ಭಾರತದ ವಿರುದ್ಧ ಸದಾ ಕುತಂತ್ರಗಳನ್ನು ಮಾಡುತ್ತಲೇ ಬಂದಿರುವ ಪಾಕಿಸ್ತಾನ, ಈ ಮತ್ತೊಮ್ಮೆ ತನ್ನ ಕೊಳಕು ಮುಖವಾಡವನ್ನು ಬಯಲು ಮಾಡಿಕೊಂಡಿದೆ. ಭಾರತದ ಮೇಲೆ ನೇರ ದಾಳಿ ಮಾಡಲು ಆಗದೇ ಹೇಡಿಯಂತೆ ದೇಶದಲ್ಲಿನ ಹಿಂದೂ ಮುಖಂಡರನ್ನು ಹತ್ಯೆ ಮಾಡಿ, ಕೋಮು ದಳ್ಳೂರಿ ಸೃಷ್ಟಿಸುವ ರಣತಂತ್ರವನ್ನು ರೂಪಿಸಿದೆ. ಈ ಮಾಹಿತಿ ಪಂಜಾಬ್ ನಲ್ಲಿ ನಡೆದ ಹಿಂದೂ ಸಂಘಟನೆಗಳ ಮುಖಂಡರ ಕೊಲೆ ಪ್ರಕರಣದ ತನಿಖೆ ವೇಳೆ ಬಹಿರಂಗವಾಗಿದೆ.
ಪಂಜಾಬ್ ನಲ್ಲಿ ಇತ್ತೀಚೆಗೆ ನಡೆದ ಆರ್ ಎಸ್ ಎಸ್ ಮುಖಂಡ ರವೀಂದ್ರ ಕುಮಾರ್ ಅವರನ್ನು ಲುದಿಯಾನದಲ್ಲಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ತನಿಖೆಯನ್ನು ಬೆನ್ನತ್ತಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ ಅಚ್ಚರಿಯ ಮಾಹಿತಿ ದೊರೆತಿದ್ದು, ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಭಾರತದ ವಿರುದ್ಧ ದೇಶದಲ್ಲಿರುವ ದೇಶವಿರೋಧಿ ಸಂಘಟನೆಗಳ ಮುಖಂಡರನ್ನು ಬಳಸಿ, ಹಿಂದೂ ಮುಖಂಡರನ್ನು ಕೊಲೆ ಮಾಡುವ ಹುನ್ನಾರ ರೂಪಿಸಿದೆ ಎಂಬ ಮಾಹಿತಿ ದೊರೆತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ರವೀಂದ್ರ ಕುಮಾರ ಕೊಲೆ ಪ್ರಕರಣದ ಬೆನ್ನುಬಿದ್ದಿರುವ ರಾಷ್ಟ್ರೀಯ ತನಿಖಾ ತಂಡ ಆರೋಪಿಗಳಾದ ಜಿಮ್ಮಿ ಸಿಂಗ್, ಜಗ್ತಾರ್ ಸಿಂಗ್, ಜೋಹಾಲ್, ಧರ್ಮೇಂದರ್ ಎಂಬುವವರನ್ನು ಬಂಧಿಸಿದೆ. ಪ್ರಮುಖ ಆರೋಪಿ ಜಿಮ್ಮಿ ಸಿಂಗ್ ಕಾಶ್ಮೀರ ನಿವಾಸಿಯಾಗಿದ್ದು, ಇಂಗ್ಲೇಡ್ ನಲ್ಲಿ ವಾಸವಾಗಿದ್ದ. ಅಲ್ಲಿಯೇ ಐಎಸ್ಐ ಎಜೆಂಟರ ಸಂಪರ್ಕ ಬೆಳೆಸಿದ್ದ. ಆರೋಪಿ ಜಗ್ತಾರ ಸಿಂಗ್ ಇಂಗ್ಲೇಡ್ ನಿವಾಸಿಯಾಗಿದ್ದ, ಧರ್ಮೇಂದರ ರೌಡಿಯಾಗಿದ್ದ. ಇವರು ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ.
ಭಾರತದಲ್ಲಿ ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಬೆಂಬಲಿಗರನ್ನು ಬಳಸಿಕೊಂಡು ಭಾರತದಲ್ಲಿ ಕೋಮುದಳ್ಳುರಿ ಸೃಷ್ಟಿಸಲು ಪಾಕಿಸ್ತಾನ ಹಣ ನೀಡುತ್ತಿದ್ದು, ಅದಕ್ಕೆ ಪೂರಕವಾಗಿ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಗಳು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ
ಹಿಂದೂ, ಬಲಪಂಥಿಯ ಮುಖಂಡರೇ ಟಾರ್ಗೇಟ್
ಪಂಜಾಬ್ ನಲ್ಲಿ ಹಿಂದೂ ಮುಖಂಡರನ್ನು ಕೊಲೆ ಮಾಡಿಸುವ ಮೂಲಕ ಕೋಮು ದಳ್ಳುರಿ ಸೃಷ್ಟಿಸಲು ಪಾಕ್ ಹುನ್ನಾರ ನಡೆಸಿದೆ. ಪಂಜಾಬ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಿಸಿ, ದೇಶದ ರಕ್ಷಣಾ ವ್ಯವಸ್ಥೆಗೆ ಧಕ್ಕೆ ತರುವ ದೂರಾಲೋಚನೆ ಐಎಸ್ಐದ್ದು. ಧರ್ಮನಿಷ್ಠರಾದ ಸಿಖ್ಖರನ್ನು ಬಳಸಿಕೊಂಡು ಹಿಂದೂ, ಸಿಖ್ಖರ ಮಧ್ಯೆ ಗಲಭೆ ಸೃಷ್ಟಿಸುವುದೇ ಇದರ ಉದ್ದೇಶ ಎನ್ನಲಾಗಿದೆ. ಅದಕ್ಕಾಗಿಯೇ ಪಂಜಾಬ್ ನಲ್ಲಿ ಹಿಂದೂ ಮುಖಂಡರನ್ನು ಗುರಿಯಾಟ್ಟುಕೊಂಡು ಹತ್ಯೆ ಮಾಡಲಾಗುತ್ತಿದೆ.
ಒಂದು ಕೊಲೆ ತನಿಖೆ, 6 ಕೊಲೆಗಳ ಹುನ್ನಾರ ಬಯಲು
ಅಕ್ಟೋಬರ್ 17 ರಂದು ಲುದಿಯಾನದಲ್ಲಿ ಕೊಲೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರವೀಂದ್ರಕುಮಾರ ಗೋಸಾಯಿ ಕೊಲೆ ತನಿಖೆ ಬೆನ್ನತ್ತಿದ್ದ ಎನ್ಐಎ ಗೆ ಪಂಜಾಬ್ ನಲ್ಲಿ ಹಿಂದೆ ನಡೆದ 6 ಹಿಂದೂ ಮುಖಂಡರ ಕೊಲೆ ತನಿಖೆಯಲ್ಲಿ ಬಯಲಾಗಿದೆ. ನಾಲ್ವರನ್ನು ಬಂಧಿಸಿರುವ ಎನ್ಐಎ ಮೂವರ ಮಾಹಿತಿ ನೀಡಿದ್ದು, ಇನ್ನೊಬ್ಬನ್ನು ಹೆಸರು ಬಹಿರಂಗಪಡಿಸಿಲ್ಲ. ನಾಲ್ಕು ಆರೋಪಿಗಳು ಹಿಂದಿನ ಕೊಲೆಗಳ ಹಿಂದೆ ಇರುವ ಪಾಕ್, ಐಎಸ್ಐ ಮತ್ತು ಇಟಲಿ, ಕೆನಡಾ ಮತ್ತು ಇಂಗ್ಲೇಡ್ ಗಳ ಲಿಂಕ್ ಇರುವ ಬಗ್ಗೆ ಬಾಯ್ಬಿಬಿಟ್ಟಿದ್ದಾರೆ.
