• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಧರ್ಮೇಗೌಡರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರನ್ನು ಎಳೆದಾಡಿದವರು ಕ್ಷಮೆ ಕೇಳಬೇಕು!!

AvatarHanumantha Kamath Posted On December 29, 2020


  • Share On Facebook
  • Tweet It

ಸೂಕ್ಷ್ಮ ಮನಸ್ಸಿನ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಧರ್ಮೆಗೌಡರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಅದನ್ನು ಆತ್ಮಹತ್ಯೆ ಎಂದೇ ಹೇಳಬಹುದೆಂದು ಕಾಣುತ್ತದೆ. ರೈಲ್ವೆ ಟ್ರ್ಯಾಕಿಗೆ ರಾತ್ರಿ ತಲೆ ಕೊಟ್ಟು ಮಲಗಿದರು ಎಂದು ಕಾಣುತ್ತದೆ. ದೇಹ ಎರಡು ತುಂಡುಗಳಾಗಿ ಬಿದ್ದಿದೆ. ಗನ್ ಮೆನ್ ಬೆಳಿಗ್ಗೆ ನೋಡಿದಾಗ ತಲೆಯನ್ನು ಗುರುತಿಸಿ ಅದು ಧರ್ಮೇಗೌಡರದ್ದೇ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂಲತ: ಚಿಕ್ಕಮಗಳೂರು ಜಿಲ್ಲೆಯವರಾದ ಧರ್ಮೇಗೌಡರ ಸಹೋದರ ಕೂಡ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರ ಹೆಸರು ಎಸ್ ಎಲ್ ಭೋಜೆಗೌಡ. ಇಬ್ಬರೂ ಸ್ವಭಾವತ: ಸಾಧು ಜೀವಿಗಳು. ದೇವೆಗೌಡರಿಗೆ ಹುಟ್ಟಿದ್ದನಿಂದಲೂ ನಿಷ್ಟೆ ತೋರಿಸುತ್ತಿದ್ದಾರೆ ಎನ್ನುವಂತೆ ಬದುಕಿದವರು. ಗೌಡರ ಕುಟುಂಬ ಧರ್ಮೇಗೌಡರನ್ನು ವಿಧಾನಪರಿಷತ್ ಉಪಸಭಾಪತಿಯನ್ನಾಗಿ ಮಾಡಿ ಅವರ ನಿಷ್ಟೆಗೆ ಗೌರವ ನೀಡಿತ್ತು. ಅಷ್ಟಕ್ಕೂ ಧರ್ಮೇಗೌಡರ ಹೆಸರನ್ನು ಇತ್ತೀಚೆಗೆ ರಾಜ್ಯ ಕೇಳಿದ್ದು ಪ್ರಜಾಪ್ರಭುತ್ವಕ್ಕೆ ಗೌರವ ತರಬೇಕಾಗಿದ್ದ ಮೇಲ್ಮನೆಯೇ ಅತ್ಯಂತ ಅಸಹ್ಯಕರ ರೀತಿಯಲ್ಲಿ ವರ್ತಿಸಿದ ಪ್ರಕರಣದಲ್ಲಿ.

