದು ಮನೋಹರ ಪ್ರಸಾದ್ ತಮ್ಮದೇ ಶೈಲಿಯಲ್ಲಿ ಹೇಳಿದರು. ನಂತರ ಅವರ ಮಾತು ಹೊರಳಿದ್ದು ಪಿಬಿ ಹರೀಶ್ ರೈ ಅವರ ಕಡೆಗೆ. ಯಾವುದೇ ರಾಜಕೀಯ ವರದಿ ಬರೆಯುವಾಗ ಏನಾದರೂ ದಾಖಲೆ ಬೇಕಾದರೆ ಅನೇಕ ಜನ ಪತ್ರಕರ್ತರು ಹರೀಶ್ ರೈ ಅವರಿಗೆ ಫೋನ್ ಮಾಡುತ್ತಿದ್ದರು. ಹರೀಶ್ ರೈ ಅವರ ಬಳಿ ಎಲ್ಲಾ ಮಾಹಿತಿ ಇರುತ್ತಿತ್ತು ಎಂದು ಹೇಳಿದರು. ಈಗ ಅವರು ಮಾಡಿರುವ ಸಾಧನೆ ದೊಡ್ಡದು. 1952 ರಿಂದ 2014 ರ ತನಕದ ಚುನಾವಣೆ ಮತ್ತು ರಾಜಕೀಯದ
ಸಮಗ್ರ ವರದಿಯನ್ನು ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಅವರು ಬರೆದಿದ್ದಾರೆ. ಇದೊಂದು ಸಂಪೂರ್ಣ ದಾಖಲೆಯಾದ ಕಾರಣ ಶಾಲೆಗಳಲ್ಲಿ ಒಂದು ಪಠ್ಯೇತರ ವಿಷಯವಾಗಿ ಇದನ್ನು ಅಳವಡಿಸಿದರೆ ಮಕ್ಕಳಿಗೂ ನಮ್ಮ ಚುನಾವಣೆಗಳ ಬಗ್ಗೆ, ರಾಜಕೀಯ ವ್ಯಕ್ತಿಗಳ ಬಗ್ಗೆ ಗೊತ್ತಾಗುತ್ತದೆ ಎಂದು ಸಲಹೆ ನೀಡಿದರು.

ವಿಶ್ವೇಶ್ವರ ಭಟ್ ಹೇಳುತ್ತಿದ್ದ ಮಾತು…

ತಮ್ಮ ಕೃತಿಯ ಬಗ್ಗೆ ಮಾತನಾಡಿದ ಲೇಖಕ ಪಿಬಿ ಹರೀಶ್ ರೈ ಅವರು ತಾವು ವಿಜಯ ಕರ್ನಾಟಕದಲ್ಲಿ ಇದ್ದಾಗ ಆಗ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರಂತೆ. ಪತ್ರಕರ್ತರು ಮಾಡಿದ ವರದಿಯನ್ನು ಜನ ಇವತ್ತು ಓದುತ್ತಾರೆ, ನಾಳೆ ಮರೆಯುತ್ತಾರೆ, ಅದೇ ಪತ್ರಕರ್ತರು ಪುಸ್ತಕಗಳನ್ನು ಬರೆದರೆ ಯಾವಾಗಲೂ ನೆನಪಿನಲ್ಲಿ ಉಳಿಯಬಹುದು ಎಂದು ಹೇಳಿದ್ದನ್ನು ಹರೀಶ್ ರೈ ನೆನಪಿಸಿಕೊಂಡರು.

