• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಲಾಕ್ ಡೌನ್ ಕಠಿಣ ಆಗಬೇಕಿತ್ತು ಎನ್ನುವವರು ಕೆಲವು ವಿಷಯ ಯೋಚಿಸಲ್ಲ!!

Hanumantha Kamath Posted On May 18, 2020


  • Share On Facebook
  • Tweet It

ನಮ್ಮ ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಶುರುವಾಗಿದೆ. ಹೋಟೇಲ್, ಸಿನೆಮಾ, ಮಾಲ್ ಬಿಟ್ಟರೆ ಹೆಚ್ಚಿನವು ತೆರೆದಿವೆ. ಇದನ್ನು ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ. ಕೊರೊನಾ ಸೊಂಕೀತರು 50 ಇದ್ದಾಗ ದೇಶವ್ಯಾಪಿ ಬಂದ್ ಆಗಿದೆ. ಈಗ ಒಂದು ಲಕ್ಷ ಆದಾಗ ಎಲ್ಲವೂ ತೆರೆದಿದೆ. ಇಂದೆಂತಹ ಲಾಜಿಕ್ ಎಂದು ಕೆಲವರು ಮೋದಿಜಿಯವರನ್ನು ಹೀಯಾಳಿಸುತ್ತಿದ್ದಾರೆ. ಒಂದು ವಿಷಯ ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆನೆಂದರೆ 50 ಸೋಂಕಿತರು ಇದ್ದಾಗ ನಮ್ಮ ದೇಶದ ಪ್ರಧಾನಿಯವರು ತೆಗೆದುಕೊಂಡ ಸೂಕ್ತ ಕ್ರಮದಿಂದಾಗಿ ಇಲ್ಲಿ ಸಮುದಾಯದ ಲೆವೆಲ್ಲಿನಲ್ಲಿ ಕೊರೊನಾ ಹರಡಿಲ್ಲ. ವಿದೇಶದಿಂದ ಬಂದವರು ಮತ್ತು ಮುಂಬೈಯ ಸ್ಲಂಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇರುವವರಿಂದ ಈ ವೈರಸ್ ಒಂದಿಷ್ಟು ಭಯಾನಕವಾಗಿ ನಮಗೆ ಕಾಣಿಸಿದೇ ಬಿಟ್ಟರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಸುರಕ್ಷಿತ ಹಂತದಲ್ಲಿಯೇ ಇದೆ. ಅದರೊಂದಿಗೆ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಕೊರೊನಾ ಇನ್ನೆಷ್ಟು ದಿನ ಎನ್ನುವ ಯಕ್ಷ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ. ಈಗಾಗಲೇ ರಾಜ್ಯದಲ್ಲಿ ಬಹುತೇಕ ಎರಡು ತಿಂಗಳಿನಿಂದ ಸಾರ್ವಜನಿಕರು ಮನೆಯಲ್ಲಿ ಕುಳಿತುಕೊಂಡು ಆಗಿದೆ. ಉದ್ಯಮಗಳು ಮುಚ್ಚಿ ಇಷ್ಟೇ ಸಮಯ ಆಗಿದೆ. ಕಾರ್ಮಿಕರಿಗೆ, ನಿತ್ಯ ದುಡಿದು ತಿನ್ನಬೇಕಾದವರಿಗೆ, ಕೆಳಮಧ್ಯಮ ವರ್ಗದವರು ಕೂಡ ಇಷ್ಟೇ ಸಮಯದಿಂದ ದುಡಿಯಲು ಹೊರಗೆ ಕಾಲಿಟ್ಟಿಲ್ಲ. ಹೀಗಿರುವಾಗ ಇನ್ನು ಒಂದಿಷ್ಟು ಆರ್ಥಿಕ ಚಕ್ರಗಳಿಗೆ ಶಕ್ತಿ ಕೊಡದೇ ಹೋದರೆ ಅವು ತುಕ್ಕು ಹಿಡಿಯುತ್ತವೆ. ಕಿಟ್ ಕೊಡುವುದು ಶಾಶ್ವತ ಪರಿಹಾರ ಅಲ್ಲ. ಆದ್ದರಿಂದ ಜನರಿಗೆ ಉದ್ಯೋಗ ಸಿಕ್ಕಿ ಅದರಿಂದ ಸಂಬಳ ಕೈಗೆ ಬರದೇ ಇದ್ದರೆ ದೇಶದ ಆರ್ಥಿಕ ವ್ಯವಸ್ಥೆಗೆ ಕೂಡ ಇದರಿಂದ ದಕ್ಕೆ ಉಂಟಾಗುತ್ತದೆ. ನಮ್ಮ ಬದುಕಿನ ಎಲ್ಲಾ ಅವಶ್ಯಕತೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ.

