ಸರ್ಕಾರಕ್ಕೆ ಮಾಡೋಕೆ ಬೇರೆ ಕೆಲಸವಿಲ್ಲವೇ?
ಗೌರಿ ಲಂಕೇಶ್ ನಡೆಸುತ್ತಿದ್ದ “ಲಂಕೇಶ್ ಪತ್ರಿಕೆ’ಯನ್ನು ಸರ್ಕಾರದ ವತಿಯಿಂದಲೇ ನಡೆಸುವ ಬಗ್ಗೆ ಯೋಚನೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್್ಮಟ್ಟು ಹೇಳಿದ್ದಾರೆ.
ಸರ್ಕಾರ ಇಂತಹ ಸಂಗತಿಗಳ ಬಗ್ಗೆಲ್ಲ ಯೋಚನೆ ಮಾಡುವ ಅಗತ್ಯವಿದೆಯೇ? ಗೌರಿ ಲಂಕೇಶ್ ನಡೆಸುತ್ತಿದ್ದ ಪತ್ರಿಕೆ ಯಾವ ಸಾಧನೆ ಮಾಡಿದೆ ಎಂದು ಸರ್ಕಾರ ಅದನ್ನು ಮುಂದುವರಿಸಬೇಕು? ಅದೇನು ದೇಶಭಕ್ತ ಅಥವಾ ರಾಜ್ಯಕ್ಕಾಗಿ ತ್ಯಾಗ ಮಾಡಿದ, ದುಡಿದ ಪತ್ರಿಕೆಯೇ? ಭಾಷೆಯ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆ ನೀಡಿದ ಪತ್ರಿಕೆಯೇ? ದೇಶಕ್ಕೆ ಸ್ವಾತಂತ್ರ್ಯ ಕೊ ಡಿಸಲು ಹೋರಾಡಿದ ಪತ್ರಿಕೆಯೇ?
ಅದ್ಯಾವುದೂ ಅಲ್ಲ. ಬದಲಾಗಿ ಭಾಷೆಯನ್ನು ಅತ್ಯಂತ ಕೆಟ್ಟದಾಗಿ ಬಳಸಿದ ಪತ್ರಿಕೆ. ಆ ಪತ್ರಿಕೆಯ ಹೆಡ್್ಲೈನ್್ಗಳನ್ನು ನೋಡಿದರೆ ಯಾರು ಬೇಕಾದರೂ ಆ ಪತ್ರಿಕೆ ಯಾವ ರೀತಿ ಭಾಷೆ ಬಳಸುತ್ತಿತ್ತು ಎಂಬುದನ್ನು ನಿರ್ಧರಿಸಬಹುದು. ಗೌರಿ ಲಂಕೇಶ್ ಅವರ ಪತ್ರಿಕೆಯಲ್ಲಿ ಬಳಕೆಯಾಗುತ್ತಿದ್ದ ಭಾಷೆಯ ಬಗ್ಗೆ ಕೆಲವು ಉದಾಹರಣೆಗಳನ್ನು ನೋಡಿ. ‘ನಕಲಿ ಮೋದಿ ಫೇಕ್ ಡಿಗ್ರಿ’, ‘ಮೋದಿ ಎಂಬ ಹುಚ್ಚವೆಂಕಟ್’, ‘ಬೂಸಿ ಬಸ್ಯ ಮೋದಿ’, ‘ತುಘಲಕ್ ಮೋದಿ’, ‘ಮಂಡ್ಯ: ತಮ್ಮಣ್ಣನ ಬಾಲಕ್ಕೆ ಚೆಲುವಣ್ಣನ ಬೆಂಕಿ’, ‘ರಾಯಣ್ಣನ ಹೆಸರು, ಮನುವಾದಿಗಳ ಬಸಿರು, ‘ಚೆಡ್ಡಿ ಸಂಸದರ ನಖರಾ’, ‘ಚಾಂಡಾಲ ಭಟ್ಟನಿಗೆ ಇನ್ನೆಷ್ಟು ಬಲಿ?’, ‘ಒಂದು ಕೇಸರಿ ಮೊಟ್ಟೆಯ ಕತೆ’ ಹೀಗೆ ಸಾಗುತ್ತವೆ ಶೀರ್ಷಿಕೆಯ ಧಾಟಿ. 2007ರಲ್ಲಿ ಮಂಗಳೂರಿನಲ್ಲಿ ಸುಖಾನಂದ ಶೆಟ್ಟಿ ಕೊಲೆಯಾದಾಗ ‘ಒಬ್ಬ ಕ್ರಿಮಿಯ ಅಂತ್ಯ’ ಎಂದು ಶೀರ್ಷಿಕೆ ನೀಡಲಾಗಿತ್ತು. ಇವೆಲ್ಲ ಜವಾಬ್ದಾರಿಯುತ ಪತ್ರಕರ್ತರು ಬಳಸುವ ಭಾಷೆಯೇ? ಈ ಶಬ್ದಗಳ ಹಿಂದಿರುವುದು ನಿಜವಾದ ಕಾಳಜಿಯೇ? ದ್ವೇಷವೇ?
