• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

10ನೇ ತರಗತಿಯ ಪರೀಕ್ಷೆ ಬರೆಯುವ ಮಕ್ಕಳು ಎರಡು ಸಲಹೆ ಅನುಸರಿಸಿದರೆ ಒತ್ತಡ ಇರುವುದಿಲ್ಲ!!

Hanumantha Kamath Posted On June 20, 2020


  • Share On Facebook
  • Tweet It

ಇದೇ ಜೂನ್ 25 ರಂದು ರಾಜ್ಯ ಸರಕಾರದಿಂದ ಹತ್ತನೇ ತರಗತಿಯ ಪರೀಕ್ಷೆಗಳು ಶುರುವಾಗುತ್ತವೆ. ಈ ಪರೀಕ್ಷೆಗಳು ಬೇಕಿತ್ತಾ, ಬೇಡವೇ ಎನ್ನುವುದನ್ನು ಈಗ ಮಾತನಾಡಿ ಪ್ರಯೋಜನವಿಲ್ಲ. ಯಾಕೆಂದರೆ ಪರೀಕ್ಷೆಗಳನ್ನು ಮಾಡಿಯೇ ಶುದ್ಧ ಎಂದು ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ನಿರ್ಧರಿಸಿಯಾಗಿದೆ. ಆದ್ದರಿಂದ ಈಗ ವಿಷಯ ಇರುವುದು ಈ ಪರೀಕ್ಷೆಗಳನ್ನು ಬರೆಯುವ ಮಕ್ಕಳು ಅದನ್ನು ಹೇಗೆ ಎದುರಿಸುವುದು ಎನ್ನುವುದು ಮಾತ್ರ. ಕೊರೊನಾ ಅವಧಿ ಅಲ್ಲದೇ ಇದ್ದಿದ್ದರೆ ಈ ವಿಷಯದ ಮೇಲೆ ಜಾಗೃತ ಅಂಕಣ ಬರೆಯುವ ಅಗತ್ಯವೇ ಇರುವುದಿಲ್ಲ. ಆದರೆ ಈಗ ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಒತ್ತಡದೊಂದಿಗೆ ಸಾಂಕ್ರಾಮಿಕ ರೋಗದ ಹರಡುವಿಕೆಯ ಆತಂಕದ ನಡುವೆ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ನನ್ನ ಆತ್ಮೀಯರಾಗಿರುವ ಡಾ.ಅನಂತ ಪ್ರಭು ಗುರುಪುರ್ ಅವರು ಮಕ್ಕಳು ನಿರಾಂತಕವಾಗಿ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎನ್ನುವುದರ ಬಗ್ಗೆ ವಿಶಿಷ್ಟ ಸಲಹೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಅವು ಉತ್ತಮ ಸಲಹೆಗಳಾಗಿರುವುದರಿಂದ ಅದನ್ನು ಮಕ್ಕಳು ಮತ್ತು ಪೋಷಕರು ಅನುಸರಿಸಲಿ ಎನ್ನುವುದು ನನ್ನ ಆಶಯ. ಅದಕ್ಕಾಗಿ ಇವತ್ತು ನಿಮ್ಮ ಮುಂದೆ ಆ ವಿಷಯಗಳನ್ನು ಇಡುತ್ತಿದ್ದೇನೆ. ಮೊದಲನೇಯದಾಗಿ ಮೂರು ಗಂಟೆ ಮಾಸ್ಕ್ ಧರಿಸುವುದು ಮತ್ತು ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರುವ ಮತ್ತು ಒಂದು ಗಂಟೆ ಮೊದಲು ಅಲ್ಲಿ ಇರಬೇಕಾದ ಸಮಯ ಎಲ್ಲವೂ ಸೇರಿದರೆ ಒಂದು ಮಗು ಕನಿಷ್ಟ ಐದು ಗಂಟೆಯಾದರೂ ಮಾಸ್ಕ್ ಧರಿಸಿಯೇ ಇರಬೇಕಾಗುತ್ತದೆ. ಇನ್ನು ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವುದು