• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮೀಸಲಾತಿ ಪಂಚೆಯೊಳಗಿನ ಕೆಂಡದಂತೆ, ಬಿಟ್ಟರೆ ನಷ್ಟ, ಇಟ್ಟರೆ ಕಷ್ಟ!!

Hanumantha Kamath Posted On April 1, 2021
0


0
Shares
  • Share On Facebook
  • Tweet It

ಮುಂದಿನ ಚುನಾವಣೆಯ ಹೊತ್ತಿನಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪನವರು ತಮ್ಮ ಕುರ್ಚಿ ಉಳಿಸುವುದಕ್ಕಾಗಿ ಕೊಟ್ಟಿರುವ ಭರವಸೆಯನ್ನು ಈಡೇರಿಸದೇ ಹೋದರೆ ಅವರು ಯಾರಿಗೆಲ್ಲ ಮೀಸಲಾತಿಯ ಭರವಸೆ ಕೊಟ್ಟಿದ್ದಾರೋ ಅವರು ಬಿಜೆಪಿಗೆ ಕೈ ನೀಡಲಿದ್ದಾರೆ. ಅಂತಹ ಒಂದು ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಂತ ಒಂದು ಜಾತಿಗೆ ಮೀಸಲಾತಿ ಕೊಟ್ಟ ತಕ್ಷಣ ಏನೂ ಸಮಸ್ಯೆ ಆಗದೇ ಅದು ನೇರವಾಗಿ ಬಿಜೆಪಿಗೆ ಅನುಕೂಲವಾಗುತ್ತಾ ಎಂದು ನೋಡಿದರೆ ನೋ ಚಾನ್ಸ್, ಒಂದು ಸಮುದಾಯ ಖುಷಿಯಾಗಬಹುದು. ಆದರೆ ಅನೇಕ ಚಿಕ್ಕಪುಟ್ಟ ಸಮಾಜಗಳು ಕೋಪಗೊಳ್ಳುತ್ತವೆ. ಯಾಕೆಂದರೆ ಒಂದು ಸಮುದಾಯಕ್ಕೆ ನೀಡಿರುವ ಶೇಕಡಾವಾರು ಮೀಸಲಾತಿಯಲ್ಲಿ ಶೇಕಡಾ ಪ್ರಮಾಣ ಜಾಸ್ತಿ ಮಾಡಿದರೆ ಅದು ಆಟೋಮೇಟಿಕ್ ಆಗಿ ಬೇರೆ ಸಮುದಾಯದ ಹಕ್ಕನ್ನು ಕಡಿಮೆ ಮಾಡಿದಂತೆ ಆಗುತ್ತದೆ.

50% ಗಿಂತ ಜಾಸ್ತಿ ಮೀಸಲಾತಿ ನೀಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಇದ್ದದ್ದರಲ್ಲಿ ಸೌಲಭ್ಯಗಳನ್ನು ಎಲ್ಲರೂ ಹಂಚಿ ತಿನ್ನಬೇಕಾಗುತ್ತದೆ. ಈ ಮೀಸಲಾತಿಯ ಪರಿಧಿಯೊಳಗೆ ಇದ್ದ ಜಾತಿಗಳೇ ಈಗ ಒಂದು ರೊಟ್ಟಿ ಸಿಕ್ಕಿದರೆ ಅದೆಷ್ಟೋ ತುಂಡು ಮಾಡಿ ತಿನ್ನಬೇಕಾಗುತ್ತಿದೆ. ಅದೇ ಇನ್ನಷ್ಟು ಜಾತಿಗಳು ಸೇರಿದರೆ ತುಂಡು ಜಾಸ್ತಿಯಾಗುತ್ತದೆ ವಿನ: ಯಾರಿಗೂ ಹೊಟ್ಟೆ ತುಂಬುವುದಿಲ್ಲ. ಆದ್ದರಿಂದ ಬೇರೆ ಬೇರೆ ಜಾತಿಗಳು ಮೀಸಲಾತಿ ಜಾಸ್ತಿ ಮಾಡಿ ಅಥವಾ ನಮಗೆ ಮೀಸಲಾತಿ ಕೊಡಿ ಎಂದು ಒತ್ತಡ ಹಾಕಿದಾಗ ಸಹಜವಾಗಿ ಮೀಸಲಾತಿಯ ಒಳಗಿರುವವರು ಗುರ್ ಎನ್ನುತ್ತಾರೆ ವಿನ: ಅವರಿಗೂ ಕೊಡಿ, ಇವರಿಗೂ ಕೊಡಿ, ಮತ್ತೊಬ್ಬರಿಗೂ ಕೊಡಿ ಎಂದು ಹೇಳುವುದಿಲ್ಲ. ನೀವು ಸರಿಯಾಗಿ ಗಮನಿಸಿ, ಈ ಮೀಸಲಾತಿಯ ಹೋರಾಟ ನಡೆದಾಗ ಸಿದ್ಧರಾಮಯ್ಯ ಎಷ್ಟು ಆಗುತ್ತೋ ಅಷ್ಟು ಸೈಲೆಂಟಾಗಿ ದೂರ ಉಳಿಯುವ ಪ್ರಯತ್ನ ಮಾಡಿದ್ದರು. ಇದರಲ್ಲಿ ರಾಜಕೀಯ ಮಾಡಲು ಹೋಗಿ ಬಿಜೆಪಿ ಸರಕಾರದ ಮೇಲೆ ಒತ್ತಡ ತಂದರೆ ಆಗ ತಮ್ಮ ವೋಟ್ ಬ್ಯಾಂಕಿಲ್ಲಿರುವ ಇತರ ಜಾತಿಯವರು ಕೈಬಿಟ್ಟಾರು ಎನ್ನುವ ಹೆದರಿಕೆ ಅವರಲ್ಲಿತ್ತು. ಯಾಕೆಂದರೆ ಮೀಸಲಾತಿ ಎನ್ನುವುದು ಪ್ರತಿ ರಾಜಕೀಯ ಪಕ್ಷದ ನಾಯಕರಿಗೂ ತಮ್ಮ ಪಂಚೆಯೊಳಗಿನ ಕೆಂಡದಂತೆ. ಪಂಚೆ ಸುಡುತ್ತೆ ಎಂದು ಗೊತ್ತಿದ್ದರೂ ಅದನ್ನು ಬಿಟ್ಟು ಇರಲು ಆಗಲ್ಲ. ಯಾಕೆಂದರೆ ಜಾತಿಗಳು ಇಲ್ಲದೆ ನಮ್ಮ ರಾಜಕೀಯದಲ್ಲಿ ಏನೂ ನಡೆಯುವುದೇ ಇಲ್ಲ. ಆವತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಸಮಾಜಕ್ಕೆ ಮೀಸಲಾತಿ ನೀಡಿದ್ದು ಏಕೆಂದರೆ ಆಗ ಪರಿಸ್ಥಿತಿ ಹಾಗೆ ಇತ್ತು. ಸವರ್ಣೀಯರ ಎದುರು ನಿಂತು ಸಮಬಲ ಸಾಧಿಸಬೇಕಾದರೆ ಮೀಸಲಾತಿ ಅಗತ್ಯ ಇತ್ತು. ಆವತ್ತು ಕೊಟ್ಟ ಮೀಸಲಾತಿಯನ್ನು ಅವರು ಭಾರತ ದೇಶದ ಸಂವಿಧಾನ ಇರುವ ತನಕ ಯಾರೂ ನಿಷೇಧ ಮಾಡಬಾರದು ಎಂದು ಹೇಳಿಯೇ ಇಲ್ಲ. ಈಗ ಒಂದು ವೇಳೆ ಸ್ವತ: ಡಾ.ಅಂಬೇಡ್ಕರ್ ಇದ್ದರೂ ಅವರು ಮೀಸಲಾತಿಯನ್ನು ವಿರೋಧಿಸುತ್ತಿದ್ದರು. ಆದರೆ ಅಂಬೇಡ್ಕರ್ ಅವರ ವಿರುದ್ಧ ತಮ್ಮ ಅಭ್ಯರ್ಥಿ ನಿಲ್ಲಿಸಿ ಸಂವಿಧಾನದ ಜನಕನನ್ನು ಸೋಲಿಸಿದ ಕಾಂಗ್ರೆಸ್ಸಿಗೆ ಮೀಸಲಾತಿ ಮುಗಿಯುವುದು ಬೇಕಿಲ್ಲ. ಅವರು ಇನ್ನಷ್ಟು ಜಾತಿಗಳಿಗೆ ಮೀಸಲಾತಿಯನ್ನು ಒದಗಿಸಿ ಆ ಸಮುದಾಯದ ಕೃಪೆಗೆ ಪಾತ್ರರಾಗುತ್ತಾ ಹೋದರು. ಆದರೆ ನಂತರ ಬಂದದ್ದು ಭಾರತೀಯ ಜನತಾ ಪಾರ್ಟಿ. ಹಾಗಂತ ಬಿಜೆಪಿ ಏನು ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳುವ ಸ್ಥಿತಿಯಲ್ಲಿ ಇರಲೇ ಇಲ್ಲ. ಹೇಳಲು ಹೋದರೆ ಅದು ಬಿಜೆಪಿಯ ವಿರೋಧ ಜ್ವಾಲಾಮುಖಿಯಾಗಿ ಪರಿವರ್ತನೆಯಾಗುವ ಸ್ಥಿತಿಯಲ್ಲಿತ್ತು. ಆದ್ದರಿಂದ ಅದು ಮುಂದುವರೆಯುತ್ತಾ ಹೋಯಿತು. ಆದ್ದರಿಂದ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮೀಸಲಾತಿಯ ಪರಿಮಾಣ ಹೆಚ್ಚುತ್ತಾ ಹೋಗುತ್ತೆ ವಿನ: ಕಡಿಮೆಯಾಗುವ ಲಕ್ಷಣಗಳು ಕಾಣಿಸಲೇ ಇಲ್ಲ. ಪರಿಸ್ಥಿತಿ ಹೀಗಿರುವಾಗಲೇ ಸುಪ್ರೀಂಕೋರ್ಟ್ ಈ ಪ್ರಶ್ನೆಯನ್ನು ಕೇಳಿದೆ. ಮೀಸಲಾತಿಯ ವಿಷಯದಲ್ಲಿ ನಿಮ್ಮ ನಿಮ್ಮ ರಾಜ್ಯಗಳ ಅಭಿಪ್ರಾಯ ತಿಳಿಸಿ.