ಇನ್ನು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ಪತ್ರಿಕೆಯಾ? ಅದೂ ಇಲ್ಲ. ಸಾಮಾಜಿಕ ಜವಾಬ್ದಾರಿ ಬಿಡಿ ಪತ್ರಿಕಾ ಧರ್ಮವನ್ನು ಕೂಡ ಗೌರಿ ಲಂಕೇಶ್ ಹಾಗೂ ಪತ್ರಿಕೆ ಪಾಲಿಸುತ್ತಿರಲಿಲ್ಲ. ಗೌರಿ ಲಂಕೇಶ್ ವಿರುದ್ಧ 60 ಮಾನಹಾನಿ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿವೆ. ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಮಾನಹಾನಿಕರವಾಗಿ ಬರೆದಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಲಯವೇ ಗೌರಿಗೆ ಆರು ತಿಂಗಳ ಜೈಲು ಹಾಗೂ ರು.10,000 ದಂಡ ವಿಧಿಸಿತ್ತು. ಆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಇನ್ನು 58 ಪ್ರಕರಣಗಳು ವಿವಿಧ ಹಂತದಲ್ಲಿದ್ದವು. ಪತ್ರಕರ್ತರ ವಿರುದ್ಧ ಪ್ರಕರಣಗಳು ಇರುತ್ತವೆ. ಆದರೆ ಯಾಕಾಗಿವೆ ಮತ್ತು ಯಾವ ರೀತಿಯ ಭಾಷೆ ಬಳಸಿದ್ದಕ್ಕಾಗಿವೆ ಎಂಬುದು ಮುಖ್ಯವಾಗುತ್ತದೆ.
ಜಾಹೀರಾತಿಲ್ಲದೇ ಪತ್ರಿಕೆ ನಡೆಸುತ್ತಿದ್ದರು ಮತ್ತು ಅವರ ಕೊಲೆಯಾಯಿತು ಎಂಬ ಕಾರಣಕ್ಕೆ ಸರ್ಕಾರ ಪತ್ರಿಕೆ ನಡೆಸಲು ಯೋಚಿಸುತ್ತಿದೆಯೇ? ರವಿ ಬೆಳೆಗೆರೆ ಕೂಡ ಹಾಯ್ ಬೆಂಗಳೂರು ಪತ್ರಿಕೆಯನ್ನು ಇತ್ತೀಚೆಗೆ ನಿಲ್ಲಿಸುವ ಮಾತನಾಡಿದ್ದಾರೆ. ಅವರೂ ಜಾಹೀರಾತಿಲ್ಲದೇ ಪತ್ರಿಕೆ ನಡೆಸುತ್ತಿದ್ದರು. ಹಾಗಿದ್ದರೆ ಸರಕಾರ ಅವರ ಪತ್ರಿಕೆಯನ್ನೂ ನಡೆಸುತ್ತದಾ? ನಾಳೆ ಇನ್ಯಾವುದೋ ಪತ್ರಿಕೆ ಸ್ಥಗಿತಗೊಳ್ಳಬಹುದು. ಆಗಲೂ ಸರ್ಕಾರ ಿದೇ ರೀತಿ ಯೋಚಿಸುತ್ತದಾ? ಅಥವಾ ಕೇವಲ ಎಡಪಂಥೀಯ ಧೋರಣೆ ಹೊಂದಿತ್ತು ಎಂಬ ಕಾರಣಕ್ಕೆ ಲಂಕೇಶ್ ಪತ್ರಿಕೆ ನಡೆಸಲು ಯೋಚಿಸುತ್ತಿದೆಯಾ?
