ಅಮೀನ್ ಮಟ್ಟು ಇಷ್ಟೆಲ್ಲ ಮಾಡುತ್ತಿರುವುದು ಕಾಂಗ್ರೆಸ್ ಟಿಕೆಟ್‌ಗಾಗಿಯೇ?
“ಮೊನ್ನೆ ಗೌರಿ ಲಂಕೇಶ್‌ಗೆ ಬಿದ್ದ ಗುಂಡು ನನಗೂ ಬೀಳಬಹುದು. ಸಾವಿನ ಬಗ್ಗೆ ಭಯವಿಲ್ಲ. ಆದರೆ ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ಅತೃಪ್ತ ಆತ್ಮಗಳಾಗಿ ಸಾಯಬಾರದು!’ ಹೀಗೆ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಅಲವತ್ತುಕೊಂಡಿದ್ದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು.
ಗೌರಿ ಲಂಕೇಶ್ ಕೊಲೆಯ ನಂತರ ಸರ್ಕಾರ ೧೪ ಬುದ್ಧಿ(ಗೇಡಿ)ಜೀವಿಗಳಿಗೆ ಪೊಲೀಸ್ ಭದ್ರತೆ ನೀಡಿದೆ. ಅದರಲ್ಲಿ ದಿನೇಶ್ ಅಮೀನ್‌ಮಟ್ಟು ಕೂಡ ಒಬ್ಬರು. ಅದಕ್ಕೂ ಮೊದಲು ಅವರು ನನಗೂ ಜೀವಬೆದರಿಕೆ ಇದೆ ಎಂದು ಹೇಳಿದ ಉದಾಹರಣೆಗಳಿಲ್ಲ. ಸರ್ಕಾರ ಪೊಲೀಸ್ ಭದ್ರತೆ ನೀಡಿದ ನಂತರ ಅವರು ಈಗ “ನನಗೂ ಗುಂಡು ಬೀಳಬಹುದು’ ಎನ್ನುತ್ತಿದ್ದಾರೆ. ಬರೀ ಅಷ್ಟೇ ಹೇಳಿದರೆ ಅವರಿಗೆ ಏನೂ ಉಪಯೋಗವಾಗದು. ಅದಕ್ಕೆ ಆರೆಸ್ಸೆಸ್ ಥಳಕು ಹಾಕಬೇಕು. ಅದಕ್ಕೆ ಅವರು “ಇತ್ತೀಚಿಗೆ ಕಾರ್ಕಳದಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ನನ್ನನ್ನು ಮಟ್ಟಹಾಕುವುದು ಹೇಗೆ ಎಂಬ ಬಗ್ಗೆ ಚರ್ಚೆಯಾಗಿದೆ. ಅದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರೂ ಇದ್ದರು’ ಎಂದೂ ಹೇಳಿದ್ದಾರೆ. ಅಲ್ಲಿಗೆ ಆರೆಸ್ಸೆಸ್‌ಗೆ ನನ್ನ ಮೇಲೆ ಕಣ್ಣಿದೆ ಎಂಬುದನ್ನೂ ಹೇಳಿದಂತಾಯಿತು. ಜತೆಗೆ ನನಗೆ ಬೆದರಿಕೆ ಇದೆ ಎಂಬುದನ್ನೂ ಬಿಂಬಿಸಿದಂತಾಯಿತು. ತನಗೆ ಆರೆಸ್ಸೆಸ್ ಅಷ್ಟು ಪ್ರಾಮುಖ್ಯ ನೀಡುತ್ತಿದೆ ಎಂಬುದನ್ನೂ ಈ ಮಾತು ಧ್ವನಿಸುತ್ತದೆ.
ಇಷ್ಟಕ್ಕೂ ದಿನೇಶ್ ಅಮೀನ್‌ಮಟ್ಟುವಿಗೆ ಹೀಗೆ ಭಯವಾಗಲು ಕಾರಣವೇನು? ಯಾರಾದರೂ ಅವರಿಗೇಕೆ ಗುಂಡು ಹೊಡೆಯಬೇಕು?