ವಿಧಾನಪರಿಷತ್ ನಲ್ಲಿ ಭಾರತೀಯ ಜನತಾ ಪಾರ್ಟಿಗೆ ಬಹುಮತ ಇಲ್ಲ. ಗೋಹತ್ಯಾ ನಿಷೇಧ ಅಲ್ಲಿ ಪಾಸು ಮಾಡಬೇಕಾದರೆ ಅದಕ್ಕೆ ಜೆಡಿಎಸ್ ಬೆಂಬಲ ಬೇಕು. ಅದೇ ರೀತಿಯಲ್ಲಿ ಜೆಡಿಎಸ್ ಗೆ ಸಭಾಪತಿ ಸ್ಥಾನದ ಮೇಲೆ ಕಣ್ಣು. ಕಳೆದ ವಿಧಾನಪರಿಷತ್ ಅಧಿವೇಶನದ ಅವಧಿಯಲ್ಲಿ ಸಭಾಪತಿಯಾಗಿ ಇದ್ದವರು ಕುಂದಾಪುರದ ಪ್ರತಾಪಚಂದ್ರ ಶೆಟ್ಟಿ. ಅವರು ಜೆಡಿಎಸ್ ಬೆಂಬಲದಿಂದ ಸಭಾಪತಿಯಾಗಿ ಇದ್ದವರು. ಇತ್ತೀಚೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಕೆಟ್ಟು ಕೆರ ಹಿಡಿದ ಕಾರಣ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಪ್ರತಾಪಚಂದ್ರ ಶೆಟ್ಟಿ ಅರ್ಥಾಥ್ ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ನಿರ್ಧಾರ ಬಿಜೆಪಿ-ಜೆಡಿಎಸ್ ನಿಂದ ಆಗಿತ್ತು. ಆದರೆ ನಂತರ ನಡೆದದ್ದೇ ಅಪ್ಪಟ ಹುಡುಗಾಟಿಕೆ ಕೃತ್ಯ. ಸಭಾಪತಿಯವರಾದ ಶೆಟ್ಟಿಯವರು ವಿಧಾನಪರಿಷತ್ ಒಳಗೆ ಕಾಲಿಡುವ ಕ್ಷಣಗಳ ಮೊದಲು ಧರ್ಮೇಗೌಡರು ಹೋಗಿ ಆ ಸ್ಥಾನದಲ್ಲಿ ಕೂತಿದ್ದರು. ಅವರೇ ಸ್ವ ಇಚ್ಚೆಯಿಂದ ಕುಳಿತುಕೊಂಡಿದ್ದರು ಎನ್ನುವುದಕ್ಕಿಂತ ಅವರಿಗೆ ಪಕ್ಷದ ಆದೇಶ ಇದ್ದಿರಬಹುದು. ಅದರ ನಂತರ ಕಾಂಗ್ರೆಸ್ ಸದಸ್ಯರು ಅವರನ್ನು ಅಲ್ಲಿಂದ ಎಳೆದು ಕೆಳಗೆ ಇಳಿಸುವ ದೃಶ್ಯ ಈಗಲೂ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು. ಬಹುಶ: ಕರ್ಮಾಟಕದ ಇತಿಹಾಸದಲ್ಲಿ ಚಿಂತಕರ ಚಾವಡಿಯಾಗಿದ್ದ ಮೇಲ್ಮನೆ ಒಂದು ಸ್ಥಾನಕ್ಕಾಗಿ ಪಡ್ಡೆ ಹುಡುಗರಂತೆ ಹೊಡೆದಾಡಿಕೊಂಡದ್ದನ್ನು ರಾಷ್ಟ್ರೀಯ ವಾಹಿನಿಗಳು ಪ್ರಸಾರ ಮಾಡಿದ್ದವು. ಬಹುಶ: ಈ ಎಲ್ಲಾ ಘಟನೆಗಳು ಧರ್ಮೇಗೌಡರಿಗೆ ತುಂಬಾ ನೋವು ತಂದಿರಬಹುದು. ಅವರಿಗೆನೆ ತಮ್ಮ ಬಗ್ಗೆ ಬೇಸರ ಬಂದಿರಬಹುದು. ಅದಕ್ಕೆ ಈ ಜೀವನದ ಕಟ್ಟಕಡೆಯ ನಿರ್ಧಾರ ತೆಗೆದುಕೊಂಡು ಬಿಟ್ರಾ ಎನ್ನುವುದು ಸದ್ಯದ ಪ್ರಶ್ನೆ.