ಸರ್ಕಾರಕ್ಕೆ ಮಾಡಲು ಸಾಕಷ್ಟು ಕೆಲಸಗಳಿವೆ. ಅದನ್ನು ಮಾಡಲಿ. ಈ ಹಿಂದೆ ವಿಧಾನಸಭೆಯಿಂದ ಚಾನೆಲ್ ನಡೆಸಲು ಯೋಚಿಸಲಾಗಿತ್ತು. ಚಾನೆಲ್, ಪತ್ರಿಕೆಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ. ಹೊಸದಾಗಿ ಇಂತಹ ಯೋಚನೆ ಮಾಡುವ ಬದಲು ಸರಕಾರ ಇರುವ ಸಂಸ್ಥೆಗಳನ್ನು, ವ್ಯವಸ್ಥೆಗಳನ್ನು ಸರಿಯಾಗಿ ನಡೆಸಲಿ. ಸರಕಾರಿ ಆಸ್ಪತ್ರೆಗಳನ್ನು, ಬಸ್್ಗಳನ್ನು ಸರಿಯಾಗಿ ನಡೆಸಲಿ. ಅಲ್ಲಿ ಜನರಿಗೆ ಸಿಗುತ್ತಿರುವ ಸೇವೆ ಉತ್ತಮಪಡಿಸಲಿ.
ಸರಕಾರಕ್ಕೆ ಪತ್ರಿಕೆ ನಡೆಸುವ ಅಗತ್ಯ ಇದೆ
ಯೋ ಇಲ್ಲವೊ, ಆದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್್ಮಟ್ಟುಗೆ ಅದರ ಅಗತ್ಯ ಹೆಚ್ಚಿರುವಂತೆ ಕಾಣುತ್ತಿದೆ. ಯಾಕೆಂದರೆ ಮುಖ್ಯಮಂತ್ರಿಗಳು ಅವರ ಸಲಹೆ ಪಡೆಯುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿದ್ದಾರೆ. ಜತೆಗೆ ಸರಕಾರದ ಅವಧಿಯೂ ಮುಗಿಯುತ್ತ ಬಂದಿದೆ. ಕಾಂಗ್ರೆಸ್್ನಿಂದ ದಿನೇಶ್್ಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ. ಅಕಸ್ಮಾತ್ ಮುಂದೆ ಕಾಂಗ್ರೆಸ್ ಸರಕಾರ ಬಂದರೂ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಸುಲಭವಿಲ್ಲ. ಅವರೇ ಮುಖ್ಯಮಂತ್ರಿಯಾದರೂ ಖಂಡಿತ ದಿನೇಶ್್ಗೆ ಮಾಧ್ಯಮ ಸಲಹೆಗಾರರ ಹುದ್ದೆ ಸಿಗುವುದಿಲ್ಲ. ಬಹುಶಃ ಈ ಕಾರಣಕ್ಕೆ ಲಂಕೇಶ್್ ಪತ್ರಿಕೆ ನಡೆಸುವ ಮೂಲಕ ದಿನೇಶ್್ಗೊಂದು ಉದ್ಯೋಗ ದೊರೆಯಬಹುದು. ಇದೇ ಕಾರಣಕ್ಕೆ ಈಗ ಲಂಕೇಶ್ ಪತ್ರಿಕೆ ನಡೆಸುವ ಚಿಂತನೆ ಆರಂಭವಾದಂತೆ ಕಾಣುತ್ತಿದೆ.
ಲಂಕೇಶ್ ಪತ್ರಿಕೆಯನ್ನು ಮುನ್ನಡೆಸುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ನಡೆಸುವುದಿದ್ದರೆ ಅವರೊ ಅಥವಾ ಎಡಪಂಥೀಯ ಬುದ್ಧಿಜೀವಿಗಳೊ ದುಡ್ಡು ಹೂಡಿ ನಡೆಸಲಿ. ಸರಕಾರದ, ಜನರ ದುಡ್ಡಿನಲ್ಲಿ ಪತ್ರಿಕೆ ನಡೆಸುವ ಅಗತ್ಯ ಖಂಡಿತ ಇಲ್ಲ. ದಿನೇಶ್್ ಅಮೀನ್್ಮಟ್ಟುಗೆ ಮಾಡಲು ಕೆಲಸವಿಲ್ಲದಿದ್ದರೂ, ಸರಕಾರಕ್ಕೆ ಮಾಡಲು ಸಾಕಷ್ಟು ಕೆಲಸವಿದೆ.
Leave A Reply