ಅವರಿಗೆ ಭಯ ಹುಟ್ಟಲು ಕಾರಣವಿದೆ. ಯಾಕೆಂದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಅವರು ಕೆಲಸ ಸೀಮಿತಗೊಳಿಸಿಕೊಂಡಿಲ್ಲ. ರಾಜ್ಯದಲ್ಲಿ ಸಾಕಷ್ಟು ಜನ ಮಾಧ್ಯಮ ಸಲೆಹಗಾರರಾಗಿ ಕೆಲಸ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರಿದ್ದಾಗ, ದೇವೇಗೌಡರಿದ್ದಾಗ ವಾರ್ತಾ ಇಲಾಖೆಯಲ್ಲಿದ್ದ ದಿನೇಶ್ ಮಾಧ್ಯಮ ಸಲಹೆಗಾರರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರ್.ಪಿ. ಜಗದೀಶ್ ಮಾಧ್ಯಮ ಸಲಹೆಗಾರರಾಗಿದ್ದರು. ಅವರ್ಯಾರಿಗೂ ದಿನೇಶ್‌ರಂತೆ ಭಯವಾಗಿದ್ದಿಲ್ಲ. ಅವರು ಇಂದಿಗೂ ಆರಾಮವಾಗಿ ಒಬ್ಬರೇ ಓಡಾಡುತ್ತಾರೆ. ಆದರೆ ದಿನೇಶ್ ಜೀವಭಯ ಕಾಡುತ್ತಿದೆ. ಕಾರಣ ಮಾಧ್ಯಮ ಸಲಹೆಗಾರನ ಕೆಲಸವನ್ನಷ್ಟೇ ಅಮೀನ್‌ಮಟ್ಟು ಮಾಡಿಲ್ಲ. ಅವರು ಮಾಧ್ಯಮ ಸಲಹೆಗಾರನ ಕೆಲಸಕ್ಕಿಂತ ಹೆಚ್ಚಾಗಿ ಒಬ್ಬ ಆಕ್ಟಿವಿಸ್ಟ್‌ನಂತೆ ಕೆಲಸ ಮಾಡಿದ್ದಾರೆ. ಮಾಧ್ಯಮ ಸಲಹೆಗಾರರಾಗಿರುವವರು ಮುಖ್ಯಮಂತ್ರಿಗೆ ಯಾವ ವಿಷಯದಲ್ಲಿ ಮಾಧ್ಯಮದಲ್ಲಿ ಏನು ಮಾತನಾಡಬೇಕು? ಯಾವ ವಿಷಯಕ್ಕೆ ಏನು ಪ್ರತಿಕ್ರಿಯೆ ನೀಡಬೇಕು? ಮುಂತಾದ ರೀತಿಯ ಸಲಹೆಗಳನ್ನು ನೀಡಬೇಕು. ಮಾಧ್ಯಮಗಳಲ್ಲಿ ಸಂದರ್ಶನಕ್ಕೆ ಅವಕಾಶ ಮಾಡಿಸಬೇಕು. ಅಗತ್ಯ ಸಂದರ್ಭಗಳಲ್ಲಿ ಸಂಪಾದಕರೊಂದಿಗೆ ಸಂವಾದ, ಮಾತುಕತೆಗಳನ್ನು ಆಯೋಜಿಸಬೇಕು. ಸರ್ಕಾರದ ದೃಷ್ಟಿಕೋನ ಪತ್ರಿಕೆಗಳಲ್ಲಿ ಸರಿಯಾಗಿ ಪ್ರತಿಬಿಂಬಿತವಾಗುವಂತೆ ಮಾಡಬೇಕು. ಆದರೆ ಅಮೀನ್‌ಮಟ್ಟು ಈ ಕೆಲಸ ಬಿಟ್ಟು ಬೇರೆಯೇ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗಿಂತ ಇವರ ಮಾತುಗಳು ವಿವಾದ ಸೃಷ್ಟಿಸಿದ್ದೇ ಹೆಚ್ಚು. ಅವರು ಮುಖ್ಯಮಂತ್ರಿಗೆ ಸಲಹೆ ಕೊಡುವುದು ಬಿಡಿ, ಇವರಿಗೆ ಎಲ್ಲಿ ಏನು ಮಾತನಾಡಬೇಕು ಎಂದು ಯಾರಾದರೂ ಸಲಹೆ ನೀಡಬೇಕಾದ ಅಗತ್ಯವಿದೆ.