ನಾನಂತೂ ಪುಸ್ತಕ ತಂದು ಇಟ್ಟುಕೊಂಡಿದ್ದೇನೆ. ಇಡೀ ಪುಸ್ತಕವನ್ನು ಓದಿ ಮುಗಿಸಲಾಗಿಲ್ಲ. ಅದು ಒಂದೇ ನೋಟಕ್ಕೆ ಓದಿ ಮುಗಿಯವ ಪುಸ್ತಕವಲ್ಲ. ಹಾಗಂತ ಓದದೆ ಪಕ್ಕಕ್ಕೆ ಇಡಲು ಮನಸ್ಸು ಕೂಡ ಆಗುವುದಿಲ್ಲ. ಗಡಿಬಿಡಿಯ ಕೆಲಸಗಳ ನಡುವೆ ಒಂದಿಷ್ಟು ಪುಟಗಳನ್ನು ಓದಿದ್ದೇನೆ. ಕರ್ನಾಟಕ ಮೈಸೂರು ರಾಜ್ಯವಾಗಿ ಇದ್ದ ಕಾಲಘಟ್ಟಗಳನ್ನು ಕೂಡ ಹರೀಶ್ ರೈ ಸೊಗಸಾಗಿ ನಿರೂಪಿಸಿದ್ದಾರೆ. ಆಗ ಈ ಭಾಗ ಕೂಡ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. 1951/52 ರ ಅವಿಭಜಿತ ಜಿಲ್ಲೆಯ ಮೊದಲ ಭಾಷಾವಾರು ಪ್ರಾಂತ್ಯ ಆಗಿರಲಿಲ್ಲ. ಆಗ ನಡೆದ ಚುನಾವಣೆಯಲ್ಲಿ ಕಾರ್ಕಳದಿಂದ ಎಬಿ ಶೆಟ್ಟಿಯವರು ಸ್ಪರ್ಧಿಸಿದ್ದರು. ಅವರು ಆಗ ಮದ್ರಾಸ್ ಪ್ರಾಂತ್ಯದಲ್ಲಿ ಸರಕಾರ ರಚನೆಯಾದಾಗ ಸಚಿವರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದರು. ಅದರ ನಂತರ ಮದ್ರಾಸ್ ಪ್ರಾಂತ್ಯದಿಂದ ಕೊಡಗು, ಮೈಸೂರು ಸಹಿತ ಕರ್ನಾಟಕಕ್ಕೆ ಒಳಪಟ್ಟ ಭಾಗಗಳು ಪ್ರತ್ಯೇಕವಾದಾಗಲೂ ಎಬಿ ಶೆಟ್ಟಿ ಅವರು ಗೆದ್ದು ಸಚಿವರಾಗಿದ್ದರು. ಇದೆಲ್ಲ ನಮ್ಮ ಕರಾವಳಿಗೆ ಹೆಮ್ಮೆ ತರುವ ವಿಷಯ. ಅದೇ ನೆನಪಿಗೆ ಮಂಗಳೂರಿನ ಹೃದಯಭಾಗದ ವೃತ್ತಕ್ಕೆ ಎಬಿ ಶೆಟ್ಟಿ ವೃತ್ತ ಎಂದು ಹೆಸರಿಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಒಂದು ಚುನಾವಣೆಯಲ್ಲಿ 1088 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಂತೆ. ಅದರಲ್ಲಿ 42 ಜನರ ನಾಮಪತ್ರ ತಿರಸ್ಕೃತಗೊಂಡಿತ್ತು. 13 ಜನರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದರು. ಅಂತಿಮವಾಗಿ 1033 ಜನರು ಕಣದಲ್ಲಿದ್ದರು. ಅದಕ್ಕಾಗಿ ಬ್ಯಾಲೆಟ್ ಪೇಪರ್ ಅನ್ನು ಬ್ಯಾಲೆಟ್ ಬುಕ್ ಆಗಿ ಮಾಡಲಾಗಿತ್ತು. 4 ಅಡಿ ಉದ್ದದ ಬ್ಯಾಲೆಟ್ ಬಾಕ್ಸ್ ಮಾಡಲಾಗಿತ್ತು. ಹೀಗೆ ಅನೇಕ ಕುತೂಹಲಕಾರಿ ವಿಷಯಗಳು ಪುಸ್ತಕದಲ್ಲಿವೆ. ಈಗ ನಾನು ಹೇಳಿದ್ದು ಜಸ್ಟ್ ಸ್ಯಾಂಪಲ್ ಅಷ್ಟೇ. ನೀವು ಪುಸ್ತಕ ಓದಿದರೆ ಅದರ ಸ್ವಾದ ಎಂಜಾಯ್ ಮಾಡಬಹುದು. ಕರ್ನಾಟಕ ಚುನಾವಣೆಯ ಹೊಸ್ತಿಲಲ್ಲಿ ಇರುವಾಗಲೇ ಬಂದಿರುವ ಈ ಪುಸ್ತಕ ನಿಮ್ಮನ್ನು ಮತದಾನಕ್ಕೆ ಪ್ರೇರೆಪಿಸುವಂತಾಗಲಿ ಎನ್ನುವುದು ಹಾರೈಕೆ!

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search