• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಭಾರತದ ರೈತ ಕಂಪೆನಿಗಳ ಅಂಗಳದಲ್ಲಿ ಸ್ವತಂತ್ರನಾಗಿದ್ದಾನೆ!!

Tulunadu News Posted On September 22, 2020
0


0
Shares
  • Share On Facebook
  • Tweet It

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ 2020 ಮತ್ತು ರೈತರ ಬೆಲೆ ಖಾತರಿಯ ಒಪ್ಪಂದ ಮತ್ತು ಕೃಷಿ ಸೇವಾ ಕಾಯ್ದೆ 2020 ರಾಷ್ಟ್ರಪತಿಗಳ ಅಂಕಿತದೊಂದಿಗೆ ಜಾರಿಗೆ ಬರಲಿದೆ. ಈ ಮೂಲಕ ರೈತ ತನ್ನ ಉತ್ಪನ್ನಗಳನ್ನು ರಾಷ್ಟ್ರದ ಎಲ್ಲಿ ಬೇಕಾದರೂ ಅಲ್ಲಿ ಮತ್ತು ಯಾರಿಗೆ ಬೇಕಾದರೂ ಅವರಿಗೆ ಮಾರಬಹುದು ಎನ್ನುವ ಸ್ವಾತಂತ್ರ್ಯ ಸಿಗುತ್ತದೆ. ಇಲ್ಲಿಯ ತನಕ ಏನೆಂದರೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಪಿಎಂಸಿಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಕಮಿಟಿ ನಿಗದಿಗೊಳಿಸಿದ ದರಕ್ಕೆ ಮಾರುವ ವ್ಯವಸ್ಥೆ ಇತ್ತು. ಇದನ್ನು  ಹಿಂದಿಯಲ್ಲಿ ಮಂಡಿ ಎಂದೇ ಕರೆಯಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ಇವರು ಮಧ್ಯವರ್ತಿಗಳು ಇದ್ದ ಹಾಗೆ. ಆದರೆ ಮೋದಿ ಮಾಡಿರುವ ಕಾಯ್ದೆಯಿಂದ ರೈತ ನೇರವಾಗಿ ಯಾವುದೇ ಆಹಾರ ಉತ್ಪನ್ನ ಕಂಪೆನಿಗೆ ಮಾರಬಹುದು. ಇನ್ನು “ನನಗೆ ಐದು ಎಕರೆ ಜಾಗವಿದೆ. ಬಟಾಟೆ ಮತ್ತು ಟೊಮೇಟೊ ಬೆಳೆಯುತ್ತೇನೆ. ನಿಮಗೆ ಚಿಪ್ಸ್ ಮತ್ತು ಕ್ಯಾಚಪ್ ತರಹದ್ದು ಮಾಡಲು ಇದ್ದರೆ ಒಪ್ಪಂದ ಮಾಡಿಕೊಳ್ಳೋಣ. ನನಗೆ ಇಳುವರಿ ಹೆಚ್ಚು ಬರಲು ಕೆಲವು ಸಲಕರಣೆಗಳು ಬೇಕು, ನೀವು ಕೊಡಬೇಕು, ಇನ್ನು ಒಂದು ವೇಳೆ ದುರಾದೃಷ್ಟವಶಾತ್ ಹೆಚ್ಚುಕಡಿಮೆಯಾಗಿ ನಷ್ಟವಾದರೆ ಆಗ ನಿಮ್ಮ ಕಂಪೆನಿಯವರು ಇಷ್ಟು ನಷ್ಟ ಭರಿಸಬೇಕು” ಎಂದು ಕೂಡ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಇದು ಒಂದು ಸರಕಾರ ಮತ್ತು ರೈತನ ಆಯಾಮದಲ್ಲಿ ನೋಡಿದ್ರೆ ಬಹಳ ಉತ್ತಮ ಯೋಜನೆ. ಯಾಕೆಂದರೆ ಭಾರತದಂತಹ ವಿಶಾಲವಾದ ರಾಷ್ಟ್ರದಲ್ಲಿ ಸುಮಾರು 60% ಜನ ಕೃಷಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಕೆಲಸದಲ್ಲಿ ಇರುವಾಗ ಅವರ ಬೇಕು, ಬೇಡಾಗಳನ್ನು ಪೂರೈಸುವುದು ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಲು ಅವರಿಗೆ ದಾರಿ ತೋರಿಸುವುದು ಸುಲಭವಲ್ಲ. ಇಂತಹ ಕಾಯ್ದೆ ಮಾಡುವುದರಿಂದ ರೈತನನ್ನು ಅವನ ಇಚ್ಚೆಯಂತೆ ಬಿಟ್ಟಂತೆ ಆಗುತ್ತದೆ. ಬಂಡವಾಳ ಹೂಡಲು ರೈತನಿಗೆ ಇಂತಿಂತಹ ಕಂಪೆನಿಗಳ ದಾರಿ ತೋರಿಸಬಹುದು. ಕಂಪೆನಿಗಳಿಗೆ ಕೂಡ ನೀವು ಇಷ್ಟಿಷ್ಟು ಸಹಾಯ ಮಾಡಿ ನಿಮಗೆ ಇಂತಿಂತಹ ಸೌಲಭ್ಯ ಕೊಡುತ್ತೇವೆ ಎಂದು ಸರಕಾರ ಹೇಳಬಹುದು.