ಉದಾಹರಣೆಗೆ ನಿಮಗೆ ಸಕ್ಕರೆ ಬೇಕು ಎಂದರೆ ಅಂಗಡಿಗೆ ಹೋಗಬೇಕು. ಅಂಗಡಿಯಲ್ಲಿ ಸಕ್ಕರೆ ಇರಬೇಕಾದರೆ ಯಾರಾದರೂ ಅದನ್ನು ಗೋಣಿಯಲ್ಲಿ ಕ್ವಿಂಟಾಲ್ ಗಟ್ಟಲೆ ಅಂಗಡಿಗೆ ತಂದು ನೀಡಬೇಕು. ತಂದು ನೀಡುವವರು ಲಾರಿಯವರಾದರೆ ಲಾರಿಗೆ ಲೋಡ್ ಮಾಡಲು ಜನ ಬೇಕು. ಗೋಣಿಯಲ್ಲಿ ಯಾರಾದರೂ ತುಂಬಿಸಿ ನೀಡಿದರೆ ಲೋಡ್ ಮಾಡುವವರು ಲಾರಿಗೆ ಹಾಕಿಯಾರು. ಗೋಣಿಯಲ್ಲಿ ಸಕ್ಕರೆ ತುಂಬಿಸಬೇಕಾದರೆ ಅದು ಕಾರ್ಖಾನೆಯಲ್ಲಿ ತಯಾರಾಗಿರಬೇಕು. ಕಾರ್ಖಾನೆಯಲ್ಲಿ ತಯಾರಾಗಿರಬೇಕಾದರೆ ಅಲ್ಲಿ ಕಾರ್ಮಿಕರು ಬೇಕು. ಸಕ್ಕರೆಗೆ ಕಬ್ಬು ಬೇಕು. ಕಬ್ಬು ತೋಟದಲ್ಲಿ ಬೆಳೆಯಬೇಕು. ಅದನ್ನು ಬೆಳೆಸುವ ಕೃಷಿಕರು ಬೇಕು. ಅವರು ಬೆಳೆಸಲು ಏನೇನು ಬೇಕೋ ಅದು ಅಂಗಡಿಯಲ್ಲಿ ಸಿಗಬೇಕು. ಅವರು ಅದು ಸಿಗುವ ಅಂಗಡಿಯಲ್ಲಿ ಖರೀದಿಸಬೇಕು. ಒಂದು ಅಂಗಡಿಯಿಂದ ಪ್ರಾರಂಭವಾಗಿ ಮತ್ತೊಂದು ಅಂಗಡಿಯಲ್ಲಿ ಒಂದೀಡಿ ಜೀವನದ ಚಕ್ರ ಬಂದು ನಿಲ್ಲುತ್ತದೆ. ಇದೆಲ್ಲವೂ ಎರಡು ತಿಂಗಳಿನಿಂದ ನಿಂತಿದೆ. ಇದೆಲ್ಲ ನಡೆದರೆ ಜನರಿಗೆ ಉದ್ಯೋಗ ಸಿಗುತ್ತದೆ. ಸರಕಾರಕ್ಕೆ ಪರೋಕ್ಷ, ಪ್ರತ್ಯಕ್ಷ ತೆರಿಗೆಯ ಹಣ ಬರುತ್ತದೆ. ಇದರಿಂದ ದೇಶದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. ದೇಶ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಯಾವುದೂ ನಿಂತ ನೀರಾಗಬಾರದು. ಅದಕ್ಕಾಗಿ ಲಾಕ್ ಡೌನ್ ಸಡಿಲಿಕೆ ಒಂದಿಷ್ಟು ಹೆಚ್ಚೆ ಆಗಿದೆ ಎಂದು ಅನಿಸಬಹುದು. ಆದರೆ ಜನರು ಇದರ ಮಹತ್ವ ಅರಿತು ಮಾಸ್ಕ್, ಸಾಮಾಜಿಕ ಅಂತರ, ಕೈ ತೊಳೆಯುವಿಕೆ ಎಲ್ಲಾ ಸಮರ್ಪಕವಾಗಿ ಮಾಡಿದರೆ ಯಾವುದೂ ಕಷ್ಟವಲ್ಲ.

