• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಫೋನ್ – ಇನ್ ಆರಂಭ ಒಳ್ಳೆಯ ಕೆಲಸ!

Hanumantha Kamath Posted On August 8, 2023
0


0
Shares
  • Share On Facebook
  • Tweet It

ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಕೈ ತೊಳೆದು ಡ್ರಗ್ಸ್ ಮಾಫಿಯಾದ ಹಿಂದೆ ಬಿದ್ದಿದ್ದಾರೆ. ಇದು ಬಹಳ ಉತ್ತಮ ಬೆಳವಣಿಗೆ. ಈ ಹಿಂದೆ ಗಾಂಜಾ ಎಳೆಯುವವರನ್ನು ಹಿಡಿಯುವಾಗಲೇ ಅವರ ಮೂಲಕ್ಕೆ ಹೋಗಿದ್ದರೆ ಆವತ್ತೆ ಇದರ ಜಾಡು ಸಿಗುತ್ತಿತ್ತು. ಆದರೆ ಹಿಂದಿನ ಅಧಿಕಾರಿಗಳು ಅಂತಹ ಕೆಲಸಕ್ಕೆ ಕೈ ಹಾಕಿರಲಿಲ್ಲ. ಪೊಲೀಸರು ಸಣ್ಣಪುಟ್ಟ ಕುಳಗಳನ್ನು ಹಿಡಿಯುತ್ತಿದ್ದರು. ನಂತರ ಅಂತವರು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದರು. ಅದರ ನಂತರ ಅವರ ವಿಷಯ ಏನು ಎಂದು ಬೇರೆಯವರಿಗೆ ಬಿಡಿ, ಪೊಲೀಸರಿಗೂ ಗೊತ್ತಾಗುತ್ತಿರಲಿಲ್ಲ. ಅದರಿಂದ ಈ ಡ್ರಗ್ ಮಾಫಿಯಾದ ಚೈನ್ ಹಾಗೆ ಮುಂದುವರೆಯುತ್ತಿತ್ತು. ಆದರೆ ಈಗಿನ ಕಮೀಷನರ್ ಹಾಗಲ್ಲ. ಡ್ರಗ್ ಮಾಫಿಯಾದ ಬುಡವನ್ನು ಅಲುಗಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಡ್ರಗ್ಸ್ ನಮ್ಮ ಮಂಗಳೂರಿನಲ್ಲಿ ಕಡಿಮೆ ಆಗಬಹುದು ಎನ್ನುವ ಭರವಸೆ ಜನಸಾಮಾನ್ಯರಿಗೆ ಸಿಕ್ಕಿದೆ. ಪೊಲೀಸರು ಬಂಧಿಸಿದ ಪಟ್ಟಿಯಲ್ಲಿ ಡಾಕ್ಟರ್ ಸಹಿತ ಉನ್ನತ ವಲಯದ ಕೆಲವು ಪ್ರೊಫೆಶನಲ್ ಗಳು ಕೂಡ ಇರುವುದರಿಂದ ಈಗಿನ ಕಮೀಷನರ್ ಯಾವುದಕ್ಕೂ ಕೇರ್ ಮಾಡಲಿಕ್ಕಿಲ್ಲ ಎನ್ನುವ ಭರವಸೆ ನಾಗರಿಕರಲ್ಲಿ ಮೂಡಿದೆ. ದೊಡ್ಡ ಲೆವೆಲ್ಲಿನಲ್ಲಿ ಮಾದಕ ಪದಾರ್ಥಗಳು ದೊರೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಂಗಳೂರಿಗೆ ಇದನ್ನು ಬೇರೆ ಬೇರೆ ಮೂಲಗಳಿಂದ ಪೂರೈಸುವವರಿಗೂ ಹೆದರಿಕೆ ಉಂಟಾಗಬಹುದು. ಪೊಲೀಸ್ ಕಮೀಶನರ್ ಅವರೇ ಇದರ ನೇತೃತ್ವವನ್ನು ವಹಿಸಿರುವುದರಿಂದ ಇಷ್ಟೆಲ್ಲ ಯಶಸ್ಸು ಸಾಧ್ಯವಾಗಿದೆ.

ಫೋನ್ – ಇನ್ ಆರಂಭ ಒಳ್ಳೆಯ ಕೆಲಸ!

