ಹೊಸ್ತಿಲು ದಾಟಿದಷ್ಟೇ ಸುಲಭವಾಗಿ ಧರ್ಮ ಬದಲಾಯಿಸುವ ಹುಡುಗಿಗೆ ತಾಯಿಯ ನೋವು ಅರ್ಥವಾಗುವುದಿಲ್ಲ!
ಪ್ರಪಂಚದಲ್ಲಿ ನಿಜವಾದ ಪ್ರೀತಿ ಎಂದರೆ ಅದು ತಾಯಿ ಜೀವದ್ದು. ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಯಾಕೆಂದರೆ ಅದು ಅಷ್ಟು ಶುದ್ಧ. ಭಗವಂತನಿಗೆ ಎಲ್ಲಾ ಕಡೆ ಇರಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಆತ ತಾಯಿಯಂದಿರನ್ನು ಸೃಷ್ಟಿಸಿದ ಎನ್ನುವ ಮಾತಿದೆ. ಅಂತಹ ತಾಯಿ ಒಂಭತ್ತು ತಿಂಗಳು ಒಂದು ಜೀವವನ್ನು ಹೊತ್ತು, ಅದು ಗರ್ಭದಲ್ಲಿರುವಾಗಲೇ ಆರೈಕೆ ಮಾಡಿ, ತನಗೆ ಬೇಕೋ ಬೇಡವೋ ಹೊಟ್ಟೆಯಲ್ಲಿರುವ ಮಗುವಿಗಾಗಿ ಎಂದು ಆಹಾರ ಸೇವಿಸಿ, ಕೊನೆಗೆ ನಾರ್ಮಲ್ ಹೆರಿಗೆ ಆಗದೇ ಇದ್ದರೆ ಸಿಸಿರಿಯನ್ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಒಂದು ಜೀವವನ್ನು ಭೂಮಿಗೆ ತರುವ ಪ್ರಕ್ರಿಯೆ ಇದೆಯಲ್ಲ ಅದು ಎಷ್ಟು ನೋವಿನದ್ದು ಎನ್ನುವುದು ಅನುಭವಿಸಿದವರಿಗೆ ಗೊತ್ತು. ವೈದ್ಯಲೋಕದ ವಿಜ್ಞಾನದ ಪ್ರಕಾರ ಹೆರಿಗೆ ನೋವು ಎಂದರೆ ಒಂದೇ ಬಾರಿಗೆ ಎಪ್ಪತ್ತೆಂಟು ಸಾವಿರ ಮೂಳೆಗಳು ಪುಡಿಯಾಗುವಾಗ ಆಗುವ ನೋವಿಗೆ ಸಮ ಎಂದು ಎಲ್ಲೋ ಓದಿದ ನೆನಪು. ಅಷ್ಟು ನೋವನ್ನು ತಿಂದು ಆ ಮಗುವಿನ ಮುಖ ನೋಡುವಾಗ ತಾಯಿ ಎಲ್ಲವನ್ನು ಮರೆತು ಖುಷಿಗೊಳ್ಳುವುದಿದೆಯಲ್ಲ, ಅದು ಮಾತೃತ್ವದ ಪರಮಾವಧಿ.
ಅಂತಹ ತಾಯಿಗೆ ಮಗಳು ಬೆಳೆದು ದೊಡ್ಡವಳಾದ ಮೇಲೆ ಬೇರೆ ಧರ್ಮದ ಹುಡುಗನೊಂದಿಗೆ ಓಡಿ ಹೋದರೆ ಹೇಗಾಗಬೇಡಾ. ಸಣ್ಣವರಿರುವಾಗ ನಮಗೆ ಸಣ್ಣ ಜ್ವರ ಬಂದರೂ ಸಾಕು, ತಾಯಿ ರಾತ್ರಿ ಮಲಗುವುದಿಲ್ಲ. ಚಿಕ್ಕದಾಗಿ ನಾವು ಕೆಮ್ಮಿದರೂ ತಾಯಿ ಎದೆ ಸವರುತ್ತಾ ನಮಗೆ ನಿದ್ರೆ ಬರುವ ತನಕ ಎಚ್ಚರಗೊಂಡೇ ಇರುತ್ತಾಳೆ. ಮಗು ಬೆಳಿಗ್ಗೆ ಮಲಗಿ ರಾತ್ರಿ ಆಡುತ್ತಾ ಕುಳಿತರೆ ತಾಯಿಗೆ ಅದೆಷ್ಟೋ ದಿನ ಜಾಗರಣೆ. ಮಗುವಿಗೆ ಯಾವಾಗ ಹಸಿವಾಗುತ್ತೆ, ಯಾವಾಗ ಬಟ್ಟೆ ಬದಲಾಯಿಸಬೇಕು ಎನ್ನುವುದರಿಂದ ಹಿಡಿದು ಸ್ನಾನ, ಉಚ್ಚೆ, ಆಹಾರ, ಸ್ವಚ್ಚ ಬಟ್ಟೆಗಳು ಎಲ್ಲವನ್ನು ನೋಡುವ ತಾಯಿ ಮಗಳು ದೊಡ್ಡವಳಾದ ಮೇಲೆ ಒಳ್ಳೆಯ ಗಂಡನ ಮನೆ ಸೇರಲಿ ಎಂದು ಬಯಸುವುದು ತಪ್ಪಾ. ಅಷ್ಟಕ್ಕೂ ತಾಯಿ ತನ್ನ ಮಗಳು ಸುಖವಾಗಿರಲಿ ಎಂದು ಕನಸು ಕಂಡರೆ ಅದರಲ್ಲಿ ಅಸಹಜ ಏನಿದೆ. ಮಗಳ ಸಂಸಾರ ಚೆನ್ನಾಗಿದ್ದರೆ ತಾಯಿಗೆ ಏನೂ ಸಿಗುವುದಿಲ್ಲ. ಎಷ್ಟೋ ಕಡೆ ಶ್ರೀಮಂತ ಬೀಗರ ಮನೆಯಲ್ಲಿ ಸೊಸೆಯ ಮಧ್ಯಮ ವರ್ಗದ ತಾಯಂದಿರಿಗೆ ಹೋಗಿ ಬರುವ ಸ್ವಾತಂತ್ರ್ಯ ವೇ ಇರುವುದಿಲ್ಲ. ಆದರೂ ಮಗಳು ಎಲ್ಲಿ ಇದ್ದರೂ ಚೆನ್ನಾಗಿರಲಿ ಎಂದು ಅವರು ಅದನ್ನು ಕೂಡ ಸಹಿಸಿಕೊಂಡಿರುತ್ತಾರೆ. ಆದರೆ ಕಣ್ಣಿನ ಎದುರಿಗೆ ಮಗಳು ಬೇರೆ ಧರ್ಮಕ್ಕೆ ಮತಾಂತರಗೊಂಡಾಗ ತಾಯಿ ಅನುಭವಿಸುವ ನೋವು ಚಿಕ್ಕದಲ್ಲ. ಏಕೆಂದರೆ ಮಗಳು ಒಂದು ಮನೆಯಿಂದ ಬೇರೆ ಮನೆಗೆ ಹೋಗುವ ಪ್ರಕ್ರಿಯೆನೆ ಬೇರೆ. ಮಗಳು ಒಂದು ಧರ್ಮದಿಂದ ಬೇರೆ ಧರ್ಮಕ್ಕೆ ಹೋಗುವ ಪ್ರಕ್ರಿಯೆನೆ ಬೇರೆ.
ಒಂದು ಮನೆಯಿಂದ ಅಥವಾ ಒಂದು ಊರಿನಿಂದ ಬೇರೆ ಮನೆ ಅಥವಾ ಬೇರೆ ಊರಿಗೆ ಹೋಗುವಾಗ ತಾಯಿಯ ಹೃದಯದಿಂದ ಮಗಳು ತನ್ನನ್ನು ಬಿಟ್ಟು ಹೋಗುವ ನೋವಿನ ಹೊರಗೆ ಖುಷಿ, ಸಂಭ್ರಮದ ಲೇಪನ ಇರುತ್ತದೆ. ಆದರೆ ಒಂದು ಧರ್ಮದಿಂದ ಮಗಳು ಬೇರೆ ಧರ್ಮಕ್ಕೆ ಹೋದರೆ ಆಗ ತಾಯಿಗೆ ನೂರು ಈಟಿಗಳಿಂದ ನಿರಂತರವಾಗಿ ಚುಚ್ಚಿದಂತೆ ಆಗುತ್ತಾ ಇರುತ್ತಾರೆ. ಅದಕ್ಕೆ ಕಾರಣ ತಾನು ಕೇಳಿದ, ನೋಡಿದ ಅನುಭವ.
ಹುಡುಗಿಯೊಬ್ಬಳು ಪ್ರೌಢಶಾಲೆಯಿಂದ ಕಾಲೇಜಿನ ಮೆಟ್ಟಿಲು ಹತ್ತುವ ಸಮಯ ಇದೆಯಲ್ಲ, ಅದು ಕೇವಲ ಕಲಿಕೆಯ ಬದಲಾವಣೆ ಅಲ್ಲ. ಅದು ಒಂದು ಕಾಲಘಟ್ಟದ ಬದಲಾವಣೆ ಕೂಡ ಹೌದು. ಒಂದು ಅನುಭವದ ಏರಿತವೂ ಹೌದು. ಒಂದು ಸಂಕುಚಿತ ಮನಸ್ಸು ಅರಳುವ ಸಮಯವೂ ಹೌದು. ನದಿ ಸಮುದ್ರವನ್ನು ಸೇರುವ ಕಾಲವೂ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ದೇಹ, ಮನಸ್ಸು ಸಂಕೋಲೆಯಿಂದ ಬಿಚ್ಚಿ ಸ್ವಚ್ಚಂದವಾಗಿ ಹಾರಲು ರೆಕ್ಕೆಯನ್ನು ಅಗಲಗೊಳಿಸಲು ಸಜ್ಜಾಗುವ ಘಳಿಗೆಯೂ ಹೌದು. ಅಂತಹ ಸಮಯದಲ್ಲಿ ಮನಸ್ಸನ್ನು ಹುಚ್ಚುಕೋತಿಯಂತೆ ಬಿಡದೆ ಕಟ್ಟಿದ ನಾಯಿಯಂತೆ ಇಟ್ಟುಕೊಂಡರೆ ಎಲ್ಲವೂ ಅಂಕೆಯಲ್ಲಿ ಇರುತ್ತವೆ, ಇಲ್ಲದಿದ್ದರೆ ಹಗ್ಗ ಬಿಚ್ಚಿಕೊಂಡ ಹೋರಿಗಳು ಬೇಟೆಗೆ ಹೊರಟಿರುತ್ತವಲ್ಲ, ಅದರ ಕಣ್ಣಿಗೆ ಬಿದ್ದರೆ ರಿಸ್ಕ್.
ಹುಡುಗಿಯೊಬ್ಬಳ ಹದಿನಾರನೇ ವಯಸ್ಸಿನಿಂದ ಇಪ್ಪತ್ತೆರಡನೇ ವಯಸ್ಸಿನ ನಡುವಿನ ಅವಧಿ ಎಂದರೆ ಬಟ್ಟೆಯೊಂದು ಮುಳ್ಳಿನ ಮೇಲೆ ಬೀಳುವ ನೀರವ ಕಾಲ. ಒಮ್ಮೆ ಬಟ್ಟೆ ಮುಳ್ಳಿನ ಮೇಲೆ ಬಿತ್ತಾ, ನಂತರ ಅದನ್ನು ತೆಗೆಯುವ ಪ್ರಕ್ರಿಯೆ ತುಂಬಾ ಕಷ್ಟಕರ. ಅನೇಕ ಸಲ ಬಟ್ಟೆ ತನಗೆ ಗೊತ್ತಿಲ್ಲದೆ ಮುಳ್ಳಿನೊಂದಿಗೆ ಸರಸಕ್ಕೆ ಇಳಿದುಬಿಡುತ್ತದೆ. ಮುಳ್ಳನ್ನು ಅಪ್ಪಿರುತ್ತದೆ. ಮುಳ್ಳು ಇವತ್ತಲ್ಲ ನಾಳೆ ತನ್ನ ಪಾಲಿಗೆ ಕಂಟಕ ಎನ್ನುವುದು ಬಟ್ಟೆಗೆ ಗೊತ್ತಾಗುವುದೇ ಇಲ್ಲ.
ತಾಯಿಯೊಬ್ಬಳು ತನ್ನ ಒಳ್ಳೆಯದ್ದಕ್ಕೆನೆ ಹೇಳುವುದು ಎಂದು ಮಗಳಿಗೆ ಯಾವಾಗ ಅರ್ಥವಾಗುವುದಿಲ್ಲವೋ ಅದು ನಿಜಕ್ಕೂ ಡೇಂಜರ್. ನಿನ್ನೆ ಮೊನ್ನೆ ಗುಂಪಿನಲ್ಲಿ ಕಂಡ ಹುಡುಗನೇ ಶಾರೂಕ್ ಖಾನ್ ತರಹ ಎಂದು ಅವಳಿಗೆ ಅನಿಸಲು ಶುರುವಾಗುತ್ತದೆ. ಅವನ ಉಡುಗೆ ತೊಡುಗೆ, ಶೂ, ಅವನು ನಿಲ್ಲುವ, ನಡೆಯುವ ಶೈಲಿ ಸಲ್ಮಾನ್ ಖಾನ್ ನೆನಪು ತರುತ್ತದೆ. ಕರೀನಾ ಕಪೂರ್ ತನಗಿಂತ ಹದಿನಾರು ವರ್ಷಕ್ಕಿಂತ ದೊಡ್ಡವ ಸೈಫ್ ಆಲಿಖಾನ್ ನನ್ನು ಮದುವೆಯಾಗಿಲ್ಲವಾ ಎಂದು ಮೊಂಡು ವಾದಕ್ಕೆ ಬೀಳುವ ಹುಡುಗಿಯರೂ ಇದ್ದಾರೆ. ಅದಕ್ಕೆ ಸರಿಯಾಗಿ ಅವಳ ಒರಗೆಯ ಗೆಳತಿಯರು ಅವಳಲ್ಲಿ “ತಂದೆ, ತಾಯಿ ಇನ್ನೆಷ್ಟು ವರ್ಷ, ನೀನು ಇನ್ನು ಬದುಕಿ ಬಾಳಬೇಕಾದವಳು, ನಿನ್ನ ಗಂಡ ಯಾರಾಗಿರಬೇಕು ಎಂದು ನೀನೆ ನಿರ್ಧರಿಸು, ನೀನು ದೊಡ್ಡವಳಾಗಿದ್ದಿಯಾ” ಎಂದು ಹೇಳುವಾಗ ಹುಡುಗಿ ತಲೆ ಅಲ್ಲಾಡಿಸಿ ಹೂಂ ಎಂದರೆ ಮುಗಿಯಿತು, ಎದುರಿಗೆ ಹಳ್ಳವೂ ಇದೆ, ಬೀಳಲು ಆಕೆ ತಯಾರಾಗಿದೆ ಎಂದೇ ಅರ್ಥ. ತಾಯಿಗೆ ಬೇರೆ ಕೆಲಸವಿರಲಿಲ್ಲ, ಅದಕ್ಕೆ ನನ್ನನ್ನು ಪ್ರೀತಿಸಿದಳು ಎಂದು ಅಂದುಕೊಳ್ಳುತ್ತೆ ಹುಡುಗಿ. ತಂದೆ ಹಳೆ ಗೊಡ್ಡು ಸಂಪ್ರದಾಯದವನಂತೆ ಕಾಣಿಸುತ್ತಾನೆ. ಅದಕ್ಕೆ ಸರಿಯಾಗಿ ಫಿಜ್ಜಾ, ಬರ್ಗರ್, ಮಲ್ಟಿಫ್ಲೆಕ್ಸ್ ಸಿನೆಮಾಗಳು, ಸೆಂಟ್ ಪರಿಮಳ ಮತ್ತು ನೀನು “ಅದನ್ನು” ಕೂಡ ಕಲಿಯಬೇಕು ಎನ್ನುವಂತಹ ಗೆಳೆತಿಯರು ಸಿಕ್ಕಿದರೆ ಕೊನೆಗೆ ಮನೆಯಲ್ಲಿ ಸೀರೆ ಉಟ್ಟು, ದೊಡ್ಡ ಬಿಂದಿಗೆ ಇಟ್ಟು, ಸೊಂಟದಲ್ಲಿ ಕೊಡಪಾನ ಹಿಡಿದು, ಒಲೆಯಲ್ಲಿ ಅಡುಗೆ ಮಾಡುವ ತಾಯಿ ಎಪ್ಪತ್ತರ ದಶಕದ ಕಪ್ಪು-ಬಿಳುಪು ಸಿನೆಮಾದಂತೆ ಕಾಣುತ್ತಾಳೆ. ಹುಡುಗಿ ಹಾಲಿವುಡ್ ಸಿನೆಮಾ ನೋಡಿ ಬಂದು ಅದನ್ನೇ ವಾಸ್ತವ ಎಂದು ಅಂದುಕೊಳ್ಳುತ್ತಾಳೆ. ಟಿವಿ ಇಟ್ಟರೆ ಝಾಕೀರ್ ನೈಕ್. ಅವಳಿಗೆ ಭಗವತ್ ಗೀತೆ, ತುಳಸಿ ಪೂಜೆಗಿಂತ ಏನೋ ದೊಡ್ಡದು ತನ್ನನ್ನು ಕಾಯುತ್ತಿದೆ ಎಂದು ಅನಿಸುತ್ತದೆ. ಹುಡುಗಿ ಹೊಸ್ತಿಲು ದಾಟಲು ತಯಾರಾಗುತ್ತಾಳೆ.
Leave A Reply