• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾವಣನನ್ನು ದುರಂತ ನಾಯಕನನ್ನಾಗಿಸಿ ಏನು ಸಾಧಿಸುತ್ತೀರಿ ಬಶೀರ್‌?

TNN Correspondent Posted On October 6, 2017


  • Share On Facebook
  • Tweet It

ಇತ್ತೀಚೆಗೆ ವಾಲ್ಮೀಕಿ ಜಯಂತಿ ದಿನ ಸಾಮಾಜಿಕ ಜಾಲತಾಣ ನೋಡುತ್ತ ಕುಳಿತಿದ್ದೆ. ಅದರಲ್ಲಿ ಒಂದು ರಾಜ್ಯ ಮಟ್ಟದ ಪತ್ರಿಕೆ ಎಂದು ಹೇಳಿಕೊಳ್ಳುವ ವಾರ್ತಾಭಾರತಿ ಸಂಪಾದಕ ಬಿ.ಎಂ.ಬಶೀರ್ ಕವನದ ಮೂಲಕ ವಾಲ್ಮೀಕಿ ಜಯಂತಿಯ ಬಗ್ಗೆ ಶುಭಾಶಯ ಕೋರಿದ್ದಾರೆ. ಅದು ಹೀಗಿದೆ…
ವಾಲ್ಮೀಕಿ ಜಯಂತಿಯ ಶುಭಾಶಯ ರಾವಣಾಯನ
1. ಮೂಗು, ಕಿವಿ, ಹೃದಯ
ಹರಿದುಕೊಂಡು ಆಕ್ರಂದನವಿಡುತ್ತಿದ್ದ
ವಿಧವೆ ಶೂರ್ಪನಖಿಯ ನೋಡಿ ನಕ್ಕಳು ಸೀತೆ
ಅದಕ್ಕಾಗಿ ತೆತ್ತ ಬೆಲೆ ರಾಮಾಯಣ!
2. ಯಾರು ಹೇಳಿದರು
ರಾಮಾಯಣ ಹುಟ್ಟಿದ್ದು
ವಾಲ್ಮೀಕಿಯ ಮಾನಿಷಾದ
ಎಂಬ ವಿಷಾದದೊಂದಿಗೆ ಎಂದು…?
ರಾಮಾಯಣ ಹುಟ್ಟಿದ್ದು
ಶೂರ್ಪನಖಿಯ ಅಣ್ಣಾ…
ಎಂಬ ಆಕ್ರಂದನದೊಂದಿಗೆ
ಶೂರ್ಪನಖಿಯ ಶೋಕ
ರಾಮಾಯಣದ ಶ್ಲೋಕವಾಯಿತು
3. ಅಣ್ಣಾ…
ಎಂಬ ಆಕ್ರಂದನಕ್ಕೆ ರಾವಣ ಏನಾಯ್ತು ಬಂಗಾರ…?
ಎಂದು ಧಾವಿಸಿದ ಕಿವಿ, ಮೂಗು, ಮುಖ ಕಳೆದುಕೊಂಡ
ತಂಗಿಯ ಕಣ್ಣಲ್ಲಿ ಕಣ್ಣೀರಿನಂತೆ ರಕ್ತ ಸುರಿಯುತ್ತಿತ್ತು!
ಇದೇನಿದು ಬಂಗಾರ, ರಾವಣ ಮಡಿಲಲ್ಲಿಟ್ಟು ಕೇಳಿದ
ನಾಡಿನಿಂದ ಬಂದವರು ಈ ಸ್ಥಿತಿಗೆ ತಂದರು
ಶೂರ್ಪನಖಿ ಗಳಗಳನೆ ಅತ್ತಳು
ನೀನೇನು ತಪ್ಪು ಮಾಡಿದೆ, ನಾನವರ ಇಷ್ಟ ಪಟ್ಟೆ ಅಷ್ಟೇ…
ಮುಂದೆ ರಾಮಾಯಣ ನಡೆಯಿತು
ತಂಗಿಗಾಗಿ ಪ್ರಾಣ ಕೊಟ್ಟ ಅಣ್ಣನ ಕತೆ ಜನಮನದಲ್ಲಿ ಹಾಡಾಯಿತು..!!