ಇನ್ನು ಪೊಲೀಸ್ ಕಮೀಷನರ್ ಅವರು ಫೋನ್ ಇನ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದ್ದಾರೆ. ಫೋನ್ ಇನ್ ನಲ್ಲಿ ನಾಗರಿಕರು ನೀಡುವ ಸಲಹೆ, ದೂರುಗಳನ್ನು ಗಂಭೀರವಾಗಿ ತೆಗೆದುಕೊಂಡು ಅದನ್ನು ಪರಿಹರಿಸುವ ಯೋಜನೆಯನ್ನು ಕೂಡ ಹಮ್ಮಿಕೊಂಡಿದ್ದಾರೆ. ಇದು ಕೂಡ ಶ್ಲಾಘನೀಯ ಕಾರ್ಯ. ಮಂಗಳೂರಿನ ಕೆಲವು ಕಡೆ ಏಕಾಂಗಿಯಾಗಿ ವಾಸಿಸುವ ವೃದ್ಧರು ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಅಂತಹ ಮನೆಗಳಿಗೆ ತೆರಳಿ ಹಿರಿಯ ಜೀವಗಳಿಗೆ ಕೌನ್ಸಿಲಿಂಗ್ ಕೂಡ ಮಾಡುವ ಯೋಜನೆಯನ್ನು ಪೊಲೀಸ್ ಇಲಾಖೆ ತೆಗೆದುಕೊಂಡಿರುವುದು ಮಾದರಿ ಕಾರ್ಯ. ಇದರಿಂದ ವೃದ್ಧರಿಗೆ ತಮ್ಮ ಜೊತೆ ಪೊಲೀಸ್ ಇಲಾಖೆ ಇದೆ ಎಂಬ ಧೈರ್ಯ ಬಂದರೆ
ಅವರಲ್ಲಿಯೂ ಮಾನಸಿಕ ಸ್ಥೈರ್ಯ ಹೆಚ್ಚಾಗಲಿದೆ.
ಇನ್ನು ಫುಟ್ ಪಾತ್ ಗಳ ಮೇಲೆ ವಾಹನಗಳನ್ನು ಪಾರ್ಕ್ ಮಾಡಿದ್ದರ ವಿರುದ್ಧ ಕ್ರಮ ತೆಗೆದುಕೊಂಡಿರುವುದರಿಂದ ಪಾದಚಾರಿಗಳು ಕೂಡ ಖುಷಿಪಟ್ಟಿದ್ದಾರೆ. ಇದರೊಂದಿಗೆ ಪೊಲೀಸ್ ಅಧಿಕಾರಿಗಳಿಗೆ ಇನ್ನೊಂದು ಅಧಿಕಾರ ಕೂಡ ಇದೆ. ಅದೇನೆಂದರೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವವರನ್ನು ಅಲ್ಲಿಂದ ತೆರವು ಮಾಡುವ ಅಧಿಕಾರವೂ ಪೊಲೀಸರಿಗೆ ಇದೆ. ಫುಟ್ ಪಾತ್ ಮೇಲೆ ವಾಹನ ಪಾರ್ಕ್ ಮಾಡುವುದು ಎಷ್ಟು ತಪ್ಪೋ ಅಷ್ಟೇ ಗೂಡಂಗಡಿಗಳು, ತಳ್ಳುಗಾಡಿಗಳನ್ನು ನಿಲ್ಲಿಸಿ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಪಡಿಸುವುದು ಕೂಡ ಅಷ್ಟೇ ತಪ್ಪು. ಅಂತವರನ್ನು ಅಲ್ಲಿಂದ ತೆರವು ಮಾಡಲು ಕೂಡ ಪೊಲೀಸಿನವರು ಮನಸ್ಸು ಮಾಡಬೇಕು. ಒಂದು ವೇಳೆ ಪಾಲಿಕೆಗೆ ಇಚ್ಚಾಶಕ್ತಿ ಇದ್ದರೆ ಅವರು ಬೇಕಾದರೆ ಪೊಲೀಸರ ಸಹಾಯ ತೆಗೆದುಕೊಂಡು ತೆರವು ಕಾರ್ಯ ಮಾಡಬಹುದು. ಆದರೆ ಬಹುತೇಕ ಸಂದರ್ಭದಲ್ಲಿ ಈ ರೇಡ್ ಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಿ ಕೆಲವು ದಿನಗಳ ಒಳಗೆ ಮತ್ತೆ ಯಥಾಪ್ರಕಾರದ ಕಥೆ ಮುಂದುವರೆಯುತ್ತದೆ. ಹಾಗೆ ಆಗದ ರೀತಿಯಲ್ಲಿ ಪೊಲೀಸರು ಮಾಡಲು ಸಾಧ್ಯವಿದೆ.