ಕಿರಿಕಿರಿ, ಮನಸ್ಸೆಲ್ಲಾ ಮಾಸ್ಕ್ ಮೇಲೆನೆ ಇರುತ್ತದೆ. ಹೇಗೆ ಪರೀಕ್ಷೆಯನ್ನು ಉತ್ತಮವಾಗಿ ಬರೆಯುವುದು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಅನಂತ ಪ್ರಭು ಹೇಳಿದ ಹಾಗೆ ಇವತ್ತಿನಿಂದಲೇ ಮನೆಯಲ್ಲಿ ಮೂರು ಗಂಟೆ ಒಂದೇ ಕಡೆ ಕುಳಿತು, ಮಾಸ್ಕ್ ಧರಿಸಿ, ಹಿಂದಿನ ವರ್ಷಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬರೆಯುವುದು ಉತ್ತಮ ವಿಧಾನ. ಮಕ್ಕಳು ತಾವು ಪರೀಕ್ಷೆಗೆ ಕುಳಿತುಕೊಂಡಿದ್ದೇವೆ ಎನ್ನುವ ಭಾವನೆಯನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಹಾಗೆ ಒಂದು ಕೋಣೆಯಲ್ಲಿ ಕುಳಿತು, ಟಾಯ್ಲೆಟಿಗೆ ಕೂಡ ಹೋಗಲು ಏಳದೆ ಪರೀಕ್ಷೆಯನ್ನೇ ಅಕ್ಷರಶ: ಎದುರಿಸುವಂತೆ ಬರೆದರೆ ಆಗ ನಾಡಿದ್ದು ಜೂನ್ 25 ರಿಂದ ಆರು ದಿನ ಕ್ಲಾಸ್ ರೂಂನಲ್ಲಿ ಪರೀಕ್ಷೆ ಬರೆಯುವ ವೇಳೆ ಮಾಸ್ಕ್ ಅಭ್ಯಾಸವಾಗುತ್ತದೆ. ಕಿರಿಕಿರಿ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ನೀವು ಈಗಾಗಲೇ ಮಾಸ್ಕ್ ಧರಿಸಿ ಬರೆದು ಅಭ್ಯಾಸ ಮಾಡಿರುವುದರಿಂದ ಅದೊಂದು ಒತ್ತಡ ಇರುವುದಿಲ್ಲ. ಇನ್ನು ಎರಡನೇಯದಾಗಿ ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ಹೋಗುವುದು ಹೇಗೆ ಎನ್ನುವ ಪ್ರಶ್ನೆ.
ಯಾವ ಪೋಷಕರ ಬಳಿ ಖಾಸಗಿ ವಾಹನ ಇದೆಯೋ ಅವರು ಅದರಲ್ಲಿಯೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದು ಬಹಳ ಉತ್ತಮ. ಇನ್ನು ಯಾವ ಮಕ್ಕಳ ಪೋಷಕರ ಬಳಿ ವಾಹನ ಇಲ್ಲದೆ ಬಸ್ಸನ್ನು ಅವಲಂಬಿತರಾಗಿದ್ದಾರೋ ಅಂತವರು ಒಂದೋ ತಮ್ಮ ಗೆಳೆಯರ ಬಳಿ, ಸಂಬಂಧಿಗಳ ಬಳಿ, ಹಿತೈಷಿಗಳ ಬಳಿ ವಿನಂತಿಸಿ ಸಹಾಯ ಕೇಳುವುದು ಒಳ್ಳೆಯದು. ಅದು ಆಗದಿದ್ದರೆ ಪ್ರತಿ ಊರಿನಲ್ಲಿ ಹತ್ತು ಹಲವು ಸಮಾಜಸೇವಾ ಸಂಘಟನೆಗಳು ಇದ್ದೇ ಇರುತ್ತವೆ. ಅದರ ಪ್ರಮುಖರು ತಮ್ಮ ಊರಿನಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆಯುವ ಮಕ್ಕಳು ಖಾಸಗಿ ವಾಹನದ ಅವಶ್ಯಕತೆ ಇದ್ದಲ್ಲಿ ನಾವು ಸಾಮಾಜಿಕ ಅಂತರ ಕಾಪಾಡಿ ಪರೀಕ್ಷೆಗೆ ಕರೆದುಕೊಂಡು ಹೋಗಿ ನಂತರ ತಂದು ಬಿಡುತ್ತೇವೆ ಎಂದು ಹೇಳುವ ಮೂಲಕ ಮಕ್ಕಳ, ಪೋಷಕರ ಆತಂಕವನ್ನು ದೂರ ಮಾಡಬಹುದು.