ಇದೇ ಕಾರಣಕ್ಕೆ ತನಗೆ ಜೀವಬೆದರಿಕೆ ಇದೆಯೆಂಬ ಭಯ ಅವರನ್ನು ಕಾಡುತ್ತಿದೆ. ಅವರು ಭಾಗವಹಿಸಿದ ನಾರಾಯಣ ಗುರು ವಿಚಾರ ಕಮ್ಮಟ ವತಿಯಿಂದ ಮಂಗಳೂರು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣಕ್ಕೂ, ಅವರಿಗೆ ಜೀವ ಭಯ ಇರುವುದಕ್ಕೂ ಎತ್ತಣಿಂದೆತ್ತ ಸಂಬಂಧ?
ದಿನೇಶ್ ಅಮೀನ್ ಮಟ್ಟು ಹೇಳಿರುವ “ಸಾವಿನ ಬಗ್ಗೆ ಭಯವಿಲ್ಲ. ಆದರೆ ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ’ ಎಂಬ ಡೈಲಾಗನ್ನು ಎಲ್ಲೋ ಕೇಳಿದಂತಾಗುತ್ತದೆ ಎಂದು ಆಲೋಚೊಸಿ ನೋಡಿ. “ಎ ವೆನ್ಸಡೆ’ ಎಂಬ ಹಿಂದಿ ಸಿನೆಮಾ ಇದೆ. ಆ ಚಲನಚಿತ್ರದ ಕೊನೆಯಲ್ಲಿ ಭಯೋತ್ಪಾದಕನೊಬ್ಬ ಇದೇ ಮಾತುಗಳನ್ನು ಹೇಳುತ್ತಾನೆ. ನೀವು ಆ ದೃಶ್ಯವನ್ನೊಮ್ಮೆ ನೋಡಿ. ಆಗ ಆತ ಇರುವ ಸ್ಥಿತಿಗೂ, ದಿನೇಶ್ ಅಮೀನ್‌ಮಟ್ಟು ಹೇಳಿರುವ ಮಾತುಗಳಿಗೂ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ.
ಇಷ್ಟಕ್ಕೂ ದಿನೇಶ್ ಅಮೀನ್‌ಮಟ್ಟು ಹೀಗೆ ಹೇಳಿರುವುದು ಯಾಕೆ ಗೊತ್ತೇ?
ಇನ್ನೇನು ಈ ಸರ್ಕಾರದ ಅವಧಿ ಮುಗಿಯುತ್ತ ಬಂತು. ಮಾಧ್ಯಮ ಸಲಹೆಗಾರನ ಕೆಲಸ ಹೆಚ್ಚು ದಿನ ಇರುವುದಿಲ್ಲ. ಮುಂದೇನು? ಅವರಿರುವ ಸ್ಥಿತಿಯಲ್ಲಿ ಅವರನ್ನು ಯಾರೂ ಮತ್ತೆ ಪತ್ರಿಕೋದ್ಯಮಕ್ಕೆ ಸೇರಿಸುವುದಿಲ್ಲ. ಹಾಗಾಗಿ ಭವಿಷ್ಯಕ್ಕೊಂದು ದಾರಿ ಮಾಡಿಕೊಳ್ಳಬೇಕಿದೆ. ಅದಕ್ಕೆ ಅವರು ಕಾಂಗ್ರೆಸ್‌ನಿಂದ ಟಿಕೆಟ್ ಗಿಟ್ಟಿಸುವುದು ಅವರ ಆಲೋಚನೆ. ಈ ಹಿಂದೆಯೇ ಒಮ್ಮೆ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ “ಮೋಹನ್ ಆಳ್ವ ಚುನಾವಣೆಗೆ ಸ್ಪರ್ಧಿಸಿದರೆ ನಾನು ಅವರ ವಿರುದ್ಧ ಸ್ಪರ್ಧಿಸುತ್ತೇನೆ. ಯಾರು ಗೆಲ್ಲುತ್ತಾರೊ ನೋಡೋಣ’ ಎಂದಿದ್ದರು. ಅಮೀನ್‌ಮಟ್ಟು ಇಡಗಂಟು ಕಳೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಅವರ ಮನಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಸೆಯಿದೆ ಎಂಬುದನ್ನು ಇದು ತೋರಿಸುತ್ತದೆ. ಈಗ ಪರಿಸ್ಥಿತಿ ಹೇಗಿದೆಯೆಂದರೆ ಮೋಹನ್ ಆಳ್ವ ಸ್ಪರ್ಧಿಸದಿದ್ದರೂ ಅವರು ಚುನಾವಣೆಗೆ ಸ್ಪರ್ಧಿಸುವ ತವಕದಲ್ಲಿದ್ದಾರೆ. ಅದಕ್ಕೆ ಅವರು ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಕಟ್ಟಾ ಕಾಂಗ್ರೆಸ್ಸಿಗರಿಗಿಂತ ಬಲವಾಗಿ ಟೀಕಿಸುತ್ತಿದ್ದಾರೆ. ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ತನ್ನನ್ನು ಬಿಂಬಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ಈಗ ತನಗೆ ಗುಂಡು ಬಿದ್ದರೂ ಅಚ್ಚರಿಯಿಲ್ಲ ಎನ್ನುತ್ತಿರುವುದು.