ನನ್ನ ಪ್ರಕಾರ ಮೀಸಲಾತಿ ಇರಲೇಬೇಕು. ಆದರೆ ಅದು ಜಾತಿ ಆಧಾರಿತವಾಗಿ ಇರಬಾರದು. ಆರ್ಥಿಕ ಶಕ್ತಿ ಆಧರಿಸಿ ಇರಬೇಕು. ಪ್ರತಿ ಸಮುದಾಯದಲ್ಲಿ ಬಡವರು, ಕೆಳಮಧ್ಯಮ ವರ್ಗದವರು ಇದ್ದೇ ಇರುತ್ತಾರೆ. ಅದು ಒಕ್ಕಲಿಗ, ಲಿಂಗಾಯಿತ ಅಥವಾ ಬ್ರಾಹ್ಮಣನೇ ಇರಬಹುದು. ಅದು ಪರಿಶಿಷ್ಟ ಜಾತಿ, ಪಂಗಡ, ಕುರುಬ ಅಥವಾ ಹಿಂದುಳಿದ ಜಾತಿಗಳೇ ಇರಬಹುದು. ಬಡತನ ಇಲ್ಲದ ಜಾತಿಯೇ ಇಲ್ಲ. ಆದ್ದರಿಂದ ಇನ್ನು ಮುಂದೆ ನೈಜವಾಗಿ ಬಡವರು ಯಾರು ಇದ್ದಾರೆ ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಇರಬೇಕು. ಕಾರಿನಲ್ಲಿ ಬಂದು ಬಿಪಿಎಲ್ ಕಾರ್ಡ್ ತೋರಿಸುವ “ಬಡ” ಮನಸ್ಸಿನವರಿಗೆ ಅಲ್ಲ. ಈಗ ಏನಾಗುತ್ತಿದೆ ಎಂದರೆ ಮೀಸಲಾತಿ ಇಲ್ಲದ ಬಡ ಕುಟುಂಬದಿಂದ ಹೆಣ್ಣುಮಗಳಿಗೆ 95 ಶೇಕಡಾ ಅಂಕ ಬಂದರೂ ಮೀಸಲಾತಿ ಇರುವ ಅನುಕೂಲಸ್ಥ ಮನೆತನದ ಹುಡುಗಿಗೆ 59 ಶೇಕಡಾ ಇದ್ದರೂ ನೈಜವಾಗಿ ಯಾರಿಗೆ ಏನು ಸಿಗಬೇಕೋ ಅದು ಸಿಗುತ್ತಿಲ್ಲ. ಇದರಿಂದ ಅಂಬೇಡ್ಕರ್ ಅವರ ಮೀಸಲಾತಿಯ ಉದ್ದೇಶವೇ ಹಾಳಾಗಿ ಹೋಗುತ್ತಿದೆ. ಮೇಲ್ವರ್ಗದವರು ಮೀಸಲಾತಿ ತೆಗೆಸಲು ಹವಣಿಸುತ್ತಿದ್ದಾರೆ ಎಂದು ಕೆಲವರ ಆಕ್ಷೇಪ ಇರಬಹುದು. ಆದರೆ ಇನ್ನು ಮುಂದೆ ಮೇಲು, ಕೀಳು ಎನ್ನುವುದಕ್ಕಿಂತ ನೈಜ ಬಡತನ ಮತ್ತು ಆರ್ಥಿಕ ಸಂಕಟತನ ಪರಿಗಣನೆಗೆ ಬರಲಿ ಎಂದು ಆಶಯ!

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Hanumantha Kamath May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search