• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆ ಮಹಾ ತಾಯಿಯ ಹೆಸರು ರಝೀನಾ ಸೂಬೀನಾ ರೊಸಾರಿಯೋ.

Hanumantha Kamath Posted On May 31, 2020


  • Share On Facebook
  • Tweet It

ಮಹಾ ತಾಯಿ ಎಂದು ಯಾಕೆ ಸಂಭೋದಿಸಿದೆ ಎಂದರೆ ಆಕೆ ನಮ್ಮ ಊರಿಗಾಗಿ ಬಿಟ್ಟುಕೊಟ್ಟ 24 ಎಕರೆ ಹದಿನೆಂಟು ಸೆಂಟ್ಸ್ ಜಾಗದ ಮಹತ್ವದ ಕಾರಣ. ಅದು ಕೂಡ ಯಾವುದೋ ಜನವಸತಿ ಇಲ್ಲದ, ಗುಡ್ಡಕಾಡಿನ ಮಧ್ಯದಲ್ಲಿ ಇರುವ ತನ್ನ ಭೂಮಿ ವೇಸ್ಟ್ ಆಗುವುದು ಬೇಡಾ, ತನ್ನ ಅಜ್ಜನದ್ದೊ, ಪಿಜ್ಜನದ್ದೋ ಹೆಸರು ಶಾಶ್ವತವಾಗಿ ಇರಲಿ ಎನ್ನುವ ಕಾರಣಕ್ಕಾಗಿ ಆಕೆ ಜಾಗ ಬಿಟ್ಟು ಕೊಟ್ಟಿದ್ದು ಅಲ್ಲ. ಆಕೆಯ ಜಾಗ ಇದ್ದದ್ದು ಈಗ ನಾವು ರಾಜಕೀಯ ಸಮಾವೇಶ, religious, social ಕಾರ್ಯಕ್ರಮ ಎಲ್ಲ ಮಾಡುತ್ತಿದ್ದೆವಲ್ಲ, ಈ ಮೈದಾನದಲ್ಲಿ. ಈ ಮೈದಾನ 24 ಎಕರೆಯಷ್ಟು ದೊಡ್ಡದಿದೆಯಾ ಎಂದು ನೀವು ಕೇಳಬಹುದು. ಬಹುಶ: ಇದೇ ಪ್ರಶ್ನೆ ಆ ಮಹಾ ತಾಯಿಗೂ ಕೇಳಿಸಿದರೆ ಆಕೆಯ ಆತ್ಮ ಎಲ್ಲೋ ದು:ಖದಿಂದ ಅಳಲೂ ಬಹುದು. ಇವತ್ತು ಅದೇ ಮೈದಾನದ ಮೇಲೆ ನಿಂತು ಕಾಂಗ್ರೆಸ್ಸಿಗರು ಕೇಂದ್ರ ಸರಕಾರದ ವಿರುದ್ಧ ಮಾತನಾಡುತ್ತಾ, ತಮ್ಮ ಬೆನ್ನು ತಾವೇ ತಟ್ಟುತ್ತಾ, ನೆಹರೂ ಪ್ರತಿಮೆಯನ್ನು ಅನಾವರಣ ಮಾಡುತ್ತಾ ಇದ್ದರೆ ಅತ್ತ ಯಾವುದೋ ಮೂಲೆಯಲ್ಲಿ ಕೈಯಲ್ಲಿ ಬ್ಯಾಟ್, ಬಾಲ್ ಹಿಡಿದು ” ಇನಿ ಗೊಬ್ಬೆರೆ ಆಪ್ಪುಜಿಯೇ, ಮುಕುಲೆನಾ ಎಂಚಿನನ ಕರ್ಮ ಆವೊಂದುಂಡು” ಎಂದು ಒಂದಿಷ್ಟು ಹುಡುಗರು ಮನಸ್ಸಿನಲ್ಲಿಯೇ ಗೊಣಗುತ್ತಿರಬಹುದು.

