• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪಕ್ಷದ ಕಚೇರಿಗೆ ಕಾಲಿಡಬೇಡಿ ಎಂದವರು ಕಾಲಿಗೆ ಬೀಳುತ್ತಿದ್ದಾರೆ, ಬಿಲ್ಲವರ ವೋಟ್ ಬ್ಯಾಂಕಿಗಾಗಿ!

Hanumantha Kamath Posted On May 1, 2018
0


0
Shares
  • Share On Facebook
  • Tweet It

ದಿನಕ್ಕೊಬ್ಬರಂತೆ ಹೋಗಿ ಬಿ ಜನಾರ್ಧನ ಪೂಜಾರಿಯವರ ಕಾಲಿಗೆ ಬಿದ್ದು ಬಂದರು. ಹೋಗುವಾಗ, ಕಾಲಿಗೆ ಬೀಳುವಾಗ, ಅಲ್ಲಿಂದ ಹೊರಗೆ ಬರುವಾಗ ಫೋಟೋಗಳನ್ನು ತೆಗೆಯಲು ಯಾವ ಶಾಸಕ ಅಥವಾ ಮುಖಂಡ ಕೂಡ ಮರೆಯಲಿಲ್ಲ. ಒಟ್ಟಿನಲ್ಲಿ ಪೂಜಾರಿಯವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಚುನಾವಣೆಯ ಸಮಯದಲ್ಲಿ ನೆನಪಾದರು. ರಮಾನಾಥ ರೈ, ಜೆ ಆರ್ ಲೋಬೋ, ಮೊಯ್ದೀನ್ ಬಾವ, ವಿನಯ ಕುಮಾರ್ ಸೊರಕೆ ಸಹಿತ ಕೆಲವು ಶಾಸಕರು ಹೋಗಿ ಕರೆಕ್ಟಾಗಿ ಕಾಲಿಗೆ ಬೀಳುವ ಫೋಟೋ ಮಿಸ್ ಆಗದಂತೆ ನೋಡಿಕೊಂಡರು. ಪೂಜಾರಿಯವರ ಒಂದು ಕಾಲದ ಶಿಷ್ಯ ಅಶ್ರಫ್ ಕೂಡ ಹೋಗಿ ಗುರುವಿನ ಆರ್ಶೀವಾದ ಪಡೆದು ಬಂದರು. ಅಲ್ಲಿಗೆ ಒಂದು ಹಂತದಲ್ಲಿ ಬಿಲ್ಲವರ ವೋಟ್ ತಮ್ಮ ತಮ್ಮ ಕ್ಷೇತ್ರದಲ್ಲಿ ಏಕಾಏಕಿ ಕೈ ಬಿಡದಂತೆ ನೋಡಿಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರು. ಎರಡನೇ ಹಂತ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರದ್ದು. ಅವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಬಂದು ಪೂಜಾರಿಯವರನ್ನು ಕೈ ಹಿಡಿದು ಸಮಾಧಾನ ಮಾಡಿದಾಗ ಅದೆಲ್ಲಿತ್ತೊ ವರುಷಗಳ ನೋವು. ಜನಾರ್ಧನ ಪೂಜಾರಿ ಅತ್ತೇಬಿಟ್ಟಿದ್ದರು. ಒಂದು ಕಾಲದಲ್ಲಿ ತನ್ನ ಎದುರಿಗೆ ನಿಲ್ಲುತ್ತಿದ್ದ ಬೇರೆ ನಾಯಕರ ಬೆನ್ನಿನ ಮೂಳೆಯಲ್ಲಿ ಬೆವರಿಳಿಸುತ್ತಿದ್ದ ಪೂಜಾರಿ ಆವತ್ತು ಅತ್ತಿದ್ದನ್ನು ನೋಡಿ ಅನೇಕ ಮುಖಂಡರು ಆಶ್ಚರ್ಯಪಟ್ಟಿದ್ದರು. ಪೂಜಾರಿಯವರನ್ನು ಸಂತೈಸಿದ ರಾಹುಲ್ ಗಾಂಧಿ ಒಂದೇ ಉಸಿರಿಗೆ ಬಿಲ್ಲವರ ಅಷ್ಟೂ ವೋಟ್ ಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳ ಜೋಳಿಗೆಗೆ ಹಾಕಿಬಿಟ್ಟೆ ಅಂದುಕೊಂಡಿರಬಹುದು. ಅದರ ನಂತರ ಮೊನ್ನೆ ಮಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ವೇದಿಕೆಗೆ ಕೈ ಹಿಡಿದು ಕರೆತಂದು “ಈಸ್ ಬಾರ್ ಬಿಲ್ಲವಾಸ್ ವೋಟ್ ಹಮಾರ್ ಹೋಗಾ” ಎಂದು ವೇಣುಗೋಪಾಲ್ ಕಿವಿಯಲ್ಲಿ ಹೇಳಿರಬಹುದು.

