• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಉರ್ವಾ ಬಯೋಗ್ಯಾಸ್ ವಿದ್ಯುತ್ ಉತ್ಪಾದನಾ ಘಟಕ ಮತ್ತೆ ಶುರುವಾಗುವ ನಿರೀಕ್ಷೆಯಲ್ಲಿ….!

Tulunadu News Posted On September 6, 2020
0


0
Shares
  • Share On Facebook
  • Tweet It

ಈ ಬಗ್ಗೆ ನಾನು ಹಿಂದೆ ಸರಣಿ ಲೇಖನದಲ್ಲಿ ಬರೆದಿದ್ದೆ. ಅದಕ್ಕೆ ಈಗ ಮತ್ತೆ ಜೀವ ಬಂದಿದೆ. ತ್ಯಾಜ್ಯದಿಂದ ಬಯೋಗ್ಯಾಸ್ ಸೃಷ್ಟಿಸಿ ವಿದ್ಯುತ್ ಉತ್ಪಾದಿಸಬಹುದು ಎಂದು ಮೊದಲು ಆರಂಭವಾದದ್ದೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉರ್ವಾದಲ್ಲಿ. ಅದು 2011 ನೇ ಇಸವಿ. ಆಗ ಪಾಲಿಕೆಯಲ್ಲಿ ಕಮೀಷನರ್ ಆಗಿದ್ದವರು ಹರೀಶ್ ಕುಮಾರ್. ನಂತರ ಅವರು ಜಿಲ್ಲಾಧಿಕಾರಿಯಾಗಿ ಉತ್ತರ ಕನ್ನಡ ಸೇರಿ ಆ ಕಡೆ ಹೋದರು. ಅಂತವರನ್ನು ನಾವು ತುಂಬಾ ದಿನ ನಮ್ಮಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅದು ಮಂಗಳೂರಿನ ದೌರ್ಭಾಗ್ಯ. ಇರಲಿ, ಈಗ ಬಯೋಗ್ಯಾಸ್ ಬಗ್ಗೆ ಬರೋಣ. ಆಗ ಉರ್ವಾದಲ್ಲಿ 22 ಲಕ್ಷ 42 ಸಾವಿರ ಖರ್ಚು ಮಾಡಿ ಬಯೋಗ್ಯಾಸ್ ನಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕಕ್ಕೆ ಚಾಲನೆ ನೀಡಲಾಯಿತು. ಅದಕ್ಕೆ ನಿತ್ಯ ಕನಿಷ್ಟ 200 ಕೆಜಿ ಹಸಿ ತ್ಯಾಜ್ಯ ಅವಶ್ಯಕತೆ ಇತ್ತು. ಅದನ್ನು ತಂದು ಹಾಕಿದರೆ ಅದರಿಂದ ಉತ್ಪಾದನೆಯಾಗುವ ಬಯೋಗ್ಯಾಸ್ ನಿಂದ ವಿದ್ಯುತ್ ಉತ್ಪಾದಿಸಿದರೆ ಕನಿಷ್ಟ 160 ಬೀದಿ ದೀಪಗಳನ್ನು ಉರಿಸಬಹುದಿತ್ತು. ಇಲ್ಲದಿದ್ದರೆ ಅಲ್ಲಿಯೇ ಪಕ್ಕದಲ್ಲಿ ಉರ್ವಾ ಮಾರುಕಟ್ಟೆ ಇದೆ, ಅದಕ್ಕೆ ಕೊಡಬಹುದಿತ್ತು. ಇಲ್ಲ, ಮೆಸ್ಕಾಂನವರಿಗೆ ಕೊಡಬಹುದಿತ್ತು. ನಮ್ಮಲ್ಲಿ ಹಸಿ ತ್ಯಾಜ್ಯಕ್ಕೇನೂ ಬರವಿಲ್ಲ. ಹತ್ತಿರದಲ್ಲಿಯೇ ಸೆಂಟ್ರಲ್ ಮಾರುಕಟ್ಟೆ ಇದೆ. ಹೇಗೂ ಸೆಂಟ್ರಲ್ ಮಾರ್ಕೆಟ್ ನಿಂದ ನಿತ್ಯ 500 ರಿಂದ 600 ಕೆಜಿ ಹಸಿತ್ಯಾಜ್ಯ ಉತ್ಪಾದನೆ ಆಗುತ್ತದೆ. ಅದನ್ನು ತಂದು ಇದಕ್ಕೆ ಸುರಿದರೆ ಕನಿಷ್ಟ 160 ಟ್ಯೂಬ್ ಲೈಟ್ ಗಳನ್ನು ಆರಾಮವಾಗಿ ನಿತ್ಯ ಉರಿಸುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಅದರೆ ಆಯಿತಾ?