ಸಾಮಾನ್ಯವಾಗಿ ರಾಜಕಾರಣಿಗಳು ಎಂದರೆ ಮೂರು ಬಿಟ್ಟವರು ಎನ್ನುವ ಭಾವನೆ ಇದೆ. ಹಾಗಂತ ಎಲ್ಲರೂ ಹಾಗೆ ಇರಬೇಕಾಗಿಲ್ಲ. ಈಗಿನ ಕಾಲದಲ್ಲಿ ಹತ್ತು ಶೇಕಡಾ ಜನಪ್ರತಿನಿಧಿಗಳು ಉತ್ತಮ ತತ್ವಾದರ್ಶಗಳನ್ನು ಪಾಲಿಸುತ್ತಾ, ಭ್ರಷ್ಟಾಚಾರದಿಂದ ಅಂತರ ಕಾಯ್ದುಕೊಳ್ಳುತ್ತಾ, ಅಸಹ್ಯಕರ ರಣತಂತ್ರದಿಂದ ದೂರ ಇರುತ್ತಾ ಸಾಧ್ಯವಾದಷ್ಟು ಸ್ವಚ್ಚ ರಾಜಕಾರಣ ಮಾಡುತ್ತಾ ಬರುತ್ತಿದ್ದಾರೆ. ಆದರೆ ಅವರ ಸಂಖ್ಯೆ ವಿರಳವಾಗಿರುವುದರಿಂದ ಜನರು ಎಲ್ಲಾ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುತ್ತಾರೆ. ಹಿಂದೆ ಈಗಿರಲಿಲ್ಲ. ಒಂದು ಕಾಲದಲ್ಲಿ ಯಾರನ್ನಾದರೂ ಚುನಾವಣೆಗೆ ನಿಲ್ಲಿಸಲು ಒತ್ತಾಯ ಮಾಡಬೇಕಾದ ಕಾಲವಿತ್ತು. ನಂತರದ ದಶಕಗಳಲ್ಲಿ ಕೆಲವರು ಸ್ವಯಂಪ್ರೇರಿತರಾಗಿ ಮುಂದೆ ಬರುವಂತಹ ಕಾಲ ಬಂತು. ಅದರ ನಂತರದ ದಶಕಗಳಲ್ಲಿ ಸ್ಪರ್ದೇ ಇದ್ದರೂ ಪರಸ್ಪರ ಒಪ್ಪಿಗೆಯಿಂದ ಚುನಾವಣೆಗೆ ಕೆಲವರು ನಿಂತರು. ಇತ್ತೀಚೆಗೆ ಇಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿ ಅಸಹ್ಯಕರ ಸ್ಪರ್ಧೆಗಳು ಶುರುವಾದವು. ಸಜ್ಜನರು ಚುನಾವಣೆಗೆ ನಿಲ್ಲದ ವಾತಾವರಣ ನಿರ್ಮಾಣವಾಯಿತು. ಒಂದು ಕಾಲದಲ್ಲಿ ಲೇಖಕರು, ಸಾಹಿತ್ಯ ಲೋಕದ ರತ್ನಗಳು, ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ಜ್ಞಾನಿಗಳು, ಕಲಾವಿದರು ಆಯ್ಕೆಯಾಗುತ್ತಿದ್ದ ಮೇಲ್ಮನೆ ಈಗ ಬಂಡವಾಳಶಾಯಿಗಳ, ಬಕೆಟ್ ತಜ್ಞರ, ವಿಧಾನಸಭೆಗೆ ನಿಲ್ಲಲು ಅಸಾಧ್ಯ ಸ್ಪರ್ದೆ ಇದ್ದ ಕಾರಣ ಅಲ್ಲಿ ನಿರ್ವಸಿತರಾಗಿರುವ, ಹೈಕಮಾಂಡ್ ಗಳ ಆಪ್ತರ ತಾಣಗಳಾಗಿ ಮಾರ್ಪಟ್ಟಿದೆ. ಅಲ್ಲಿಗೆ ವಿಧಾನಪರಿಷತ್ ಗೆ ನಿಜವಾದ ಮರ್ಯಾದೆ ಹೋಗಿದೆ. ಈ ಹಂತದಲ್ಲಿ ಧರ್ಮೇಗೌಡರಂತವರನ್ನು ಈ ರಾಜಕೀಯ ವಲಯ ಹೇಗೆ ನಡೆಸಿತು ಎನ್ನುವುದನ್ನು ಎಲ್ಲರೂ ನೋಡಿದ್ದೇವೆ. ಅವರಿಗೆ ಬಹುಶ: ತಮ್ಮ ರಾಜಕೀಯ ಜೀವನದಲ್ಲಿ ಈ ಪರಿಯ ತಿರುವು ಬರಬಹುದು ಎಂದು ಅನಿಸಿರಲಿಕ್ಕಿಲ್ಲ. ಈಗ ಅವರ ಸಾವಿಗೆ ಏನು ಕಾರಣ ಎನ್ನುವುದನ್ನು ಪತ್ತೆ ಹಚ್ಚಬೇಕು. ಒಂದು ವೇಳೆ ಅವರು ಕುರ್ಚಿಯಿಂದ ಎಳೆದ ಪ್ರಕರಣದಿಂದ ಈ ಪರಿ ನೋವು ಅನುಭವಿಸಿದ್ದರೆ ಅದಕ್ಕೆ ಕಾರಣರಾದ ಪರಿಷತ್ ಸದಸ್ಯರು ಬೇಷರತ್ತಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಅದಕ್ಕೆ ಕಾರಣರಾದ ಪಕ್ಷಗಳು ಕೂಡ ಜನರ ಮುಂದೆ ಕ್ಷಮೆ ಕೇಳಬೇಕು. ಇನ್ನು ಹೀಗೆ ಪರಿಷತ್ ನಲ್ಲಿ ಅಥವಾ ವಿಧಾನಸಭೆಯಲ್ಲಿ ಲಜ್ಜೆಗೇಡಿ ವರ್ತನೆ ಮಾಡುವುದಿಲ್ಲವೆಂದು ಎಲ್ಲಾ ಸದಸ್ಯರು ಪ್ರತಿಜ್ಞೆ ಸ್ವೀಕರಿಸಬೇಕು. ಆಗ ಮಾತ್ರ ಧರ್ಮೇಗೌಡರ ಆತ್ಮಕ್ಕೆ ಶಾಂತಿ ಸಿಗುತ್ತದೆ!!