ಆದರೆ ಯಾವುದನ್ನು ಕೇಳುವ ಸ್ಥಿತಿಯಲ್ಲಿ ಇವತ್ತು ಯಾರೂ ಇಲ್ಲ. ಇದೇ ಮೈದಾನದಲ್ಲಿ ಹಿಂದೆ ಅಡ್ವಾಣಿಯವರು ಕೂಡ ಭಾಷಣ ಮಾಡಿದ್ದಾರೆ, ನರೇಂದ್ರ ಮೋದಿಯವರು ಕೂಡ ಲಕ್ಷಗಟ್ಟಲೆ ಜನರನ್ನು ಸೇರಿಸಿದ್ದಾರೆ. ಆದ್ದರಿಂದ ಇದು ಕಾಂಗ್ರೆಸ್ ಪಕ್ಷದ ಮೊದಲ ಮಿಸ್ಟೇಕ್ ಅಂತ ನಾನು ಹೇಳ್ತಾ ಇಲ್ಲ. ಇವತ್ತು ಮಾಡಿರುವ ಸಮಾವೇಶ ಕಾಂಗ್ರೆಸ್ಸಿನವರದ್ದು ಕೊನೆದ್ದೂ ಆಗಿರಲಿಕ್ಕಿಲ್ಲ. ಆ ಮಹಿಳೆ ಆವತ್ತು ಜಾಗ ಕೊಡುವಾಗ ದಯವಿಟ್ಟು ಇದನ್ನು ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸಿ ಎಂದು ಹೇಳಿಯೇ ಕೊಟ್ಟಿದ್ದರು. ಯಾವಾಗ ಒಂದು specific ಕಾರಣಗಳಿಗಾಗಿ ಸರಕಾರಿ ಸ್ವತ್ತನ್ನು ಬಳಸಲು ಅವಕಾಶ ಇರುವಾಗ ಅದನ್ನು ಬೇರೆ ಕೆಲಸಗಳಿಗೆ ಬಳಸುವುದು ಅಕ್ಷರಶ: ತಪ್ಪು. ಇದು ಅಧಿಕಾರದಲ್ಲಿರುವ ಪಕ್ಷಗಳಿಗೆ ಗೊತ್ತಿಲ್ಲ ಎಂದಲ್ಲ. ನೇತ್ರಾವತಿ ಅಥವಾ ಎತ್ತಿನಹೊಳೆಯ ವಿಷಯದಲ್ಲಿಯೂ ಆಗಿರುವುದು ಅದೇ. ಕುಡಿಯುವ ನೀರಿನ ಉದ್ದೇಶಗಳಿಗಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪ್ರಾಮಿಸ್ ಮಾಡಿರುವ ರಾಜ್ಯ ಸರಕಾರ ಅಂತಹ ಉದ್ದೇಶ ಎಂದು ಹೇಳಿದರೆ ಕೇಂದ್ರ ಆಕ್ಷೇಪ ಎತ್ತುವುದಿಲ್ಲ ಎಂದು ಗ್ಯಾರಂಟಿ ಇರುವುದರಿಂದ ಸುಳ್ಳು ಹೇಳಿ ಅನುಮತಿಯನ್ನು ಪಡೆದುಕೊಂಡದ್ದು ನಮಗೆಲ್ಲಾ ಗೊತ್ತೆ ಇದೆ. ನಾಳೆ ನೇತ್ರಾವತಿ ಕುಡಿಯಲು ಮಾತ್ರ ಬಳಕೆಯಾಗುತ್ತಾಳೋ ಅಥವಾ ಇವರ industries ನಲ್ಲಿ ಗಳಲ್ಲಿ ಓಡಾಡುತ್ತಾಳೋ ಯಾರಿಗೆ ಗೊತ್ತು.