ಇನ್ನು ಮೂರನೇಯದಾಗಿ ಅನಂತ ಪ್ರಭು ಸಲಹೆಯಂತೆ ಸರಕಾರ ಹೇಗೂ ಜೂನ್ ಕೊನೆಯ ವಾರದಲ್ಲಿ ಪರೀಕ್ಷೆ ಬರೆಯದ ಮಕ್ಕಳಿಗೆ ಜುಲೈ ಕೊನೆಯ ವಾರದಲ್ಲಿ ಮತ್ತೊಂದು ಪರೀಕ್ಷೆ ಮಾಡಿ ಅಲ್ಲಿ ಬರೆಯುವ ಅವಕಾಶ ಕೊಡುವ ಬಗ್ಗೆ ಪ್ರಾಮಿಸ್ ಮಾಡಿದೆ. ಅದರ ಬದಲು ಯಾವ ಮಗುವಿಗೆ ನಾಡಿದ್ದು ಬರೆದ ಪರೀಕ್ಷೆಯ ಬಗ್ಗೆ ಸಮಾಧಾನವಾಗಿಲ್ಲವೋ ಅಂತಹ ಮಕ್ಕಳು ಜುಲೈಯಲ್ಲಿ ಮತ್ತೆ ಪರೀಕ್ಷೆ ಬರೆಯುವ ಅವಕಾಶ ಕೊಟ್ಟು ಎರಡರಲ್ಲಿ ಯಾವ ಪರೀಕ್ಷೆಯ ಅಂಕಗಳು ಉತ್ತಮ ಇದೆಯೋ ಅದನ್ನು ಉಳಿಸುವ ಅವಕಾಶ ನೀಡಬಹುದು ಎನ್ನುವ ಸಲಹೆ ನೀಡಿದ್ದಾರೆ. ಸರಕಾರ ಇದನ್ನು ಪರಿಗಣಿಸಿ ಹಾಗೆ ಮಾಡಿದರೆ ಮಕ್ಕಳ, ಪೋಷಕರ ಮೇಲಿನ ಭಾರ ಕಡಿಮೆಯಾಗುತ್ತದೆ.

ಕೊನೆಯದಾಗಿ ಹಿಂದಿನ ದಿನವೇ ಎಸ್ ಎಂಎಸ್ ಮೂಲಕ ರೂಂ ನಂಬರ್ ಸಿಕ್ಕಿದರೆ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ನೋಟಿಸ್ ಬೋರ್ಡ್ ನಲ್ಲಿ ಹುಡುಕುವ ಅಗತ್ಯ ಇರುವುದಿಲ್ಲ. ಅದನ್ನು ಸರಕಾರ ಪಾಲಿಸಲಿ ಎಂದು ಹೇಳುತ್ತಾ ಎಲ್ಲಾ ಮಕ್ಕಳಿಗೆ ಆಲ್ ದಿ ಬೆಸ್ಟ್!!

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Hanumantha Kamath February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Hanumantha Kamath January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search