ಖಾಸಗಿ ವೈದ್ಯರಲ್ಲಿ ಜನಸಾಮಾನ್ಯರ ಕೆಲವು ಪ್ರಶ್ನೆಗಳು: ಉತ್ತರ ಇದೆಯಾ?
ಖಾಸಗಿ ವೈದ್ಯರು ಪ್ರತಿಭಟನೆ ಮಾಡುತ್ತಾ ಇದ್ದಾರೆ. ಇವತ್ತು ಖಾಸಗಿ ಆಸ್ಪತ್ರೆಗಳ ಒಪಿಡಿ ಮತ್ತು ಕ್ಲಿನಿಕ್ ಗಳು ಬಾಗಿಲು ಎಳೆದಿವೆ. ಯಾಕೆ? ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017 ಕ್ಕೆ ಮಾಡಿರುವ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಯಾಕೋ ವೈದ್ಯರು ಬೇರೆ ಬೇರೆ ವಿಷಯಗಳಲ್ಲಿ ಅನಗತ್ಯ ಸುದ್ದಿಯಾಗುತ್ತಿದ್ದಾರೆ. ರಾಜ್ಯ ಸರಕಾರದ ನಿಲುವುಗಳನ್ನು ವಿರೋಧಿಸುವುದು ಬಿಡುವುದು ಅವರಿಗೆ ಬಿಟ್ಟ ವಿಷಯ. ಆದರೆ ಇಲ್ಲಿ ಒಂದು ವಿಷಯದ ಮೇಲೆ ಅವರಿಗೆ ಧನ್ಯವಾದ ಅರ್ಪಿಸಬೇಕಿದೆ. ಅದೇನೆಂದರೆ ಈ ಹೃದಯದ ಶಸ್ತ್ರಚಿಕಿತ್ಸೆ ನಡೆಸುವಾಗ ಅಳವಡಿಸುವ ಸ್ಟ್ರೆಂಥ್ ಇದರ ದರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಚಾನಕ್ ಆಗಿ ಆಕಾಶದಿಂದ ಭೂಮಿಗೆ ಇಳಿಸುವಾಗ ಪುಣ್ಯಕ್ಕೆ ಯಾವ ವೈದ್ಯ ಕೂಡ ಬೊಬ್ಬೆ ಹಾಕಿ ವಿರುದ್ಧ ಹೋರಾಡಿಲ್ಲ. ಯಾಕೆಂದರೆ ಸ್ಟ್ರೆಂಥ್ ಮೇಲೆ ವೈದ್ಯರಿಗೆ ಒಳ್ಳೆಯ ಕಮೀಷನ್ ಸಿಗುತ್ತಿತ್ತು. ಒಂದು ಸ್ಟ್ರೆಂಥ್ ಗೆ ನಿಜಕ್ಕೂ ತಗಲುವುದು ಮೂಲ ಉತ್ಪಾದನ ದರ ಮೂರು ಸಾವಿರ ರೂಪಾಯಿ. ಅಷ್ಟಕ್ಕೂ ಸ್ಟ್ರೆಂಥ್ ಎಂದರೆ ನಿಮ್ಮ ಬಾಲ್ ಪೆನ್ ಒಳಗೆ ಸ್ಪ್ರಿಂಗ್ ಒಂದು ಇರುತ್ತದೆಯಲ್ಲ. ಅದೇ ರೀತಿಯದ್ದು. ಆದರೆ ಕ್ವಾಲಿಟಿ ಮತ್ತು ಮೆಟೇರಿಯಲ್ ಬೇರೆ. ಈ ಮೂರು ಸಾವಿರ ರೂಪಾಯಿ ಸ್ಟ್ರೆಂಥ್ ಅನ್ನು ಉತ್ಪಾದಕರು ಮೂರು ಲಕ್ಷಕ್ಕೆ ಮಾರುತ್ತಿದ್ದರು. ಅದರಲ್ಲಿ ನಿವ್ವಳ ಒಂದೂವರೆ ಲಕ್ಷ ಕಮೀಷನ್ ವೈದ್ಯರ ಕಿಸೆಗೆ ಹೋಗುತ್ತಿತ್ತು. ಈ ಬಗ್ಗೆ ಅಧ್ಯಯನ ಮಾಡಿದ ಮೋದಿಯವರು ಏಕಾಏಕಿ ಮೂರು ಲಕ್ಷದಿಂದ ಅದನ್ನು ಮೂವತ್ತು ಸಾವಿರಕ್ಕೆ ಇಳಿಸಿಬಿಟ್ರು. ಅದರಿಂದ ಹೃದಯದ ಆಪರೇಶನ್ ಗೆ ಸ್ಟ್ರೆಂಥ್ ಅಳವಡಿಸಲಿದೆ ಎಂದಾಗ ಗಾಬರಿ ಬೀಳುತ್ತಿದ್ದ ಜನಸಾಮಾನ್ಯ ಇವತ್ತು ಧೈರ್ಯದಿಂದ ಆಪರೇಶನ್ ಮಾಡಿ ಡಾಕ್ಟರೇ ಎನ್ನುತ್ತಿದ್ದಾನೆ. ಆವತ್ತು ವೈದ್ಯರು ಅದರ ದರ ಇಳಿಸಬಾರದು ಎಂದಿದ್ದರೆ ಪಾಪದವರಿಗೆ ಕಷ್ಟವಾಗುತ್ತಿತ್ತು. ಅದಕ್ಕೆ ಅವರಿಗೆ ಪ್ರಾರಂಭದಲ್ಲಿ ಥ್ಯಾಂಕ್ಸ್ ಹೇಳಿರುವುದು.
ಇನ್ನು ಖಾಸಗಿ ಆಸ್ಪತ್ರೆಗಳನ್ನು ಸರಕಾರಗಳು ತೆರೆಯಲು ಅನುಮತಿ ನೀಡುವುದು ತಮಗೆ ಸೂಕ್ತವಾಗಿ ಜನಸಾಮಾನ್ಯರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ. ಆದರೆ ಅದನ್ನು ದುರುಪಯೋಗ ಪಡಿಸಿಕೊಂಡ ಖಾಸಗಿ ಆಸ್ಪತ್ರೆಗಳು ಇವತ್ತು ಸರಕಾರದ ವೈಫಲತೆಯನ್ನು ಬಳಸಿಕೊಂಡು ಜನರನ್ನು ಸುಲಿಯುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತಿದೆ.
ಅದರೊಂದಿಗೆ ಜನಸಾಮಾನ್ಯನೊಬ್ಬ ತಾನು ಜೀವಮಾನವೀಡಿ ದುಡಿದು 15 ಲಕ್ಷ ಒಟ್ಟು ಮಾಡಿದ ಎಂದು ಇಟ್ಟುಕೊಳ್ಳಿ. ಅವನಿಗೆ ಒಂದು ಕಾಯಿಲೆ ಬಂದಾಗ ಇವರು ಚಿಕಿತ್ಸೆ ಎಂದು ಬಿಲ್ ಹದಿನೈದು ಲಕ್ಷ ಮಾಡಿದರೆ ಅವನ ಭವಿಷ್ಯ ಏನಾಗಬೇಕು ಎನ್ನುವುದು ಮತ್ತೊಂದು ಪ್ರಶ್ನೆ.
ಮತ್ತೊಂದು ನಾವೇನೂ ನಿಮ್ಮನ್ನು ಆಮಂತ್ರಣ ಕೊಟ್ಟು ಕರೆಯಲ್ಲ ಎಂದು ಹೇಳುವ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಹಾಗಾದರೆ ಟಿವಿ, ಪೇಪರ್ ಗಳಲ್ಲಿ ಜಾಹೀರಾತು ಕೊಡುವುದೇಕೆ?
ಮತ್ತೊಂದು ಒಬ್ಬ ವ್ಯಕ್ತಿ ಒಂದು ಸಣ್ಣ ಕಾಯಿಲೆಗೆ ಯಾವುದೋ ಯೋಜನೆಯಡಿ ಚಿಕಿತ್ಸೆಗಾಗಿ ದಾಖಲಾದರೆ ಈ ವೈದ್ಯರ ಫೀಸ್ ಎಷ್ಟಿರುತ್ತದೆ ಎಂದು ನೋಡುವುದು ಯಾರು?
ಯಾವ ಚಿಕಿತ್ಸೆಗೆ ಎಷ್ಟೇಷ್ಟು ಫೀಸ್ ಎಂದು ಯಾಕೆ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಬೋರ್ಡ್ ಯಾಕೆ ಇಲ್ಲ!
Leave A Reply