ಗುಜರಾತ್, ಹಿಮಾಚಲ ಆಯ್ತು, ಇನ್ನು ಮೇಘಾಲಯ, ಮೀಜೋರಾಂನತ್ತ ಮೋದಿ ಚಿತ್ತ!
ದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆ, ರ್ಯಾಲಿ ಮೂಲಕ ಜನರ ಮನವೊಲಿಸಿ ಚುನಾವಣೋತ್ತರ ಸಮೀಕ್ಷೆಗಳೆಲ್ಲವುಗಳಲ್ಲೂ ಸಕಾರಾತ್ಮಕ ಸುದ್ದಿ ಬರುವಂತೆ ಮಾಡಿ, ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಮತ್ತಷ್ಟು ಬಲ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮೇಘಾಲಯ, ಮಿಜೋರಾಂನತ್ತ ಚಿತ್ತ ಹರಿಸಿದ್ದಾರೆ.
ಹೌದು, 2018ರ ಜನವರಿ ಹಾಗೂ ಫೆಬ್ರವರಿಯಲ್ಲಿ ಮೇಘಾಲಯದಲ್ಲಿ ಹಾಗೂ ಇದರ ಬಳಿಕ ಮಿಜೋರಾಂನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮೋದಿ ಶನಿವಾರ ಈ ಎರಡೂ ರಾಜ್ಯಗಳಿಗೆ ತೆರಳಿ, ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿಯವರ ಈ ಭೇಟಿಯಲ್ಲಿ ಹಲವು ಯೋಜನೆಗಳಿಗೆ ಚಾಲನೆ, ಸಭೆ ಹಾಗೂ ರ್ಯಾಲಿ ನಡೆಸಲಿದ್ದಾರೆ. ಮಿಜೋರಾಂ ರಾಜಧಾನಿ 60 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಟ್ಯೂರಿಯಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ ಮಹತ್ತರ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ.
ಅಲ್ಲದೆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಕಚೇರಿ ನಿರ್ಮಾಣದ ಕುರಿತು ಮೋದಿ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಟ್ಟಿನಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಮತ್ತಷ್ಟು ಬಲ ತುಂಬಲು ಮೋದಿ ಎರಡೂ ರಾಜ್ಯಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗದಿದ್ದರೂ, ಪ್ರಚಾರ, ಪಕ್ಷ ಸಂಘಟನೆಗಳಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
Leave A Reply