ಲಿಂಗಾಯಿತ, ಒಕ್ಕಲಿಗ ಸಭಾಪತಿಯಾಗಿದ್ದರೆ ಹೀಗೆನೆ ಇಳಿಸುತ್ತಿದ್ರಾ?

  • Share On Facebook
  • Tweet It


- Advertisement -


Trending Now
ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
Hanumantha Kamath January 22, 2021
ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
Hanumantha Kamath January 21, 2021
Leave A Reply

  • Recent Posts

    • ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!
    • ಪಾಲಿಕೆ ಮತ್ತು ಗುಜರಿಯವರ ನಡುವಿನ "ಪ್ರೇಮ" ಸಂಬಂಧದಿಂದ ಪಾಲಿಕೆಯಲ್ಲಿ ಧ್ವನಿ ಎತ್ತುವವರಿಲ್ಲ...
    • ಟ್ರಾಫಿಕ್ ಸಮಸ್ಯೆ ಪರಿಹಾರವಾದರೆ ಲಾಭ ನನಗೆ ಅಲ್ಲ, ನಿಮಗೆ ಮತ ನೀಡಿದ ಜನರಿಗೆ...
    • ಮಂಗಳೂರು ಗೋಲಿಬಾರ್ ರಿವೇಂಜ್, ಪೊಲೀಸ್ ಗಣೇಶ್ ಕಾಮತ್ ಕೊಲೆ ಯತ್ನ ಆರು ಆರೋಪಿಗಳು ಅರೆಸ್ಟ್!
    • ಸಹಾಯ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಎದುರು ಬೆತ್ತಲೆ ನಿಂತ ಉಳ್ಳಾಲ ಎಸ್ಡಿಪಿಐ ಮುಖಂಡ ಅರೆಸ್ಟ್!
    • ಮೋದಿಜಿ, ಏಳಿ, ಎದ್ದೇಳಿ, ಒಟಿಟಿ ಮುಗಿಸದೇ ನಿಲ್ಲದಿರಿ!!
  • Popular Posts

    • 1
      ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • 2
      ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • 3
      ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • 4
      ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 5
      30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search