ತಿಲಕಚಂದ್ರ ಅವರ ಪಟ್ಟಿ ಅನುಷ್ಟಾನಕ್ಕೆ ಬರಲಿ!

ಇನ್ನು ನಗರದ ಫುಟ್ ಪಾತ್ ಗಳು ಅಗಲಗೊಳ್ಳುತ್ತಿರುವಂತೆ ಅದರ ಮೇಲೆ ವಾಹನಗಳನ್ನು ಪಾರ್ಕ್ ಮಾಡುವ ಸಂಪ್ರದಾಯ ಶುರುವಾಗಿದೆ. ವಾಹನ ನಿಲ್ಲಿಸಿ ಪಕ್ಕದಲ್ಲಿರುವ ಕಟ್ಟಡದೊಳಗೆ ಹೋಗಿ ಮರೆಯಾಗುವ ಎಷ್ಟೋ ಮಂದಿ ಮತ್ತೆ ಯಾವತ್ತೋ ಹೊರಗೆ ಬಂದು ತಮ್ಮ ವಾಹನವನ್ನು ಫುಟ್ ಪಾತ್ ನಿಂದ ಕೆಳಗೆ ಇಳಿಸುತ್ತಾರೆ. ಫುಟ್ ಪಾತ್ ಅಗಲ ಮಾಡಿದ್ದೇ ತಮ್ಮ ವಾಹನಗಳನ್ನು ನಿಲ್ಲಿಸಲು ಎಂದು ಕೆಲವರು ಅಂದುಕೊಂಡಿದ್ದಾರೆ. ಮಂಗಳೂರು ನಗರದ ರಸ್ತೆಗಳನ್ನು ಎಷ್ಟು ಅಗಲ ಮಾಡಿದರೂ ಏನು ಪ್ರಯೋಜನವಾಗುವುದಿಲ್ಲ ಎನ್ನುವ ಭಾವನೆ ಪಾದಚಾರಿಗಳಿಗೆ ಬಂದಿದೆ. ಇತ್ತೀಚೆಗೆ ಪೊಲೀಸರು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ವಾಹನಗಳ ಚಕ್ರಗಳಿಗೆ ಲಾಕ್ ಮಾಡುವುದನ್ನು ನಿಲ್ಲಿಸಿದ್ದಾರೆ. ಅದನ್ನು ಮತ್ತೆ ಆರಂಭಿಸಬೇಕು. ಹಿಂದೆ ತಿಲಕಚಂದ್ರ ಅವರು ಎಸಿಪಿಯಾಗಿದ್ದಾಗ ಯಾವ ಬಿಲ್ಡಿಂಗ್ ಗಳ ಪಾರ್ಕಿಂಗ್ ಜಾಗಗಳಲ್ಲಿ ಅಕ್ರಮ ನಿರ್ಮಾಣವಾಗಿದೆಯೋ ಅವುಗಳ ಪಟ್ಟಿ ತಯಾರಿಸಿದ್ದರು. ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಿ ಆ ಪಟ್ಟಿಯನ್ನು ಹಿಡಿದು ಹೊರಡಬೇಕು. ಅಕ್ರಮ ನಿರ್ಮಾಣ ತೆರವುಗೊಳಿಸುವ ಕಾರ್ಯವನ್ನು ಮಾಡಬಹುದಾಗಿದೆ. ಈ ಬಗ್ಗೆನೂ ಹೊಸ ಪೊಲೀಸ್ ಕಮೀಷನರ್ ಅವರು ಗಮನ ಹರಿಸಬೇಕು. ಹಾಗೆ ಮಾಡಿದ್ರೆ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಅವರ ಮೇಲಿನ ವಿಶ್ವಾಸ ಡಬಲ್ ಆಗುತ್ತದೆ.

0
Shares
  • Share On Facebook
  • Tweet It




Trending Now
ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
Hanumantha Kamath August 21, 2025
ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
Hanumantha Kamath August 21, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
  • Popular Posts

    • 1
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 2
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • 3
      ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • 4
      ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • 5
      ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!

  • Privacy Policy
  • Contact
© Tulunadu Infomedia.

Press enter/return to begin your search