ಆ ಹಿರಿಜೀವಕ್ಕೆ ನಡೆಸಿಕೊಂಡ ರೀತಿ…

ಜನಾರ್ಧನ ಪೂಜಾರಿ ಎಂಬ ಕಾಂಗ್ರೆಸ್ಸಿನ ಹಿರಿಯ ಇದೇ ಪ್ರೀತಿಯನ್ನು ಐದು ವರ್ಷಗಳಿಂದ ಬಯಸುತ್ತಿದ್ದರು. ಅವರಿಗೆ ಬೇಕಾಗಿದ್ದದ್ದು ಕಾಂಗ್ರೆಸ್ಸಿನ ಹೈಕಮಾಂಡ್ ನಲ್ಲಿ ಕೇಳುವ ಕಿವಿ ಮಾತ್ರ. ಆದರೆ ಕರ್ನಾಟಕದಲ್ಲಿ 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಸಿದ್ಧರಾಮಯ್ಯನವರ ಕೈಯಲ್ಲಿ ಕಾಂಗ್ರೆಸ್ಸಿನ ರಾಜ್ಯ ಘಟಕದ ಕೀಲಿ ಕೈ ಕೊಟ್ಟು ಸೋನಿಯಾ
ಗಾಂಧಿ ತಾವು ತಮ್ಮ ಪಾಡಿಗೆ ಇದ್ದು ಬಿಟ್ಟರು. ರಾಹುಲ್ ಗಾಂಧಿ ಫ್ರೀ ಇದ್ದಾಗ ಸಿದ್ದು ಅಂಕಲ್ ಕಡೆ ನೋಡಿ ತಮಗೆ ಬೇಕಾದದ್ದನ್ನು ತರಿಸಿಕೊಳ್ಳುತ್ತಿದ್ದರು ಬಿಟ್ಟರೆ ಕಾಂಗ್ರೆಸ್ ರಾಜ್ಯದಲ್ಲಿ ಸಿದ್ಧರಾಮಯ್ಯ ಈಶಾರೆಯಲ್ಲಿ ನಡೆಯುತ್ತಿತ್ತು. ಆಸ್ಕರ್ ಫೆರ್ನಾಂಡಿಸ್ ಅವರಾದರೆ ಇನ್ನೂ ರಾಜ್ಯಸಭೆಯ ಸದಸ್ಯತ್ವವನ್ನು ಕರ್ನಾಟಕದ ಕಾಂಗ್ರೆಸ್ಸಿನಿಂದ ನವೀಕರಣ ಮಾಡಿಕೊಂಡು ಆರಾಮವಾಗಿದ್ದಾರೆ. ಖರ್ಗೆ ಲೋಕಸಭೆಯ ವಿಪಕ್ಷ ನಾಯಕ(!) ರಾಗಿ ಕೆಲಸದಲ್ಲಿ ಇದ್ದಾರೆ. ಧರಂ ಹೋಗಿ ಆಗಿದೆ. ವೀರಪ್ಪ ಮೊಯಿಲಿ ಹಾಗೂ ಮುನಿಯಪ್ಪ ಸಿಟ್ಟಿಂಗ್ ಎಂಪಿಗಳು. ಈ ಹಂತದಲ್ಲಿಯೇ ಪೂಜಾರಿ ರಾಜ್ಯಸಭೆಯ ಅವಧಿ ಮುಗಿದು ಏಕಾಂಗಿ ಆದರು. ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯ ನಡುವೆ ಒಂದು ಪ್ರಮುಖ ವ್ಯತ್ಯಾಸ ಎಂದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವ್ಯಕ್ತಿಯ ಸುತ್ತ ತಿರುಗುತ್ತದೆ. ಬಿಜೆಪಿ ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿ ಅಧಿಕಾರದಲ್ಲಿ ಇರಲಿ, ಬಿಡಲಿ ಅವನ ಸೂಚನೆಯನ್ನು ಕೇಳುತ್ತದೆ. ಕಾಂಗ್ರೆಸ್ ನಲ್ಲಿ ಜನಪ್ರತಿನಿಧಿಯಾಗಿ ಅಧಿಕಾರ ಇಲ್ವಾ, ನಂತರ ಅವರಿಗೆ ಕಾರ್ಯಕರ್ತರೂ ತಿರುಗಿಯೂ ನೋಡಲಿಲ್ಲ. ಆದರೆ ಪೂಜಾರಿಯವರಿಗೆ ಆ ಸಮಸ್ಯೆ ರಾಜ್ಯಸಭೆ ಸದಸ್ಯತ್ವ ಮುಗಿದ ಕೂಡಲೇ ಬಂದಿರಲಿಲ್ಲ. ಆದರೆ ಇವರು ಇನ್ನೊಂದು ಅವಧಿ ಕೇಳುತ್ತಾರೋ ಎಂದು ಹೆದರಿದ ಹೈಕಮಾಂಡ್ ನಲ್ಲಿ ಕುಳಿತಿರುವ ಇಲ್ಲಿನವರು ಇವರನ್ನು ಸೋನಿಯಾ ಹತ್ತಿರ ಸುಳಿಯಲು ಬಿಡಲೇ ಇಲ್ಲ. ಅಲ್ಲಿಗೆ ಪೂಜಾರಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಔಟ್ ಡೇಟೆಡ್ ಆಗುತ್ತಾ ಹೋದರು. ಅಲ್ಲಿಂದ ಅವರ ಸುದ್ದಿಗೋಷ್ಟಿಗಳ ಸರಣಿ ಶುರುವಾಯಿತು.