ತನಗೆ ನಿಜವಾಗಿಯೂ ಪ್ರಾಮುಖ್ಯ ಇಲ್ಲದಿದ್ದರೂ, ಪ್ರಾಮುಖ್ಯವಿದೆ ಎಂಬುದನ್ನು ಬಿಂಬಿಸಿಕೊಳ್ಳುವುದಕ್ಕೆ ಮನಶ್ಶಾಸ್ತ್ರದಲ್ಲಿ ಒಂದು ರೋಗ ಎಂದು ಪರಿಗಣಿಸಲಾಗುತ್ತದೆ. ಆ ರೋಗದಿಂದ ಅಮೀನ್‌ಮಟ್ಟು ಬಳಲುತ್ತಿದ್ದಾರೊ ಏನೊ. ಯಾಕೆಂದರೆ ಅವರು ಮೋದಿ, ಅಮಿತ್ ಶಾ ಅವರಿಂದ ಸ್ಥಳೀಯ ಸಣ್ಣ ಕಾರ್ಯಕರ್ತನವರೆಗೂ ಅಮೀನ್‌ಮಟ್ಟು ಪ್ರತಿಕ್ರಿಯಿಸುತ್ತಾರೆ. ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿರಬೇಕು. ಆರೆಸ್ಸೆಸ್‌ಗೆ ಮಾಡಲು ಸಾಕಷ್ಟು ಕೆಲಸವಿದೆ. ಅದೆಲ್ಲ ಬಿಟ್ಟು ದಿನೇಶ್ ಅಮೀನ್‌ಮಟ್ಟು ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಖಂಡಿತ ಆರೆಸ್ಸೆಸ್‌ಗಿಲ್ಲ. ಆರೆಸ್ಸೆಸ್ ಉದ್ದೇಶ, ಧ್ಯೇಯ, ಆಲೋಚನೆಗಳು ಉದಾತ್ತವಾಗಿವೆ. ತನ್ನ ವಿರುದ್ಧ ಮಾತನಾಡಿದವರನ್ನು ಕೊಲೆ ಮಾಡಿದ, ಬಾಯಿಮುಚ್ಚಿಸಲು ಆರೆಸ್ಸೆಸ್ ಯತ್ನಿಸಿದ ಉದಾಹರಣೆಗಳೇ ಇಲ್ಲ. ಹೀಗಿರುವಾಗ ಅಮೀನ್‌ಮಟ್ಟುವಿನಂತಹ ಕ್ರಿಮಿಯ ಬಗ್ಗೆ ಆರೆಸ್ಸೆಸ್ ತಲೆಕೆಡಿಸಿಕೊಳ್ಳುತ್ತದೆ ಎಂಬುದು ಹಾಸ್ಯಾಸ್ಪದ.
ಅಮೀನ್‌ಮಟ್ಟು ತಲೆ ಮೇಲೆ ಮಾತ್ರ ಬೋಳು ಅಂದುಕೊಂಡಿದ್ದೆವು. ಆದರೆ ಅವರು ಒಳಗೂ ಏನಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ.
Leave A Reply