ಹೀಗೆ ಕೊನೆಯಾಗುತ್ತೆ ವಾಲ್ಮೀಕಿ ಜಯಂತಿಯ ಶುಭಾಶಯಗಳು. ಅವರ ಪ್ರಕಾರ ರಾಮಾಯಣ ರಾವಣನ ಕತೆಯೇ ಹೊರತು ರಾಮನ ಕತೆಯಲ್ಲ. ಅವರರವರ ವಿಚಾರದಂತೆ ರಾಮಾಯಣವನ್ನು ನೋಡುತ್ತಾರೆ ಬಿಡಿ ಎಂದು ಸುಮ್ಮನಾಗಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ರಾಮಾಯಣಕ್ಕೆ ಬೇರೆಯದ್ದೇ ದೃಷ್ಟಿಕೋನ ನೀಡಬೇಕೆಂಬ ಹುನ್ನಾರ ಇದರ ಹಿಂದಿರುವಂತೆ ಕಂಡಿತು.
ಇಡೀ ಕವನದಲ್ಲಿ ಹಿಂದುಗಳು ಮರ್ಯಾದಾ ಪುರುಷೊತ್ತಮನೆಂಬ ಹೆಗ್ಗಳಿಕೆ ಪಡೆದ ರಾಮನ ಬಗ್ಗೆ ಚುಚ್ಚಿ ಮಾತನಾಡುವುದು ಕಂಡು ಬರುತ್ತದೆ. ರಾಮನಿಗಿಂತ ರಾವಣನನ್ನೇ ಹೀರೊ ಮಾಡಲು ಹೊರಟಿರುವುದು ಸ್ಪಷ್ಟ. ರಾವಣನು ಕೇವಲ ತನ್ನ ತಂಗಿಗಾಗಿ ಇದೆಲ್ಲ ಕೆಲಸಗಳನ್ನು ಮಾಡಿದ್ದ ಎಂದು ಹೇಳಲು ಹವಣಿಸಿದ್ದಾರೆ. ಇದೇ ಮಾತನ್ನು ಅವರ ಧರ್ಮದವರು ಇಷ್ಟಪಡುವ ಕುರಾನ್‌ ಕುರಿತು ಹೇಳಲು ಅವರಿಗೆ ಧೈರ್ಯವಿದೆಯೇ?
ಕೇಳಿ ರಾಮಾಯಣದಲ್ಲಿ ಶೂರ್ಪನಖಿಯ ಅಳುವಿನ ಬಗ್ಗೆ ಹೇಳಿದಿರಲ್ಲ. ಅವಳ ಅಳುವಿಗೆ ಶ್ರೀರಾಮ ಕಾರಣನೇ? ಅಥವಾ ಅವಳ ಅಣ್ಣ ರಾವಣ ಕಾರಣನೇ? ಪರಪುರುಷನ ಮೇಲೆ ಆಸೆಪಟ್ಟ ಅವಳೇ ಕಾರಣವೇ? ಅಥವಾ ಬರೆದ ಆದಿ ಕವಿ ವಾಲ್ಮೀಕಿ ಕಾರಣವೇ? ಇದನ್ನೂ ಅಲ್ಲಿ ಬರೆದಿದ್ದರೆ ಚೆನ್ನಾಗಿರುತ್ತಿತ್ತು. ಇಡೀ ರಾಮಾಯಣ ಸಂಭವಿಸಿದ್ದೆ ತಂಗಿ ಕಣ್ಣೀರೊರೆಸಲು ಎಂದು ಬರೆದಿದ್ದಿರಿ. ಆದರೆ ಆ ಕಣ್ಣೀರು ಬರಲು ಕಾರಣ ಯಾರು ಎಂಬುದನ್ನು ಮಾತ್ರರ ಮುಚ್ಚಿಟ್ಟು, ರಾಮನೇ ಕಾರಣ ಎಂಬ ಅರ್ಥಬರುವಂತೆ ಬರೆದಿದ್ದಾರೆ. ಅಷ್ಟಕ್ಕೂ ಮದುವೆಯಾದ ಪುರುಷನ ಮೇಲೆ ಕಣ್ಣು ಹಾಕುವುದು ಮಹಾ ಪಾಪ. ನಿಮ್ಮ ಧರ್ಮದಲ್ಲಿ ಒಂದಕ್ಕಿಂತ ಹೆಚ್ಚಿನ ಮದುವೆಗೆ ಆಸ್ಪದವಿದೆ. ಆದರೆ ಹಿಂದೂ ಧರ್ಮದಲ್ಲಿ ಮಾತ್ರ ಒಂದೇ ಮದುವೆ. ನಿಮ್ಮ ಧರ್ಮದಲ್ಲಿ ಎಷ್ಟು ಬೇಕೊ ಅಷ್ಟು ಮದುವೆ ಆಗಬಹುದು. ಹಾಗಾಗಿ ಶೂರ್ಪನಖಿ ರಾಮನ ಮೇಲೆ ಆಸೆಪಟ್ಟಿದ್ದು ನಿಮಗೆ ತಪ್ಪು ಕಾಣಲಿಕ್ಕಿಲ್ಲ. ಆದರೆ ಅದು ನಮ್ಮ ನಂಬಿಕೆ. ಅದಕ್ಕೆ ಘಾಸಿ ಮಾಡುವ ಅಧಿಕಾರ ನಿಮಗೆಲ್ಲಿದೆ?