ಒಂದು ವೇಳೆ ಪೂಜಾರಿ ಪ್ರಶ್ನೆ ಮಾಡಿದ್ದರೆ…

ಮೊದಮೊದಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರಾರಂಭವಾದ ಎಟ್ಯಾಕ್ ನಂತರ ಸರಣಿಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ಮಾಡುವಲ್ಲಿಗೆ ಬಂದು ತಲುಪಿತ್ತು. ಇವರ ಉಪಟಳ ತಾಳಲಾರದೆ ಇವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾಡಲು ನಿರಾಕರಿಸಿದ ಕಾಂಗ್ರೆಸ್ ಪಕ್ಷದ ಅದೇ ಮುಖಂಡರು ಇವತ್ತು ವೋಟಿನ ಬೇಟೆಗೆ ಮತ್ತು ಬಿಲ್ಲವರ ಮತಬ್ಯಾಂಕಿನ ಆಸೆಗೆ ಕಾಲಿಗೆ ಬಿದ್ದು ಫೋಟೋ ತೆಗೆಸಿ ಫೇಸ್ ಬುಕ್ಕಿಗೆ ಹಾಕಿ ಪೇಪರ್ ನವರಿಗೆ ಕಳುಹಿಸುತ್ತಾರಲ್ಲ, ಇವರಿಗೆ ಏನು ಹೇಳಬೇಕು. ನನ್ನನ್ನು ಪಕ್ಷದ ಕಚೇರಿಗೆ ಕಾಲಿಡಬೇಡಿ ಎಂದವರೇ ಇವತ್ತು ನನ್ನ ಕಾಲಿಗೆ ಬೀಳಲು ಬರುತ್ತಿರಲ್ಲ, ನಿಮಗೆ ನಾಚಿಕೆ ಆಗಲ್ವಾ ಎಂದು ಒಮ್ಮೆ ಪೂಜಾರಿ ಸೆಟೆದು ನಿಂತು ಕೇಳಿದರೆ ಇವುಗಳಿಗೆ ಹೇಳಲು ಬಾಯಿ ಇರುತ್ತಾ!

0
Shares
  • Share On Facebook
  • Tweet It


Janardhan Poojary


Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
Hanumantha Kamath August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Hanumantha Kamath August 30, 2025
You may also like
ಚುನಾವಣೆ ಬಂದಾಗ ಜನಾರ್ಧನ ಪೂಜಾರಿ ಇವರಿಗೆ ಬೇಕು, ಇಲ್ಲದಿದ್ದರೆ…..
May 10, 2018
ಚುನಾವಣೆಯ ಹೊಸ್ತಿಲಲ್ಲಿ ಪೂಜಾರಿಯವರ ಹೆಸರು, ಫೋಟೊ ದುರ್ಬಳಕೆ ಮಾಡಿದವರ್ಯಾರು?
May 9, 2018
ಸಾಲಮೇಳ ಸಂಗ್ರಾಮದ ದಂಡನಾಯಕ ಬ್ರಹ್ಮಾಸ್ತ್ರ ಬಿಡಲು ರೆಡಿ!
January 25, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
  • Popular Posts

    • 1
      ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • 2
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 3
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 4
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 5
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

  • Privacy Policy
  • Contact
© Tulunadu Infomedia.

Press enter/return to begin your search