ಹಾಗಂತ ನಮ್ಮ ದೇಶಕ್ಕೆ ಬಂದ ಮೊದಲ ಕಾಯಿಲೆ ಇದು ಅಲ್ಲವೇ ಅಲ್ಲ. ನಾನು ಹುಟ್ಟುವ ಮೊದಲು ಪ್ಲೇಗ್ ಎನ್ನುವ ಕಾಯಿಲೆ ಊರಿಗೆ ಊರನ್ನೇ ಮುಗಿಸುವಷ್ಟು ಭಯಾನಕವಾಗಿತ್ತು. ನಾನು ಹುಟ್ಟಿದ ಬಳಿಕ ನಾನು ಕೇಳಿದ್ದು ಟಿಬಿ. ಅದಕ್ಕೆ ಔಷಧ ಸಿಗುವ ತನಕ ಆ ಬಗ್ಗೆ ನಮ್ಮಲ್ಲಿ ಹೆದರಿಕೆ ಇದ್ದೇ ಇತ್ತು. 1994 ರಲ್ಲಿ ನಮ್ಮ ದೇಶ ಕೇಳಿದ್ದು ಏಡ್ಸ್. ಅದರ ಬಳಿಕ ಕ್ಯಾನ್ಸರ್. ಇವತ್ತಿಗೂ ಕ್ಯಾನರ್ಸ್ ನಲ್ಲಿರುವ ಎಲ್ಲಾ ಪ್ರಭೇದಗಳಿಗೆ ಔಷಧ ಸಿಕ್ಕಿಲ್ಲ. ಈಗ ಕೊರೊನಾದ ಕಸಿನ್ ಕೋವಿಡ್ 19. ಇದಕ್ಕೆ ಔಷಧ ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಮಳೆಗಾಲ ಬರುತ್ತಿದ್ದಂತೆ ಡೆಂಗ್ಯೂ, ಮಲೇರಿಯಾ ನಮ್ಮ ಜೊತೆಯಲ್ಲಿಯೇ ಇರುತ್ತವೆ. ಹಾಗಂತ ನಾವು ಎಲ್ಲವನ್ನು ಮುಚ್ಚಿ ಮನೆಯ ಬೆಡ್ ರೂಂನಲ್ಲಿ ಬೆಡ್ ಶೀಟ್ ಹೊದ್ದು ವರ್ಷಗಟ್ಟಲೆ ಇರೋಕೆ ಆಗುತ್ತಾ? ಬದುಕಿನ ಬಂಡಿ ನಿಧಾನವಾಗಿ, ಮುಂಜಾಗ್ರತೆಯಿಂದ ಸಾಗಲೇಬೇಕು. ಸಿನೆಮಾ ಥಿಯೇಟರ್ ಗಳಲ್ಲಿ ಸಿನೆಮಾ ನೋಡಲು ಅವಕಾಶ ಇಲ್ಲದಿದ್ದರೆ ಮನೆಯಲ್ಲಿಯೇ ಟಿವಿ ನೋಡಿ. ಹೋಟೇಲಿನಲ್ಲಿ ತಿನ್ನಲು ಅವಕಾಶ ಇಲ್ಲವಾದರೆ ಮನೆಯಲ್ಲಿಯೇ ತಿನ್ನಿ. ಟಿಫಿನ್ ತೆಗೆದುಕೊಂಡು ಹೋಗಿ. ಅದು ಬಿಟ್ಟು ಲಾಕ್ ಡೌನ್ ಇನ್ನಷ್ಟು ಕಠಿಣ ಆಗಬೇಕು ಎನ್ನುವವರಿಗೆ ಹೊಟ್ಟೆ ತುಂಬಿದೆ ಎಂದೇ ಅರ್ಥ!

  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Hanumantha Kamath July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Hanumantha Kamath July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search