ಶೂರ್ಪನಖಿ ಮಾಡಿದ್ದೇನು, ಶ್ರೀರಾಮ ಮೇಲೆ ಮೋಹಗೊಂಡಳು. ಅದರ ಪರಿಣಾಮವೇ ರಾಮಾಯಣ ಜರುಗಿತು. ಅದರ ಬಗ್ಗೆ ವಾಲ್ಮೀಕಿ ಬರೆದ. ಅಂತಹ ಶೂರ್ಪನಖಿಯನ್ನು ನಾಯಕಿಯನ್ನಾಗಿ ರಾವಣನನ್ನು ದುರಂತ ನಾಯಕನನ್ನಾಗಿ ಚಿತ್ರಸಿ ಏನನ್ನು ಸಾಧಿಸಲು ಹೊರಟಿರುವಿರಿ? ಕೇವಲ ಒಂದು ಧರ್ಮವನ್ನು ತೆಗಳಬೇಕು ಎಂಬುದೇ ನಿಮ್ಮ ಉದ್ದೇಶವಲ್ಲವೇ? ರಾವಣನನ್ನು ಹೀರೋ ಮಾಡಿ ನೀವೂ ಹೀರೊ ಆಗಲು ಹೊರಟಿರುವುದು ಬುದ್ಧಿವಂತನ ಎಂದುಕೊಂಡಿದ್ದೀರಾ?
ನಿಮ್ಮ ಪ್ರಕಾರ ರಾಮಾಯಣ ಎಂಬುದು ಕೇವಲ ಒಂದು ವಿಷಾದನೀಯ ಕತೆ. ಆದರೆ ನಮಗೆ ಅದೊಂದು ಆದರ್ಶ ಪುರುಷನ ಕತೆ. ರಾಮ ಸತ್ಯ, ನಿಷ್ಠೆ, ಉತ್ತಮ ಆಡಳಿತಕ್ಕೆ ಹೆಸರಾದ ವ್ಯಕ್ತಿ. ಸಹೋದರ ಪ್ರೀತಿಗೆ, ಅಧಿಕಾರ ತ್ಯಾಗಕ್ಕೆ ಹೆಸರಾದ ವ್ಯಕ್ತಿ. ರಾಮಾಯಣವನ್ನು ಈಗಿನ ಕಾಲಕ್ಕೆ ಹೋಲಿಸಿ ಅದನ್ನು ಹಳಿಯುವವರೂ ಇದ್ದಾರೆ. ಆದರೆ ರಾಮಾಯಣ ಬರೆದ ಕಾಲದಲ್ಲಿ ವ್ಯವಸ್ಥೆ, ಸಮಾಜ ಹೇಗಿತ್ತು ಎಂಬುದನ್ನು ಪರಿಗಣಿಸಿ ಮಾತನಾಡಬೇಕು. ಇಷ್ಟೊಳ್ಳೆಯ ರಾಮಾಯಣವನ್ನು ನೀವು ರಾವಣನ ಕತೆ ಮಾಡಲು ಹೊರಟು, ಹಿಂದೂ ಸಮಾಜದಲ್ಲಿ ಆದರ್ಶದ ರೀತಿಯನ್ನೇ ಬದಲಿಸಲು ಹವಣಿಸುತ್ತಿದ್ದೀರಿ.
ಇದಕ್ಕೆ ಇರಬಹುದು ಹಿಂದೂ ಧರ್ಮ ಮತ್ತು ಅದರ ಆಚರಣೆಗೆ ಯಾವುದೇ ರೀತಿಯ ಗೇಲಿ ಮಾಡಿದರು ಸಹಿಸಿಕೊಳ್ಳುತ್ತಾರೆ ಎಂಬ ಹುಂಬ ನಂಬಿಕೆಯೂ ಇದೆ. ಇದರ ಜತೆ ಆಳುವವರ ಸಹಕಾರವೂ ಇರುವುದರಿಂದ ನಿಮಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ. ಸಂಪಾದಕರೆ, ಹಿಂದೂ ಧರ್ಮದ ಒಬ್ಬ ಆದಿ ಕವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾರುದ್ದ ಬರೆಯುವ ನೀವು ನಿಮ್ಮದೆ ಧರ್ಮದ ಒಂದು ಕೆಟ್ಟ ಆಚರಣೆಯ ಬಗ್ಗೆ ಒಂದು ಪ್ಯಾರಾ ಬರೆದು ನೋಡಿ. ಆಗ ಗೊತ್ತಾಗುತ್ತೆ ಯಾವುದು ಸರಿ ಎಂದು. ಆಗ ಗೊತ್ತಾಗುತ್ತದೆ ಹಿಂದೂಗಳು ಎಷ್ಟು ಸಹಿಷ್ಣುಗಳೆಂದು. ನಿಮ್ಮ ಸ್ವಂತ ಧರ್ಮದ ಅಂಧಾಚರಣೆಗಳ ಪಟ್ಟಿಯೇ ನಿಮ್ಮಲಿದೆ. ಆದರೆ ಅದರೆಡೆಗೆ ನೀವು ಕಣ್ಣೆತ್ತಿಯೂ ನೋಡುವುದಿಲ್ಲ. ಆದರೆ ಹಿಂದೂ ಧರ್ಮದ ಪ್ರತಿ ಆಚರಣೆ ಬಗ್ಗೆ ಕೊಂಕು ನುಡಿಯುವುದೇ ಕಾಯಕ ಮಾಡಿಕೊಂಡಿದ್ದೀರಿ. ಕೇಳಿದರೆ ಎಲ್ಲಿಯೂ ಸಿಗದ ನಿಮ್ಮ ಕವಿತೆಗಳ ಸಂಕಲನ ನೋಡಿ ಎನ್ನುತ್ತಿರಿ. ಆದರೆ ದಯವಿಟ್ಟು ನಿಮ್ಮ ಆ ಕವನ ಸಂಕಲನ ಎಲ್ಲಿ ಸಿಗುತ್ತದೆ ಎಂಬುದನ್ನು ಹೇಳಿಬಿಡಿ. ಅದನ್ನು ಒಂದು ಬಾರಿ, ಓದಿಬಿಡೋಣ. ಅದೆಷ್ಟು ಧರ್ಮನಿಂದೆ ಮಾಡಿದ್ದೀರೊ ಗೊತ್ತಾಗುತ್ತದೆ. ತಾಕತ್ತಿದ್ದರೆ ನಿಮ್ಮ ಧರ್ಮದ ಬಗ್ಗೆಯೂ ಒಂದು ಕವನ ಸಂಕಲನ ಬರೆಯಿರಿ. ಆಗ ನಿಮ್ಮೊಳಗೆ ನಿಜವಾಗಿಯೂ ಒಬ್ಬ ಕವಿಯಿದ್ದಾನೆ ಎಂದು ಮೆಚ್ಚಿಕೊಳ್ಳಬಹುದು.

 

-ಎಬಿಎನ್

  • Share On Facebook
  • Tweet It


- Advertisement -


Trending Now
ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
Tulunadu News June 8, 2023
ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
Tulunadu News June 8, 2023
Leave A Reply

  • Recent Posts

    • ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
  • Popular Posts

    • 1
      ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • 2
      ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • 3
      ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • 4
      ಹೆಣ್ಣು ಕಾಮದ ಸರಕಲ್ಲ!
    • 5
      ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search