ಅಷ್ಟಕ್ಕೂ ಸಫೀನಾ ರೊಸಾರಿಯೋ ಜೀವಂತ ಇದ್ದಷ್ಟು ಸಮಯ ಆ ಮೈದಾನದಲ್ಲಿ ಕ್ರೀಡೆ ಬಿಟ್ಟು ಬೇರೆ ಏನೂ ಚಟುವಟಿಕೆ ಆಗದಂತೆ ಎಚ್ಚರಿಕೆ ವಹಿಸಿಕೊಂಡಿದ್ದರು. 1952 ರಲ್ಲಿ ಆಗ ಮಂಗಳೂರು ನಗರಸಭೆ ಇದ್ದಾಗ ನಗರಸಭೆಯ ಕಮೀಷನರ್ ಆಗಿ ಕೆಎಸ್ ಎನ್ ಅಡಿಗ ಇದ್ದರು. ಅವರು ಇದೇ ಮೈದಾನದಲ್ಲಿ ಒಂದು ಧ್ವಜಸ್ತಂಭ ಮಾಡಲು ಮುಂದಾಗಿದ್ದರು. ಒಂದಿಷ್ಟು ಜಾಗದಲ್ಲಿ ಧ್ವಜಸ್ತಂಭದ construction ಕೂಡ ಆಗಿತ್ತು. ಅದನ್ನು ಪ್ರಶ್ನಿಸಿ ಈ ಮಹಿಳೆ ಆಗಿನ ಜಿಲ್ಲಾಧಿಕಾರಿ ಈಸ್ಟ್ ಲೆಕ್ ಅವರಿಗೆ ದೂರನ್ನು ಸಲ್ಲಿಸಿ ನೀವು ಆ ಧ್ವಜಸ್ತಂಭವನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳು ತೆರವು ಮಾಡಿ ಎಂದು ನಗರಸಭೆಗೆ ಆದೇಶಿಸಿದಾಗ ಮಂಗಳೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಉತ್ಸವ ನಡೆಯುವಾಗ ಅದನ್ನು ಆಚರಿಸಲು ಬೇರೆ ಸೂಕ್ತ ಜಾಗ ಇಲ್ಲದೆ ಇರುವುದರಿಂದ ಇದೇ ಮೈದಾನದಲ್ಲಿ ಧ್ವಜಸ್ತಂಭ ನಿರ್ಮಿಸಿದ್ದೇವೆ ಎಂದು ಉತ್ತರ ಬಂದಿತ್ತು. ಆದರೆ ಶ್ರೀಮತಿ ರೋಸಾರಿಯೋ ಅದನ್ನು ಒಪ್ಪದೆ ಈ ಪ್ರಕರಣವನ್ನು ಆಗಿನ ಮದರಾಸು ಪ್ರಾಂತ್ಯದ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಎರಡು ಕಡೆಗಳ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ “ಕೇವಲ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಒಂದಿಷ್ಟು ಸಮಯ ಇಲ್ಲಿ ಸರಕಾರಿ ಕಾರ್ಯಕ್ರಮಗಳ ಆಚರಣೆಗೆ ಅನುಮತಿ ನೀಡಿತ್ತು. ಇದು ವರ್ಷದ ಕೆಲವು ದಿನ ಮಾತ್ರ ಸಡಿಲಿಕೆ ಇರುತ್ತದೆ ವಿನ: ಬೇಕಾಬಿಟ್ಟಿ ಬೇಕಾದಾಗೆಲ್ಲ ಈ ಮೈದಾನವನ್ನು ನಿಮಿಚ್ಚೆಯಂತೆ ಬಳಸಬಾರದು” ಎಂದು ಸೂಚನೆ ಕೊಟ್ಟಿತ್ತು. ಅತ್ತ ಮದರಾಸು ನ್ಯಾಯಾಲಯ ಸ್ವಲ್ಪ ಸಡಿಲಿಕೆ ಕೊಟ್ಟರೆ ಇತ್ತ ಸಣ್ಣದಾಗಿದ್ದ ಧ್ವಜಸ್ತಂಭವನ್ನು ತೆಗೆದು ಸ್ಥಳೀಯಾಡಳಿತ ದೊಡ್ಡ ಜಾಗದಲ್ಲಿ ಅದನ್ನು ನಿರ್ಮಿಸಿತ್ತು. ಅದು ಮೊದಲ ಅತಿಕ್ರಮಣ.