ಎಲ್ಲೋ ಒಂದು ಕಡೆಯಲ್ಲಿ ಇದು ಕೃಷಿಯನ್ನು ಕೂಡ ಖಾಸಗೀಕರಣದತ್ತ ದೂಡುತ್ತಿರುವ ಹುನ್ನಾರ ಎಂದು ಅನಿಸುತ್ತದೆ. ಆದರೆ ಕೇಂದ್ರ ಸರಕಾರಕ್ಕೆ ಬೇರೆ ದಾರಿ ಇಲ್ಲ. ಅಷ್ಟಕ್ಕೂ ಕೃಷಿ ಸರಕಾರಿ ಉದ್ಯೋಗ ಅಲ್ಲ.

ಇನ್ನು ಎಪಿಎಂಸಿಗಳು ಸರಕಾರದಿಂದ ಅಭಿವೃದ್ಧಿಗೆ ಏನೂ ಅನುದಾನ ಪಡೆದುಕೊಳ್ಳುವುದಿಲ್ಲ. ಎಪಿಎಂಸಿಗಳನ್ನು ಅಭಿವೃದ್ಧಿ ಮಾಡುವುದರಿಂದ ರೈತನಿಗೆ ನೇರವಾಗಿ ಏನೂ ಲಾಭವಿಲ್ಲ. ಯಾಕೆಂದರೆ ಅಲ್ಲಿನ ಅಧಿಕಾರಿಗಳು ಮತ್ತು ಟ್ರೇಡರ್ಸ್ ಗಳ ಒಳ ಒಪ್ಪಂದದಿಂದ ರೈತ ಗಳಿಸುವಂತದ್ದೂ ಏನೂ ಇಲ್ಲ. ಇನ್ನು ಈ ದಶಕದ ಅಂತ್ಯದ ಹಾಗೂ ಮುಂದಿನ ದಶಕದ ರೈತನಿಗೂ ಎಪ್ಪತ್ತರ ಕೊನೆಯ ಮತ್ತು ಎಂಭತ್ತರ ದಶಕದ ರೈತನಿಗೂ ಸಾಕಷ್ಟು ವ್ಯತ್ಯಾಸವಿದೆ. ಆಧುನಿಕ ತಂತ್ರಜ್ಞಾನ ಎಷ್ಟು ಬೆಳೆದಿದೆ ಎಂದರೆ ರೈತ ಕುಳಿತ ಕಡೆ ತನ್ನ ಬೆಳೆಗೆ ಮಾರುಕಟ್ಟೆ ಹುಡುಕಬಲ್ಲ. ನಾನು ಕೇಳಿದ್ದೇ ಬೆಲೆ ಎನ್ನಬಲ್ಲ. ಹಾಗಂತ ಇದು ನೋಡಿದಷ್ಟು ಸುಲಭವೂ ಅಲ್ಲ. 2021 ರ ಜನವರಿಯಲ್ಲಿ ಒಂದು ಕಂಪೆನಿ ಒಬ್ಬ ರೈತನಿಗೆ ಬೇಕಾದ ಹಾಗೆ ವ್ಯವಹಾರ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಅದೇ ಕಂಪೆನಿ 2025 ರ ಜನವರಿ ಬಂದ ಹಾಗೆ ತನ್ನದೇ ಒರಗೆಯ ಕಂಪೆನಿಗಳ ಒಂದು ಸಿಂಡಿಕೇಟ್ ತರಹದ್ದು ಮಾಡಿ ನಾವು ಕೊಟ್ಟಿದ್ದೆ ಬೆಲೆ, ಬೇಡವಾದರೆ ನಿನ್ನಿಂದ ಹೇಗೆ ಕಿತ್ತುಕೊಳ್ಳಬೇಕು ಎಂದು ಗೊತ್ತಿದೆ ಎಂದು ಕೂಡ ಹೇಳಬಹುದು. ಯಾಕೆಂದರೆ ಎಪಿಎಂಸಿಗಳಲ್ಲಿ ರೈತ ತನ್ನ ಪರಿಚಯಸ್ಥರ ನಡುವೆ ಬಂಧಿಯಾಗಿರುತ್ತಾನೆ. ಆದರೆ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಕುಳಿತ ಕಂಪೆನಿಯೊಂದರ ಸಿಇಒಗೂ, ಬಂಟ್ವಾಳದ ನರಿಮೊಗ್ರು ಗ್ರಾಮದ ರೈತನಿಗೂ ಸಂಬಂಧವೇ ಇರುವುದಿಲ್ಲ. ಹೇಗೆ ನ್ಯಾಯ ಕೇಳುವುದು. ಕೋರ್ಟಿಗೆ ಹೋಗಲು ನಮ್ಮ ರೈತನಿಗೆ ಸಾಧ್ಯವಿಲ್ಲ. ಕಂಪೆನಿಗಳಿಗೆ ಇದೆಲ್ಲ ನೀರು ಕುಡಿದಷ್ಟೇ ಸುಲಭ.
ಹಾಗಂತ ಈ ಕಾಯ್ದೆ ಬಿಜೆಪಿಯ ಕನಸಿನ ಕೂಸಲ್ಲ. ಇದನ್ನು ನಾವು ತರುತ್ತೇವೆ. ಒಂದು ಅವಕಾಶ ಕೊಡಿ ಎಂದು 2013 ರಲ್ಲಿ ಸುದ್ದಿಗೋಷ್ಟಿ ಮಾಡಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ದಿಲ್ಲಿ ಅಧ್ಯಕ್ಷ ಅಜಯ್ ಮಾಕೇನ್ ರೈತರಲ್ಲಿ ಮನವಿ ಮಾಡಿಕೊಂಡಿದ್ದರು. ಆಗ ಜನ ಕಾಂಗ್ರೆಸ್ಸನ್ನು ನಂಬಲಿಲ್ಲ. ಈಗ ಕಾಂಗ್ರೆಸ್ ಬಿಜೆಪಿಯನ್ನು ನಂಬುತ್ತಿಲ್ಲ. ರೈತರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟಿ ಹೋರಾಟ ಮಾಡುತ್ತಿದೆ. ಕನಿಷ್ಟ ಬೆಂಬಲ ಬೆಲೆ ಇನ್ನು ಇರಲ್ಲ ಎಂದು ವಿಪಕ್ಷಗಳು ಹೇಳುತ್ತಿವೆ. ಇದರಲ್ಲಿ ಎರಡು ಆಯಾಮಗಳಿವೆ. ರೈತ ಒಂದು ವೇಳೆ ಕಂಪೆನಿಯೊಂದರಲ್ಲಿ ಒಪ್ಪಂದ ಮಾಡಿಕೊಂಡರೆ ಅದಕ್ಕೆ ಕಂಪೆನಿಗಳೇ ಜವಾಬ್ದಾರರು. ಅದೇ ರೈತ ನನಗೆ ನನ್ನ ಹಳೆ ಮಂಡಿಯೇ ಒಕೆ ಎಂದರೆ ಸರಕಾರವೇ ಕನಿಷ್ಟ ಬೆಂಬಲ ನೀಡುತ್ತದೆ. ಒಟ್ಟಿನಲ್ಲಿ ಒಂದಂತೂ ನಿಜ. ರೈತನಿಗೆ ಅವಕಾಶದ ಬಾಗಿಲು ತೆರೆದಿದೆ. ಸುಖ ಅನುಭವಿಸುತ್ತಾನಾ, ನಷ್ಟ ಅನುಭವಿಸುತ್ತಾನಾ ಎನ್ನುವುದಕ್ಕೆ ಆತ 2024 ರಲ್ಲಿ ಉತ್ತರ ಕೊಡುತ್ತಾನೆ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search