 ಅಷ್ಟೇ ಅಲ್ಲದೇ 2011 ರಲ್ಲಿ ಟೆಂಡರ್ ಆಗಿ ಯಾರಿಗೆ ಗುತ್ತಿಗೆ ಸಿಕ್ಕಿದೆಯೋ ಅವರೇ ಅದರ ನಿರ್ಮಾಣ ಮಾಡಿ ಒಂದು ವರ್ಷದ ತನಕ ಅದೇ ಗುತ್ತಿಗೆದಾರ ವಿದ್ಯುತ್ ಉತ್ಪಾದನೆ ಮಾಡಿ ಅವರೇ ನಿರ್ವಹಣೆ ಮಾಡಿಕೊಡುವ ಒಪ್ಪಂದ ಕೂಡ ಆಗಿತ್ತು. ಆದ್ದರಿಂದ ಪಾಲಿಕೆಗೆ ಟೆನ್ಷನ್ ಕೂಡ ಇರಲಿಲ್ಲ. ಒಂದು ವರ್ಷದ ನಂತರ ಆ ಗುತ್ತಿಗೆದಾರರ ಅವಧಿ ಮುಗಿದ ಬಳಿಕ ಆ ಘಟಕವನ್ನು ಹೇಳುವವರು, ಕೇಳುವವರು ಯಾರೂ ಇಲ್ಲ. ವಿದ್ಯುತ್ ಉತ್ಪಾದನೆ ಮಾಡುವುದು ಹಾಗಿರಲಿ, ಖರ್ಚು ಮಾತ್ರ ಹಾಗೆ ಇದೆ. ಈಗ ವಿಷಯ ಏನೆಂದರೆ ಕಾಂಗ್ರೆಸ್ ಪಾಲಿಕೆಯಲ್ಲಿ ಆಡಳಿತದಲ್ಲಿ ಇದ್ದಾಗ ಸೆಂಟ್ರಲ್ ಮಾರ್ಕೆಟ್ ನಿಂದ ನಿತ್ಯ ಹಸಿತ್ಯಾಜ್ಯ ತಂದು ಅಲ್ಲಿ ಸುರಿಯಲು ಪಾಲಿಕೆ ತಿಂಗಳಿಗೆ 40 ರಿಂದ 60 ಸಾವಿರ ರೂಪಾಯಿಯನ್ನು ವ್ಯಯ ಮಾಡುತ್ತಿತ್ತು. ತ್ಯಾಜ್ಯವನ್ನು ಸೆಂಟ್ರಲ್ ಮಾರುಕಟ್ಟೆಯಿಂದ ಉರ್ವಾಕ್ಕೆ ತರಬೇಕು ಮತ್ತು ತಂದು ಇಲ್ಲಿ ಸುರಿಯಬೇಕು. ಆದರೆ ಇಲ್ಲಿಯ ತನಕ 2011 ರಿಂದ ಅಲ್ಲಿ ಒಂದೇ ಒಂದು ಟ್ಯೂಬ್ ಉರಿಯುವಷ್ಟು ವಿದ್ಯುತ್ ಉತ್ಪಾದನೆಯಾಗಿಲ್ಲ. ಯಾಕೆಂದರೆ ಅದನ್ನು ನಿರ್ವಹಿಸಲು ಕೊಟ್ಟಿರುವುದು ವಿದ್ಯುತ್ ಉತ್ಪಾದನೆ ಬಗ್ಗೆ ಯಾವುದೇ ಅನುಭವ ಇಲ್ಲದ ಆರೋಗ್ಯ ವಿಭಾಗಕ್ಕೆ. ಅವರಿಗೆ ಅದು ಬಿದ್ದು ಹೋಗಿಲ್ಲ. ಅಸಲಿಗೆ ಅವರಿಗೆ ಅದರ ಜ್ಞಾನವೇ ಇಲ್ಲ ಎಂದ ಮೇಲೆ ವಿದ್ಯುತ್ ಹೇಗೆ ಆಟೋಮೇಟಿಕ್ ಆಗಿ ಉತ್ಪಾದನೆಯಾಗುತ್ತದೆ. ಮೊನ್ನೆ ಸೆಪ್ಟೆಂಬರ್ ನಾಲ್ಕು ತಾರೀಕಿಗೆ ಆರೋಗ್ಯ ಸ್ಥಾಯಿ ಸಮಿತಿ ಮೀಟಿಂಗ್ ನಲ್ಲಿ ಅದನ್ನು ನಿರ್ವಹಿಸಲು 12.5 ಲಕ್ಷ ರೂಪಾಯಿ ವಾರ್ಷಿಕ ನಿರ್ವಹಣೆಯ ಟೆಂಡರ್ ಬಂದಿದ್ದು, ಅದನ್ನು ಮಂಜೂರು ಮಾಡಲಿಲ್ಲ. ಈ ಬಗ್ಗೆ ಮೇಯರ್ ದಿವಾಕರ್ ಪಾಂಡೇಶ್ವರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಅವರಿಗೆ ಈ ವಿಷಯ ಗಮನಕ್ಕೆ ನಾನು ತಂದ ಕಾರಣ ಅವರು ಅದನ್ನು ಮಂಜೂರು ಮಾಡಿಲ್ಲ, ಅದಕ್ಕೆ ಅವರಿಗೆ ಧನ್ಯವಾದ. ಹಿಂದೆ ವಿದ್ಯುತ್ ವಿಭಾಗದ ಎಇಇ ಯಶವಂತ ಕಾಮತ್ ಅವರು ಆ ಬಯೋಗ್ಯಾಸ್ ವಿದ್ಯುತ್ ಉತ್ಪಾದನೆಯ ಆ ಘಟಕಕ್ಕೆ ತಾಂತ್ರಿಕ ಬೆಲೂನು ಒಂದು ಅಳವಡಿಸಿದರೆ ವಿದ್ಯುತ್ ಉತ್ಪಾದಿಸಿ ಅದನ್ನು ಮೆಸ್ಕಾಂಗೂ ಕೊಡಬಹುದು ಎನ್ನುವ ಸಲಹೆಯನ್ನು ನೀಡಿದ್ದರು. ಆ ಬೆಲೂನಿನಲ್ಲಿ ಅಮೋನಿಯಾ ಸಹಿತ ವಿವಿಧ ಉತ್ಪಾದನಾ ವ್ಯವಸ್ಥೆ ಇರುತ್ತದೆ. ಅದನ್ನು ಅಳವಡಿಸಲು 12 ರಿಂದ 13 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಆ ಪ್ರಪೋಸಲ್ ಹಾಗೆ ನೆನೆಗುದಿಗೆ ಬಿದ್ದಿತ್ತು. ಅದನ್ನು ಈಗ ಅನುಷ್ಟಾನಕ್ಕೆ ತರಬಹುದು. ಇನ್ನು ಸೆಂಟ್ರಲ್ ಮಾರ್ಕೆಟ್ ನಿಂದ ತ್ಯಾಜ್ಯ ತಂದು ಸುರಿಯಲು ವರ್ಷಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುವ ಅಗತ್ಯವೇ ಇಲ್ಲ. ಯಾಕೆಂದರೆ ಸೆಂಟ್ರಲ್ ಮಾರ್ಕೆಟ್ ನ ಹೊರಗೆ ಹೇಗೂ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಗಾಡಿ ನಿಲ್ಲಿಸುತ್ತಾರೆ. ಅದರಲ್ಲಿ ಅದೇ ಕೊಳೆತ ತರಕಾರಿ, ವೇಸ್ಟ್ ವೆಜಿಟೇಬಲ್ ಹಾಕಿ ಅದು ಪಚ್ಚನಾಡಿ ಡಂಪಿಂಗ್ ಯಾರ್ಡಿಗೆ ಹೋಗುವ ಬದಲು ನೇರ ಉರ್ವಾಕ್ಕೆ ಬಂದರೆ ಮುಗಿಯಿತು. ಸದ್ಯ ಸೆಂಟ್ರಲ್ ಮಾರ್ಕೆಟ್ ಬಂದ್ ಆಗಿರುವುದರಿಂದ ತಾತ್ಕಾಲಿಕ ಮಾರ್ಕೆಟ್ ಅಥವಾ ಎಪಿಎಂಸಿಯಲ್ಲಿ ಒಂದು ರೌಂಡ್ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಗಾಡಿ ರೌಂಡ್ ಹೊಡೆದರೆ ಬೇಕಾದಷ್ಟು ಹಸಿ ತ್ಯಾಜ್ಯ ಸಿಕ್ಕೆ ಸಿಗುತ್ತದೆ. ಹೀಗೆ ಒಂದು ಯೋಜನೆಯನ್ನು ಕಡಿಮೆ ಖರ್ಚಿನಲ್ಲಿ ಮಾಡಿ ಗರಿಷ್ಟ ಲಾಭ ಪಾಲಿಕೆಗೆ ಆಗುವಂತೆ ನೋಡಿಕೊಂಡರೆ ಆಗ ಬಹಳ ಉತ್ತಮ. ಅದು ಬಿಟ್ಟು ಲಕ್ಷಗಟ್ಟಲೆ ಖರ್ಚು ಮಾಡಿ ಮೂರು ಕಾಸಿನ ಲಾಭ ಇಲ್ಲದೇ ಇದ್ದರೆ ಪಾಲಿಕೆಯಲ್ಲಿ ಆಡಳಿತ ಇದ್ದರೆಷ್ಟು, ಬಿಟ್ಟರೆಷ್ಟು!
0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search