ಈ ಮೈದಾನಕ್ಕೆ ಆತುಕೊಂಡೇ ಮಂಗಳೂರಿನ ಅತ್ಯಂತ ಪ್ರಾಚೀನ ಪೊಟೆಸ್ಟೆಂಟ್ಸ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಚರ್ಚ ಒಂದಿದೆ. ಅದನ್ನು ಸೇಂಟ್ ಪೌಲ್ ಚರ್ಚ ಎನ್ನುತ್ತಾರೆ. ಧ್ವಜಸ್ತಂಭದಿಂದ ಪ್ರಾರಂಭವಾದ ಅತಿಕ್ರಮಣ ಎಲ್ಲಿಯ ತನಕ ಬಂತೆಂದರೆ ಪುರಭವನ, ಪಾರ್ಕ, ಮೀನು ಮಾರುಕಟ್ಟೆ, ಜಿನಸಿ ಮಾರುಕಟ್ಟೆ, ಸಿಟಿ ಬಸ್ ಸ್ಟೇಂಡ್, service ಬಸ್ ಸ್ಟೇಂಡ್ ತನಕ ಅದು ಬಂದು ಮುಟ್ಟಿದೆ. 24.18 ಎಕರೆಯಲ್ಲಿ ಕೇವಲ ಆಟವಾಡಿ ಎಂದರೆ ಈಗ ಆಟಕ್ಕೆ ಉಳಿದಿರುವುದು 6.5 ಎಕರೆ ಕ್ರಿಕೆಟಿಗೆ ಮತ್ತು 3.22 ಫುಟ್ ಬಾಲಿಗೆ ಮಾತ್ರ. ಉಳಿದ ಜಾಗದಲ್ಲಿ ಬರೀ ವ್ಯವಹಾರ. ಬೆರಳು ಕೊಟ್ಟರೆ ಕೈಯನ್ನು ನುಂಗುವ ನಮ್ಮ ರಾಜಕಾರಣಿಗಳು, ಅಧಿಕಾರಿಗಳಿಗೆ ಇಷ್ಟು ಸಲೀಸಾಗಿ ಮೈದಾನವನ್ನು ಅತಿಕ್ರಮಿಸಲು ಹೇಗೆ ಸಾಧ್ಯವಾಯಿತು? ಆ ಬಗ್ಗೆ ನಿಮಗೆ ಹೇಳ್ತಿನಿ. ಅಷ್ಟಕ್ಕೂ ನೆಹರೂ ಅವರ ಬದಲಿಗೆ ಆ ಹೆಂಗಸಿನ ಹೆಸರೇ ಇಡಬಹುದಿತ್ತು, ಬೇಡ ಅನ್ನುತ್ತಿದ್ದವರು ಯಾರು? ಕ್ರೈಸ್ತರು ಖುಷಿಯಾಗಿ ನಿಮಗೆ ಇನ್ನಷ್ಟು ವೋಟ್ ಹಾಕಿದ್ರು ಹಾಕುತ್ತಿದ್ದರೆನೋ. ಆದರೆ ಜಾತಿ, ಧರ್ಮಗಳನ್ನು ಕೇವಲ ವೋಟ್ ಬ್ಯಾಂಕ್ ಗಳಾಗಿ ಬಳಸುವ ಪಕ್ಷಗಳಿಗೆ ಮೈದಾನ ಜಮೀನು ನೀಡಿದ ಶ್ರೀಮತಿ ರೋಸಾರಿಯೋ ನೆನಪಿದರೆ ತಾನೆ.

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search