ಪಂಜಾಬ್ ನಲ್ಲಿ ನಡೆದ 6 ಹಿಂದೂ ಮುಖಂಡರ ಕೊಲೆಗಳು
-
ಆರ್ ಎಸ್ ಎಸ್ ಪ್ರಚಾರಕ ರವೀಂದ್ರಕುಮಾರ ಗೋಸಾಯಿ (17 ಅಕ್ಟೋಬರ್ 2017- ಲುದಿಯಾನ)
-
ಆರ್ ಎಸ್ ಎಸ್ ಮುಖಂಡ ಜಗದೀಶ್ ಗಗ್ನೇಜಾ (6 ಆಗಸ್ಟ್ 2016-ಜಲಂಧರ)
-
ಹಿಂದೂ ಸಂಘರ್ಷ ಸೇನೆ ಮುಖಂಡ ವಿಪಿನ್ ಶರ್ಮಾ(30 ಅಕ್ಟೋಬರ್ 2016-ಅಮೃತಸರ್)
-
ಡೇರಾ ಸಚ್ಚಾ ಸೌದಾ ಬೆಂಬಲಿಗ ಸತ್ಪಾಲ್ ಕುಮಾರ ಮತ್ತು ಮಗ ( 27ಫೆಬ್ರವರಿ 2017-ಖನ್ನಾ ಗ್ರಾಮ)
-
ಹಿಂದೂ ತಕ್ತ ಸಂಘಟನೆ ಮುಖಂಡ ಅಮಿತ್ ಶರ್ಮಾ (15 ಜನವರಿ 2017-ಲುದಿಯಾನ
-
ಶಿವಸೇನೆ ಪಂಜಾಬ್ ಕಾರ್ಮಿಕ ಸಂಘಟನೆ ಮುಖ್ಯಸ್ಥ ದುರ್ಗಾದಾಸ ಗುಪ್ತಾ (24 ಏಪ್ರಿಲ್ 2016 ಔಲಾದ ಗ್ರಾಮ)
ಈ ಆರು ಮುಖಂಡರ ಕೊಲೆಯನ್ನು ಒಂದೇ ರೀತಿಯಲ್ಲಿ ಮಾಡಿರುವುದು ತನಿಖೆಗೆ ಇನ್ನಷ್ಟು ಬಲ ನೀಡಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದು. ಅದೇ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಎಲ್ಲ ಕೊಲೆಗಳ ಹಿಂದೆ ಒಂದೇ ನಿಲುವಿನ ಸಂಘಟನಾತ್ಮಕ ತಂತ್ರ ರೂಪಿಸಿದ್ದು ಬಯಲಾಗಿದೆ. ಇದು ತನಿಖೆಗೂ ಸಹಕಾರಿಯಾಗಿದೆ.
ಆರ್ಥಿಕ, ನೈತಿಕ, ರಾಜಕೀಯ ಬಲ ಕುಗ್ಗಿಸುವ ಯತ್ನ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಿಂದೂಪರ ಒಲವಿರುವ ಬಲಿಷ್ಠ ಸರ್ಕಾರ ಆಡಳಿತ ನಡೆಸುತ್ತಿರುವುದು ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಭಾರತದ ವಿರುದ್ಧ ಎದೆಗೆ ಎದೆಕೊಟ್ಟು ಹೋರಾಡುವ ತಾಕತ್ತು ಪಾಕಿಸ್ತಾನಕ್ಕಿಲ್ಲ. ಆದ್ದರಿಂದಲೇ ಹಿಂಬಾಗಿಲ ಮೂಲಕ ಹೇಡಿಗಳಂತೆ ಪಾಕ್ ಐಎಸ್ಐ ಕಾರ್ಯನಿರ್ವಹಿಸುತ್ತಿದ್ದೇಯೇ ಎಂಬ ಅನುಮಾನ ಮೂಡಿದೆ. ಭಾರತವನ್ನು ನೇರವಾಗಿ ಎದುರಿಸಲಾಗದೆ. ದೇಶವಿರೋಧಿ ಸಂಘಟನೆಗಳೊಡನೆ ಕೂಡಿ ರಾಷ್ಟ್ರದ ಬಲ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
Leave A Reply